ದಿಶಾ ರವಿ ಬಂಧನಕ್ಕೆ ಪಾಕ್ ಆಕ್ರೋಶ – ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿದೆ : ಇಮ್ರಾನ್..!
ನವದೆಹಲಿ: ಗ್ರೆಟಾ ಥನ್ ಬರ್ಗ್ ರೈತರ ಪ್ರತಿಭಟನೆಯ ರೂಪುರೇಶೆಗಳ ಕುರಿತಾದ ಟೂಲ್ ಕಿಟ್ ಶೇರ್ ಮಾಡಿದ್ದ ಪ್ರಕರಣ ಸಂಬಂಧಿಸಿ ಬೆಂಗಳೂರಿನ ಪರಿಸರ ವಾದಿ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಟೂಲ್ ಕಿಟ್ ಕೆಲ ಸಾಲುಗಳನ್ನು ಎಡಿಟ್ ಮಾಡಿಕೊಟ್ಟಿದ್ದಾಗಿ ಸ್ವತಃ ದಿಶಾ ಒಪ್ಪಿಕೊಂಡಿದ್ದಾಳೆ. ಇತ್ತ ಈಕೆಯ ಬಂಧನವನ್ನ ಖಂಡಿಸಿ ರಾಷ್ಟ್ರದ ಪ್ರತಿಪಕ್ಷಗಳು, ರಾಜಕೀಯ ಮುಖಂಡರು, ಸೇರಿ ಹಲವರು ಕೇಂದ್ರದ ವಿರುದ್ಧ ಪ್ರತಿಬಟನೆ ನಡೆಸುತ್ತಿದ್ದಾರೆ.
BPL ಕಾರ್ಡುದಾರರಿಗೆ ಬಿಗ್ ರಿಲೀಫ್ : ಬೈಕ್, ಟಿವಿ, ಫ್ರಿಡ್ಜ್ ಇದ್ರೂ ರದ್ದಾಗಲ್ಲ ನಿಮ್ಮ ರೇಷನ್ ಕಾರ್ಡ್
ದೇಶ ವಿದೇಶಗಳಲ್ಲಿ ದಿಶಾ ಪರ ವಿರೋಧದ ಹೋರಾಟಗಳು ಆರಂಭವಾಗಿವೆ. ಆದ್ರೆ ಈ ವಿಚಾರವಾಗಿ ಇದೀಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡ ಮಾತನಾಡಿದ್ದು, ನಮ್ಮ ರಾಷ್ಟ್ರದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿದ್ದಾರೆ. ಮೋದಿ ಮತ್ತು RSSಗೆ ಅವರ ವಿರುದ್ಧ ಮಾತನಾಡುವವರನ್ನು ಬಾಯಿ ಮುಚ್ಚಿಸುವದೇ ನಿಮ್ಮ ಕೆಲಸ. ಇದೀಗ ಟ್ವಿಟ್ಟರ್ ಟೂಲ್ ಕಿಟ್ ಪ್ರಕರಣದಲ್ಲಿ ದಿಶಾ ರವಿಯನ್ನು ಅದೇ ರೀತಿ ಬಾಯಿ ಮುಚ್ಚಿಸುವ ಸಲುವಾಗಿ ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಆಡಳಿತ ಪಕ್ಷ ಟ್ವಿಟ್ಟರ್ ನಲ್ಲಿ ದೂರಿದೆ.
ಭಾರತೀಯ ಕ್ರಿಕೆಟ್ ನ ಆಧುನಿಕ ಏಕಲವ್ಯ ಖ್ರಿವಿಟ್ಸೊ ಕೆನ್ಸೆ..!
ರೈತರನ್ನು ಕೆರಳಿಸುವ ಉದ್ದೇಶದಿಂದ ಟೂಲ್ಕಿಟ್ ಬಿಡುಗಡೆ ಮಾಡಲಾಗಿತ್ತು. ಟೂಲ್ಕಿಟ್ ಸೃಷ್ಠಿಕರ್ತರ ಹಿಂದೆ ಬಿದ್ದ ದೆಹಲಿ ಪೊಲೀಸರು ಬೆಂಗಳೂರಿನ 21 ವರ್ಷದ ಯುವತಿ ದಿಶಾಳನ್ನು ಶನಿವಾರದಂದು ಬಂಧಿಸಿ ದೆಹಲಿಗೆ ಕರೆದೊಯ್ದಿದ್ದಾರೆ. ಅದೇ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ವಕೀಲೆ ನಿಕಿತಾ ಹಾಗೂ ಇನ್ನೊಬ್ಬ ಕಾರ್ಯಕರ್ತನಿಗೂ ಜಾಮೀನು ರಹಿತ ವಾರಂಟ್ ನೀಡಲಾಗಿದೆ.