Vengsarkar | ಈ ಆಟಗಾರರನ್ನು ಕಡೆಗಣಿಸಿದ್ದು ಯಾಕೆ..?
ಶ್ರೀಲಂಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೆ 18 ಸದಸ್ಯರ ಭಾರತ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ.
ರೋಹಿತ್ ಶರ್ಮಾ ನಾಯಕನಾಗಿ ಮತ್ತು ಜಸ್ಪ್ರೀತ್ ಬುಮ್ರಾ ಉಪನಾಯಕನಾಗಿ, ಪ್ರಮುಖ ಆಟಗಾರರಾದ ರಹಾನೆ, ಪೂಜಾರ, ಇಶಾಂತ್ ಶರ್ಮಾ ಮತ್ತು ಸಹಾ ಅವರನ್ನು ಬಿಟ್ಟು ಹೊಸ ಹುಡುಗರಿಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಕ್ರಿಕೆಟ್ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಫಾರ್ಮ್ ಕೊರತೆಯನ್ನು ಮುಂದಿಟ್ಟುಕೊಂಡು ಹಿರಿಯರನ್ನು ಕೈ ಬಿಟ್ಟಿರುವ ಆಯ್ಕೆ ಸಮಿತಿ, ದೇಶಿ ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ಆಟಗಾರರನ್ನೂ ಕಡೆಗಣಿಸಿರೋದಕ್ಕೆ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ದಿಲೀಪ್ ವೆಂಗ್ ಸರ್ಕಾರ್ ಕಿಡಿಕಾರಿದ್ದಾರೆ.
ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ವಿವೇಚನೆಯಿಂದ ಯೋಚಿಸಿಲ್ಲ. ದೇಶಿಯ ಟೂರ್ನಿಗಳಲ್ಲಿ ರನ್ ಗಳ ಸುರಿಮಳೆಗೈದಿರುವ ರುತುರಾಜ್ ಗಾಯಕ್ವಾಡ್, ಸರ್ಫರಾಜ್ ಖಾನ್ ಅವರನ್ನು ಯಾಕೆ ಕಡೆಗಣಿಸಿದ್ದೀರಾ ಅಂತ ಪ್ರಶ್ನೆ ಮಾಡಿದ್ದಾರೆ.
ರುತುರಾಜ್ ಮತ್ತು ಸರ್ಫರಾಜ್ ಖಾನ್ ಇಬ್ಬರೂ ಟೀಂ ಇಂಡಿಯಾದಲ್ಲಿ ಇರಬೇಕಾದವರು. ಆಯ್ಕೆದಾರರು ಅವರನ್ನು ಆಯ್ಕೆ ಮಾಡದೆ ಅವರ ನೈತಿಕ ಸ್ಥೈರ್ಯ ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ರುತುರಾಜ್ ಕಳೆದ ವರ್ಷ ಐಪಿಎಲ್ನಲ್ಲಿ ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದರು. ನಂತರದ ವಿಜಯ್ ಹಜಾರೆ ಟ್ರೋಫಿ (ನಾಲ್ಕು ಶತಕಗಳೊಂದಿಗೆ 600 ಕ್ಕೂ ಹೆಚ್ಚು ರನ್) ಗಳಿಸಿದ್ದರು.
ಸರ್ಫರಾಜ್ ಬಗ್ಗೆ ಹೇಳುವುದಾದರೆ.. ಮುಸ್ತಾಕ್ ಅಲಿ ಸೇರಿದಂತೆ ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಅದ್ಭುತವಾಗಿ ಮಿಂಚುತ್ತಿದ್ದಾರೆ. ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ 275 ರನ್ ಗಳಿಸಿದ್ದರು.
dilip-vengsarkar sarfaraz-khan-and-ruturaj-gaikwad









