Bangalore | ಈ ಕಳ್ಳ ಚಿನ್ನಾಭರಣ, ಹಣ ಮುಟ್ಟೋದಿಲ್ಲ
ಪೊಲೀಸ್ ಬಲೆಗೆ ಬಿದ್ದ ಡಿಫರೆಂಟ್ ಕಳ್ಳ!
ಬೆಂಗಳೂರು ನಗರದಲ್ಲಿ ಒಬ್ಬ ಡಿಫರೆಂಟ್ ಕಳ್ಳ
ಈ ಕಳ್ಳ ಚಿನ್ನಾಭರಣ, ಹಣ ಮುಟ್ಟೋದೇ ಇಲ್ಲ
ಕೇವಲ ಮೊಬೈಲ್, ಲ್ಯಾಪ್ ಟಾಪ್ ಕಳ್ಳತನ
ಬೈಯಪ್ಪನಹಳ್ಳಿ ಪೊಲೀಸರಿಂದ ಆರೋಪಿ ಬಂಧನ
ಬೆಂಗಳೂರು : ಮನೆಗೆ ನುಗ್ಗಿ ಕೇಲವ ಮೊಬೈಲ್, ಲ್ಯಾಪ್ ಟಾಪ್ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬೆಂಗಳೂರು ನಗರದ ಬೈಯಪ್ಪನಹಳ್ಳಿ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಗಲ್ಯಾಂಡ್ ಮೂಲದ ತಾಂಗ್ ಸೈನ್ ಬಂಧಿತ ಆರೋಪಿ ಆಗಿದ್ದಾನೆ.
ಸಾಮಾನ್ಯವಾಗಿ ಕಳ್ಳರು, ಚಿನ್ನಾಭರಣ, ಹಣ ಕದ್ದರೆ ತಾಂಗ್ ಸೈನ್ ಅದನ್ನು ಮುಟ್ಟೋದಿಲ್ಲ. ಮನೆಗೆ ನುಗ್ಗಿದರೂ ಒಡವೆ, ಹಣಕ್ಕೆ ಕೈ ಹಾಕದೇ ಕೇವಲ ಮೊಬೈಲ್, ಲ್ಯಾಪ್ ಟಾಪ್ ಮಾತ್ರ ಕಳ್ಳತನ ಮಾಡುತ್ತಾನೆ.
ಹೀಗೆ ಸಾಕಷ್ಟು ಮನೆಗಳಿಗೆ ನುಗ್ಗಿ ಮೊಬೈಲ್ ಗಳನ್ನು ಎಗರಿಸುತ್ತಿದ್ದ ತಾಂಗ್ ಸೈನ್ ಇದೀಗ ಪೊಲೀಸರ ಅಥಿತಿಯಾಗಿದ್ದಾನೆ.
ಸದ್ಯ ಆರೋಪಿಯನ್ನು ಬಂಧಿಸಿರುವ ಬೈಯಪ್ಪನಹಳ್ಳಿ ಪೊಲೀಸರು, ಸುಮಾರು 9 ಲಕ್ಷ ಮೌಲ್ಯದ ಲ್ಯಾಪ್ ಟಾಪ್ ಹಾಗೂ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಜೊತೆಗೆ ವಿಚಾರಣೆ ಮುಂದುವರೆದಿದ್ದಾರೆ.









