ಚೆನ್ನೈ : ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಸಿಎಸ್ ಕೆ ತಂಡದ ನಾಯಕ ಮಹೇಂದ್ರಸಿಂಗ್ ಧೋನಿಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಅವರ ನಾಯಕತ್ವ, ಬ್ಯಾಟಿಂಗ್, ಕೀಪಿಂಗ್ ಇಷ್ಟಪಡದೆ ಇರುವವರು ಇಲ್ಲವೇ ಇಲ್ಲ ಎನ್ನುವಂತಿದೆ. ಸದ್ಯ ಅವರ ವಿಡಿಯೋವೊಂದು ದಾಖಲೆ ಬರೆದಿದ್ದು, ಇನ್ನೂ ಅವರ ಅಭಿಮಾನಿಗಳು ಅವರನ್ನು ಹಾಗೆಯೇ ಪ್ರೀತಿಸುತ್ತಾರೆ ಎನ್ನುವುದಕ್ಕೆ ಉದಾಹರಣೆಯಾಗಿದೆ.
ಚನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ವಿರುದ್ಧದ ಐಪಿಎಲ್ನ (IPL) 6ನೇ ಪಂದ್ಯದಲ್ಲಿ ಧೋನಿ (MS Dhoni) ಸಿಡಿಸಿದ ಅವಳಿ ಸಿಕ್ಸರ್ಗಳು ಜಿಯೋ ಸಿನಿಮಾದಲ್ಲಿ 1.7 ಕೋಟಿ ವೀಕ್ಷಣೆ ಕಂಡಿದ್ದು, ಹೊಸ ದಾಖಲೆ ನಿರ್ಮಿಸಿದೆ.
ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದ ಧೋನಿ ಆಟವನ್ನು ಜಿಯೋ ಸಿನಿಮಾದಲ್ಲಿ 1.6 ಕೋಟಿ ಮಂದಿ ವೀಕ್ಷಣೆ ಮಾಡಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಜಿಯೋ ಸಿನಿಮಾದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡಿದ್ದ ಪಂದ್ಯ ಇದಾಗಿತ್ತು. ಆದರೆ, ಈಗ ಧೋನಿ ದಾಖಲೆಯನ್ನು ಧೋನಿ ಮುರಿದಿದ್ದಾರೆ.
A treat for the Chennai crowd! 😍@msdhoni is BACK in Chennai & how 💥#TATAIPL | #CSKvLSG
WATCH his incredible two sixes 🔽 pic.twitter.com/YFkOGqsFVT
— IndianPremierLeague (@IPL) April 3, 2023
ಲಕ್ನೋ ವಿರುದ್ಧದ ಪಂದ್ಯದಲ್ಲಿ 20ನೇ ಓವರ್ನ ಮೊದಲ ಎಸೆತಕ್ಕೆ ರವೀಂದ್ರ ಜಡೇಜಾ ಔಟಾದ ಬಳಿಕ ಕ್ರೀಸ್ಗೆ ಆಗಮಿಸಿದ ಧೋನಿ ಎದುರಾಳಿ ತಂಡದ ವೇಗಿ ಮಾರ್ಕ್ವುಡ್ ಎಸೆದ 3 ಎಸೆತಗಳಿಗೆ ಎರಡು ಸಿಕ್ಸರ್ ಬಾರಿಸಿದರು. 148 ಕಿ.ಮೀ ವೇಗವಾಗಿ ಬಂದಿದ್ದ ಬೌಲ್ ನ್ನು 89 ಮೀಟರ್ ದೂರಕ್ಕೆ ತಳ್ಳಿದ್ದರು. ನಂತರದ ಎಸೆತವನ್ನು ಧೋನಿ ಸಿಕ್ಸರ್ಗೆ ಅಟ್ಟುವ ಪ್ರಯತ್ನ ಮಾಡಿದ್ದರು. ಆದರೆ ಈ ಪ್ರಯತ್ನ ವಿಫಲವಾಗಿ ಕ್ಯಾಚ್ ನೀಡಿದ್ದರು. ಸದ್ಯ ಈ ವಿಡಿಯೋವನ್ನು ನೋಡಿ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.








