Dinesh Karthik | ದಿನೇಶ್ ಕಾರ್ತಿಕ್ ಇದ್ದಾಗ ಪಂತ್ ಯಾಕೆ ?
ಏಷ್ಯಾಕಪ್ 2022ರಲ್ಲಿ ಟೀಂ ಇಂಡಿಯಾ ಸೂಪರ್ ನಾಲ್ಕರ ಘಟ್ಟದಲ್ಲಿ ಬ್ಯಾಕ್ ಟು ಬ್ಯಾಕ್ ಸೋಲುಗಳೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ.
ನಿಜ ಹೇಳಬೇಕು ಅಂದ್ರೆ ಪಾಕಿಸ್ತಾನ, ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಸೋತಿದೆ ಅಂದ್ರೆ ಅದು ಬೌಲರ್ ಗಳ ವೈಫಲ್ಯ ಮತ್ತು ಕಳಫೆ ಫೀಲ್ಡಿಂಗ್ ನಿಂದಲೇ.
ಅಷ್ಟೆ ಅಲ್ಲ ಆಲ್ ರೌಂಡರ್ ರವೀಂದ್ರ ಜಡೇಜಾ ಅಲಭ್ಯತೆ ಎದ್ದು ಕಾಣುತ್ತಿತ್ತು. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೆಶ್ವರ್ ಪೂಜಾರ ಆಸಕ್ತಿದಾಯಕ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಏಷ್ಯಾಕಪ್ ಟೂರ್ನಿಮೆಂಟ್ ನಲ್ಲಿ ಟೀಂ ಇಂಡಿಯಾಗೆ ಪ್ರಸ್ತುತ ಕಾಂಬಿನೇಷನ್ ವರ್ಕ್ ಔಟ್ ಆಗುತ್ತಿಲ್ಲ. ತಂಡಕ್ಕೆ ಮತ್ತೊಬ್ಬ ಬೌಲಿಂಗ್ ಆಲ್ ರೌಂಡರ್ ಅವಶ್ಯಕ.
ರವೀಂದ್ರ ಜಡೇಜಾ ಸ್ಥಾನದಲ್ಲಿ ಅಕ್ಷರ್ ಪಟೇಲ್ ಅವರನ್ನು ಅಂತಿಮ ಹನ್ನೊಂದರಲ್ಲಿ ತೆಗೆದುಕೊಂಡು ಬಂದರೇ ಚೆನ್ನಾಗಿರುತ್ತದೆ.
ಲೆಗ್ ಸ್ಪಿನ್ ಜೊತೆಗೆ ಬ್ಯಾಟಿಂಗ್ ಕೂಡ ಮಾಡಬಲ್ಲ ಸಮರ್ಥ ಅಕ್ಷರ್ ಪಟೇಲ್, ಈಗಾಗಲೇ ನಾವು ಮುಳುಗಿದ್ದೇವೆ, ಇನ್ನು ಮೇಲಾದ್ರು ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆ ಇದೆ.

ಕನಿಷ್ಠ ಅಫ್ಘಾನಿಸ್ತಾನ ವಿರುದ್ಧವಾದ್ರೂ ಗೆದ್ದರೇ ಜಯದೊಂದಿಗೆ ಟೂರ್ನಿಯನ್ನ ಮುಗಿಸಬಹುದು.
ಇನ್ನು ರಿಷಬ್ ಪಂತ್ ಸ್ಥಾನದಲ್ಲಿ ದಿನೇಶ್ ಕಾರ್ತಿಕ್ ಗೆ ಅವಕಾಶ ನೀಡಲೇಬೇಕು. ಬಹುಶಃ ಟಿ 20 ವಿಶ್ವಕಪ್ ಬಳಿಕ ದಿನೇಶ್ ಕಾರ್ತಿಕ್ ಅಂತರಾಷ್ಟ್ರೀಯ ಕ್ರಿಕೆಟ್ ಆಡುವ ಅವಕಾಶಗಳು ತೀರಾ ಕಡಿಮೆ.
ಹೀಗಾಗಿ ತಂಡದಲ್ಲಿರುವಾಗಲೇ ಅವರಿಗೆ ಅವಕಾಶಗಳನ್ನು ನೀಡುವುದು ಸಮಂಜಸ. ಹಾರ್ದಿಕ್ ಪಾಂಡ್ಯ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದರೂ, ವೇಗದ ಅಲ್ ರೌಂಡರ್ ಅನ್ನು ಎಲ್ಲಾ ಸಂದರ್ಭಗಳಲ್ಲಿ ಪೂರ್ತಿ ಕೋಟಾ ಬೌಲಿಂಗ್ ಮಾಡಿಸಬಾರದು.
ಇನ್ನು ಆರರಿಂದ 15 ಓವರ್ ಗಳ ನಡುವೆ ತಂಡ ಸರಿಯಾಗಿ ಬ್ಯಾಟಿಂಗ್ ಮಾಡುತ್ತಿಲ್ಲ. ಮುಖ್ಯವಾಗಿ ಮಿಡಲ್ ಓವರ್ ಗಳಲ್ಲಿ ತುಂಬಾ ವಿಕೆಟ್ ಗಳು ಕಳೆದುಕೊಳ್ಳುತ್ತಿದೆ.
ಇನ್ನು ಸ್ಲಾಗ್ ಓವರ್ ಗಳಲ್ಲಿ ಸರಿಯಾದ ಬ್ಯಾಟರ್ ಗಳ ಕೊರತೆ ಇದೆ. ಹೀಗಾಗಿ ಅದಕ್ಕೆ ಪರಿಹಾರ ಹುಡುಕುವ ಅವಶ್ಯಕತೆ ಇದೆ ಎಂದು ಚೇತೇಶ್ವರ ಪೂಜಾರ ಅಭಿಪ್ರಾಯಪಟ್ಟಿದ್ದಾರೆ.