ಆಕ್ಷನ್ ಪ್ರಿನ್ಸ್ ಗಾಗಿ ಕನ್ನಡಕ್ಕೆ ಕಮ್ ಬ್ಯಾಕ್ ಮಾಡ್ತಿದ್ದಾರೆ ಪುರಿ ಜಗನ್ನಾಥ್..!
ಕನ್ನಡದಲ್ಲಿ ರೋಗ್ ಸಿನಿಮಾ ಮಾಡಿ ಸಕ್ಸಸ್ ಆಗಿ ಬಳಿಕ ಇಸ್ಮಾರ್ಟ್ ಶಂಕರ್ ಸಿನಿಮಾದ ಮೂಲಕ ತೆಲುಗಿನಲ್ಲಿ ಜನಪ್ರಿಯತೆ ಪಡೆದ ಡೈರೆಕ್ಟರ್ ಪುರಿ ಜಗನ್ನಾಥ್ ಅವರು ‘ಲೈಗರ್’ ಸಿನಿಮಾದಲ್ಲಿ ವಿಜಯ್ ದೇವರಕೊಂಡಗೆ ಆಕ್ಷನ್ ಕಟ್ ಹೇಳಿದ್ದು, ಸಿನಿಮಾ ಚಿತ್ರೀಕರಣ ಮುಗಿದಿದೆ. ಇದೀಗ ಮತ್ತೆ ಕನ್ನಡಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರೆ ಎನ್ನಲಾಗ್ತಿದೆ. ಹೌದು ಕನ್ನಡ ಸಿನಿಮಾವೊಂದರಲ್ಲಿ ಅದ್ರಲ್ಲೂ ಸ್ಟಾರ್ ನಟನಿಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ.
ಹೌದು.. ಇತ್ತೀಚೆಗಷ್ಟೇ ಪೊಗರು ಸಿನಿಮಾ ತೆರೆಕಂಡು ಸಕ್ಸಸ್ ಆಗಿರುವ ಸಂತಸದಲ್ಲಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ. ಇನ್ನೂ ಧ್ರುವ ಸಹ ಈ ಸಿನಿಮಾಗೆ OK ಎಂದಿದ್ದಾರಂತೆ. ಅಧಿಕೃತವಾಗಿ ಘೋಷಣೆಯಾದ ಬಳಿಕವೇ ವದಂತಿಗಳಿಗೆ ತೆರೆಬೀಳಲಿದೆ. ಸದ್ಯ ಧ್ರುವ ಪೊಗರು ನಂತರ ದುಬಾರಿಯಲ್ಲಿ ಬ್ಯುಸಿಯಾಗಿದ್ದಾರೆ.
‘ಯುವರತ್ನ’ ಟ್ರೈಲರ್ ನಲ್ಲಿ ಪಂಚ್ ಡೈಲಾಗ್ ಗಳ ಸುರಿಮಳೆ..!
ಇನ್ನೂ ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಎನ್ನಲಾಗ್ತಿದ್ದು, ನ್ಯೂಸ್ ಪಕ್ಕಾ ಆದಲ್ಲಿ ಧ್ರುವ ಫ್ಯಾನ್ಸ್ ಕುಣಿದು ಕುಪ್ಪಳಿಸಲಿದ್ದಾರೆ. ಯಾಕಂದ್ರೆ ಪುರಿ ಜಗನ್ನಾಥ್ ಅವರ ಸಿನಿಮಾ ಕಥೆ, ಅವರ ಡೈರೆಕ್ಷನ್ ನ ಸಿನಿಮಾ ಒಂದು ವಿಭಿನ್ನ ರೀತಿಯಲ್ಲಿಯೇ ಇರುತ್ತೆ. ಅಂದ್ಹಾಗೆ ಈ ಸಿನಿಮಾ ಕನ್ನಡ, ತೆಲುಗು,ತಮಿಳು, ಮಳಯಾಳಂ ಹಾಗೂ ಹಿಂದಿಯಲ್ಲೂ ರಿಲೀಸ್ ಆಗಲಿದೆ ಎನ್ನಲಾಗಿದೆ.