ಆಸ್ಟ್ರೇಲಿಯಾ ತಂಡದ ಆಟಗಾರ ಡೇವಿಡ್ ವಾರ್ನರ್ ಗೆ ಭಾರತೀಯ ಹಾಡುಗಳೆಂದರೆ ತುಂಬಾ ಇಷ್ಟ. ಅವರು ಆಗಾಗ ಮೈದಾನದಲ್ಲಿ ಸ್ಟೆಪ್ ಹಾಕುವುದು ಕೂಡ ಇದಕ್ಕೆ ಸಾಕ್ಷಿ. ಸದ್ಯ ರಾಜಮೌಳಿ ನಿರ್ದೇಶನದಲ್ಲಿ ನಟಿಸಿದ್ದಾರೆ.
ಐಪಿಎಲ್ ಸಂದರ್ಭದಲ್ಲಿ ಕ್ರೆಡ್ ಸಂಸ್ಥೆಯು ಹಲವು ಜಾಹೀರಾತು ಮಾಡುತ್ತದೆ. ಈ ಬಾರಿ ಈ ಸಂಸ್ಥೆ ಯುಪಿಐನ ಜಾಹೀರಾತು ಮಾಡಿದೆ. ಕ್ರೆಡ್ ಯುಪಿಐ ಮಾಡಿದರೆ ಸಾಕಷ್ಟು ಆಫರ್ ಸಿಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈ ಜಾಹೀರಾತಿನಲ್ಲಿ ರಾಜಮೌಳಿ ಹಾಗೂ ವಾರ್ನರ್ ಕಾಣಿಸಿಕೊಂಡಿದ್ದಾರೆ.
ಜಾಹೀರಾತಿನಲ್ಲಿ ರಾಜಮೌಳಿ, ಡೇವಿಡ್ ವಾರ್ನರ್ ಗೆ ಕರೆ ಮಾಡುತ್ತಾರೆ. ನಿಮ್ಮ ಮ್ಯಾಚ್ ಟಿಕೆಟ್ ಮೇಲೆ ಡಿಸ್ಕೌಂಟ್ ಸಿಗುತ್ತದೆಯೇ ಎಂದು ಕೇಳುತ್ತಾರೆ.
ಕ್ರೆಡ್ ಯುಪಿಐ ಇದ್ದರೆ ಡಿಸ್ಕೌಂಟ್ ಸಿಗುತ್ತದೆ. ಸಾಮಾನ್ಯ ಯಪಿಐನಲ್ಲಿ ಆಫರ್ ಬೇಕು ಎಂದರೆ ನೀವು ನನಗೆ ಒಂದು ಫೇವರ್ ಮಾಡಬೇಕು ಎನ್ನುತ್ತಾರೆ.
ಆಗ ವಾರ್ನರ್ ಗೆ ನಿರ್ದೇಶನ ಮಾಡಿ ರಾಜಮೌಳಿ ಸುಸ್ತಾಗುತ್ತಾರೆ. ವಾರ್ನರ್ ಕುದುರೆ ಬದಲು ಕಾಂಗರೂ ಕೇಳುತ್ತಾರೆ. ಕೊನೆಗೆ ಕ್ರೆಡ್ ಯುಪಿಐಗೆ ತಾವು ಅಪ್ಗ್ರೇಡ್ ಮಾಡಿಕೊಳ್ಳುತ್ತೇನೆ ಎನ್ನುತ್ತಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ. ಜಾಹೀರಾತು ಕಂಡು ಅಭಿಮಾನಿಗಳು ತುಂಬಾ ಖುಷಿ ಪಟ್ಟಿದ್ದಾರೆ.