godra
ಗೋದ್ರಾ ಸಿನಿಮಾದ ಹೆಸರು ಬದಲಿಸಲು ಸೆನ್ಸಾರ್ ಮಂಡಳಿ ಸೂಚನೆ ನೀಡಿದ ಬೆನ್ನಲ್ಲೇ ಶೀರ್ಷಿಕೆ ಬದಲಾವಣೆಗೆ ನಿರ್ಧಾರ ಕೈಗೊಂಡಿದೆ ಚಿತ್ರತಂಡ. ಸತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ನಟನೆಯಲ್ಲಿ ತಯಾರಾಗಿರುವ ಗೋದ್ರಾ ಸಿನಿಮಾದ ಹೆಸರು ಬದಲಿಸುವ ಕುರಿತು ಟ್ವೀಟ್ ಮಾಡಿರುವ ನಟ ಸತೀಶ್ ನೀನಾಸಂ ”ಯಾರ ಭಾವನೆಗಳಿಗು ನೋವುಂಟು ಮಾಡುವ ಉದ್ದೇಶ ನಮಗಿಲ್ಲ, ಹಾಗಾಗಿ ಸೆನ್ಸಾರ್ ಮಂಡಳಿಯ ಅಭಿಪ್ರಾಯದಂತೆ “ಗೋದ್ರಾ” ಟೈಟಲ್ ಬದಲಾಯಿಸಲು ಒಪ್ಪಿದ್ದೇವೆ. ಶೀಘ್ರದಲ್ಲೇ ಹೊಸ ಟೈಟಲ್ ಘೋಷಣೆ… ಪ್ರೀತಿಯೊಂದಿಗೆ…” ಎಂದಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿ ನೋಂದಾಯಿತ ಟೈಟಲ್ ಗೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಸೆನ್ಸಾರ್ ಮಂಡಳಿ ಇದಕ್ಕೂ ಮುಂಚೆ ಸ್ಪಷ್ಟ ಪಡಿಸಿತ್ತು.
ಹಾಸ್ಯದಿಂದಲೇ ಜನರ ಮನಸ್ಸಿಗೆ ಹತ್ತಿರವಾದ ‘ಚಿಕ್ಕಿ’ ಸಿನಿಜರ್ನಿ..!
ಕೆ.ಎಸ್.ನಂದೀಶ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಸತೀಶ್ ನೀನಾಸಂ, ಶ್ರದ್ಧಾ ಜೊತೆ ವಸಿಷ್ಠಸಿಂಹ ಮತ್ತು ರಕ್ಷಾ ಸೋಮಶೇಖರ್ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಾಕೋಬ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ‘ಗೋಧ್ರಾ’ ಎಂದಾಕ್ಷಣ ಕಣ್ಣೆದುರಿಗೆ ಬರುವುದು ಗುಜರಾತ್ನ ಗೋಧ್ರಾ ಹತ್ಯಾಕಾಂಡ, ಆದರೆ ಆ ಗೋಧ್ರಾಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಿರ್ದೇಶಕ ಸತೀಶ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
godra








