dhruva sarja
ಪ್ರಸ್ತುತ ಬಹುನಿರೀಕ್ಷಿತ ಪೊಗರು ಸಿನಿಮಾದಲ್ಲಿ ಬ್ಯುಸಿಯಾಗಿರುವ ಧ್ರುವ ಸರ್ಜಾ ಸದ್ಯ ಇತ್ತೀಚೆಗಷ್ಟೇ ತಮ್ಮ ಮುಂದಿನ ಸಿನಿಮಾ ಘೋಷಣೆ ಮಾಡ್ರು. ಮತ್ತೊಮ್ಮೆ ಅದ್ಧೂರಿ ಕಾಂಬೋ ಒಂದಾಗಲಿದೆ ಎಂಬ ಮಾಹಿತಿ ಬಿಟ್ಟುಕೊಟ್ಟಿದ್ರು. ಇದೀಗ ಪೊಗರು ಸಿನಿಮಾ ಕಾಂಬಿನೇಷನ್ ನ ಮತ್ತೊಂದು ಹೊಸ ಸಿನಿಮಾ ಕೂಡ ಅನೌನ್ಸ್ ಆಗಿದೆ. ಇದೀಗ ನಂದಕಿಶೋರ್ ಜೊತೆಗೆ ಸಿನಿಮಾ ಮಾಡುತ್ತಿರುವ ಧ್ರುವ ಇಂದು ಈ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿಸಿದ್ದಾರೆ.
ಅಂದ್ಹಾಗೆ ಇಂದು ದಿವಂಗತ ಚಿರು ಸರ್ಜಾ ಅವರ ಹುಟ್ಟುಹಬ್ಬ. ಹೀಗಾಗಿ ಅಣ್ಣನ ಹುಟ್ಟುಹಬ್ಬದ ದಿನವೇ ಧ್ರುವ ಸರ್ಜಾ ತಮ್ಮ ಮುಂದಿನ ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಸೆನ್ಸಾರ್ ಮಂಡಳಿ ಸೂಚನೆಯಂತೆ “ಗೋದ್ರಾ” ಟೈಟಲ್ ಬದಲಾವಣೆಗೆ ನಿನಾಸಂ ನಿರ್ಧಾರ..!
ನಿರ್ಮಾಪಕ ಉದಯ್ ಮೆಹ್ತಾ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸರಳವಾಗಿ ನಡೆದ ಸ್ಕ್ರಿಪ್ಟ್ ಪೂಜೆ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ, ನಂದಕಿಶೋರ್ ಹಾಗೂ ಉದಯ್ ಮೆಹ್ತಾ ಭಾಗಿಯಾಗಿದ್ದರು.
ಈ ಹಿಂದೆ ಸುದೀಪ್ ನಟಿಸಿದ್ದ ‘ಬಚ್ಚನ್’ ಸಿನಿಮಾ ನಿರ್ಮಿಸಿದ್ದ ಉದಯ್ ಮೆಹ್ತಾ ಅವರು ಧ್ರುವ ಸರ್ಜಾ ಜೊತೆ ಹೊಸ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಸುಮಾರು ನಾಲ್ಕು ವರ್ಷದ ತಯಾರಿ ಹಾಗೂ ಮಾತುಕತೆಯ ಬಳಿಕ ಈಗ ಸಿನಿಮಾ ಆರಂಭವಾಗಿದೆ. ನಂದ ಕಿಶೋರ್ ನಿರ್ದೇಶನದಲ್ಲಿ ‘ಪೊಗರು’ ಸಿನಿಮಾ ತಯಾರಾಗಿದೆ. ಮೊದಲ ಸಿನಿಮಾ ಬಿಡುಗಡೆಗೂ ಮುಂಚೆಯೇ ಧ್ರುವ ಜೊತೆ ಇನ್ನೊಂದು ಚಿತ್ರ ಒಪ್ಪಿಕೊಂಡಿದ್ದಾರೆ ನಿರ್ದೇಶಕ ನಂದ ಕಿಶೋರ್.
dhruva sarja
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








