ADVERTISEMENT
Tuesday, August 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ವಿಮಾನದ ಮೂಲಕ ಜೈವಿಕ ಸೋಂಕು ನಿವಾರಕ ಸಿಂಪಡಣೆ – ಪ್ರಾಯೋಗಿಕ ಕಾರ್ಯಾಚರಣೆಗೆ ಚಾಲನೆ

Shwetha by Shwetha
May 30, 2021
in Newsbeat, State, ನ್ಯೂಸ್ ಬೀಟ್, ರಾಜ್ಯ
Disinfectant Spray
Share on FacebookShare on TwitterShare on WhatsappShare on Telegram

ವಿಮಾನದ ಮೂಲಕ ಜೈವಿಕ ಸೋಂಕು ನಿವಾರಕ ಸಿಂಪಡಣೆ – ಪ್ರಾಯೋಗಿಕ ಕಾರ್ಯಾಚರಣೆಗೆ ಚಾಲನೆ

ಬೆಂಗಳೂರು ನಗರದಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗವನ್ನು ಹತೋಟಿಗೆ ತರುವ ಉದ್ದೇಶದಿಂದ ವಿಮಾನದ ಮೂಲಕ ಜೈವಿಕ ಸೋಂಕು ನಿವಾರಕ ಸಿಂಪಡಣೆಯ ಪ್ರಾಯೋಗಿಕ ಕಾರ್ಯಾಚರಣೆಗೆ
ಶನಿವಾರ ಚಾಲನೆ ನೀಡಲಾಯಿತು.
ಕಂದಾಯ ಸಚಿವರಾದ ಆರ್‌ ಅಶೋಕ್ ಏರಿಯಲ್‌ವರ್ಕ್ಸ್‌ ಏರೋ ಎಲ್‌ಎಲ್‌ಪಿ ಸಂಸ್ಥೆಯ ಪ್ರಾಯೋಗಿಕ ಕಾರ್ಯಾಚರಣೆ ಯೋಜನೆಗೆ ಮೇ 29ರಂದು ‌ ಬೆಂಗಳೂರಿನ ಜಕ್ಕೂರು ಏರೋಡ್ರೋಮ್‌ ನಿಂದ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಶ್ರೀ ರಾಕೇಶ್‌ ಸಿಂಗ್‌, ಬಿಡಿಎ ಅಧ್ಯಕ್ಷ ಎಸ್‌ ಆರ್‌ ವಿಶ್ವನಾಥ್‌, ಕ್ಯಾಪ್ಟನ್‌ ನಾಗೇಶ್‌ ಪಾಲ್ಗೊಂಡಿದ್ದರು.
Disinfectant Spray
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕಂದಾಯ ಸಚಿವ ಆರ್‌ ಅಶೋಕ್‌, ಕೊರೋನಾ ಸೋಂಕಿನ ಹತೋಟಿಗೆ ರಾಜ್ಯ ಸರಕಾರದ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೇ ಮೊದಲ ಬಾರಿಗೆ ವಿಮಾನದ ಮೂಲಕ ಜೈವಿಕ ಸೋಂಕು ನಿವಾರಕವನ್ನು ಸಿಂಡಪಣೆ ಮಾಡುವ ಕಾರ್ಯಾಚರಣೆಯನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಬೆಂಗಳೂರು ನಗರದ ಜನನಿಬಿಡ ಪ್ರದೇಶಗಳಲ್ಲಿ ಏರಿಯಲ್‌ವರ್ಕ್ಸ್‌ ಏರೋ ಎಲ್‌ಎಲ್‌ಪಿ ಸಂಸ್ಥೆ ಮೂರು ದಿನಗಳ ಕಾಲ ವಿಮಾನದ ಮೂಲಕ ಸಿಂಪಡಣೆ ಮಾಡಲಿದೆ ಎಂದು ಹೇಳಿದರು.

Related posts

ತಮಿಳುನಾಡಿನಲ್ಲಿ ಮಹತ್ವದ ಘೋಷಣೆ; ಮಹಿಳೆಯರಿಗೆ ಉಚಿತ ಬಸ್, ಬಡ ಕುಟುಂಬಗಳಿಗೆ 3 ಉಚಿತ LPG ಸಿಲಿಂಡರ್

ತಮಿಳುನಾಡಿನಲ್ಲಿ ಮಹತ್ವದ ಘೋಷಣೆ; ಮಹಿಳೆಯರಿಗೆ ಉಚಿತ ಬಸ್, ಬಡ ಕುಟುಂಬಗಳಿಗೆ 3 ಉಚಿತ LPG ಸಿಲಿಂಡರ್

August 25, 2026
ರಾಹುಲ್ ಗಾಂಧಿ ಈ ದೇಶದಲ್ಲಿರಲು ನಾಲಾಯಕ್- ನಕ್ಸಲಿಸಂ ಹೊಸಕಿ ಹಾಕಿದ ಅಮಿತ್ ಶಾ ಟೀಕಿಸಲು ರಾಹುಲ್‌ಗೆ ಯೋಗ್ಯತೆ ಇಲ್ಲ: 70 ವರ್ಷದ ಕಾಂಗ್ರೆಸ್ ಪಾಪವನ್ನು ತೊಳೆದಿದೆ ಬಿಜೆಪಿ- ರಾಹುಲ್‌ಗೆ ವಿ.ಸೋಮಣ್ಣ ತಿರುಗೇಟು.

ರಾಹುಲ್ ಗಾಂಧಿ ಈ ದೇಶದಲ್ಲಿರಲು ನಾಲಾಯಕ್- ನಕ್ಸಲಿಸಂ ಹೊಸಕಿ ಹಾಕಿದ ಅಮಿತ್ ಶಾ ಟೀಕಿಸಲು ರಾಹುಲ್‌ಗೆ ಯೋಗ್ಯತೆ ಇಲ್ಲ: 70 ವರ್ಷದ ಕಾಂಗ್ರೆಸ್ ಪಾಪವನ್ನು ತೊಳೆದಿದೆ ಬಿಜೆಪಿ- ರಾಹುಲ್‌ಗೆ ವಿ.ಸೋಮಣ್ಣ ತಿರುಗೇಟು.

August 25, 2026

ಜೈವಿಕ ಸೋಂಕು ನಿವಾರಕವನ್ನು ಸಿಂಪಡನೆ ಮಾಡುವ ಕಾರ್ಯ ಸಫಲವಾದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರದೇಶಗಳಲ್ಲಿ ಈ ಕಾರ್ಯಾಚರಣೆಯನ್ನು ಮುಂದುವರೆಸಲಾಗುವುದು. ಸೋಮವಾರದಿಂದ ನಗರದ ಶಿವಾಜಿನಗರ, ಕೆ ಆರ್‌ ಮಾರುಕಟ್ಟೆ ಪ್ರದೇಶಗಳಲ್ಲಿ ಸೋಂಕು ನಿವಾರಕ ಸಿಂಪಡನೆ ಮಾಡಲಾಗುವುದು ಎಂದು ಹೇಳಿದರು.

ಏರಿಯಲ್‌ವರ್ಕ್ಸ್‌ ಏರೋ ಎಲ್‌ಎಲ್‌ಪಿ ಸಂಸ್ಥೆಯ ಮುಖ್ಯಸ್ಥರಾದ ಕ್ಯಾಪ್ಟನ್‌ ಮುರಳಿ ರಾಮಕೃಷ್ಣನ್‌ ಮಾತನಾಡಿ, ಬೆಂಗಳೂರು ನಗರದಲ್ಲಿ ಈ ಕಾರ್ಯಚರಣೆಯನ್ನು ಅಮೇರಿಕಾ ಹಾಗೂ ಆಫ್ರಿಕಾ ದೇಶಗಳಲ್ಲಿ ವೈಮಾನಿಕ ಜೈವಿಕ ಸೋಂಕು ನಿವಾರಣೆ ಸಿಂಪಡಣಾ ಕಾರ್ಯದಲ್ಲಿ ವಿಶೇಷ ಪರಿಣಿತಿಯನ್ನು ಪಡೆದಿರುವ ತಂಡ ಪ್ರಾಯೋಗಿಕವಾಗಿ ನಡೆಸಲಿದೆ.

ಮೂರು ದಿನಗಳ ಕಾಲ ಬೆಂಗಳೂರಿನ ಜನನಿಬಿಡ ಪ್ರದೇಶದಲ್ಲಿ ಜೈವಿಕ ಸೋಂಕು ನಿವಾರಣೆ ಸಿಂಪಡಣಾ ಕಾರ್ಯವನ್ನು ನಡೆಸಲಾಗುವುದು. ಸೋಂಕು ನಿವಾರಣ ದ್ರಾವಣ ಸಿಂಪಡಿಸುವ ಮೂಲಕ ಗಾಳಿಯಲ್ಲಿರುವ ಕೋವಿಡ್‌ ವೈರಾಣುವನ್ನು ಸಾಯಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಸಂಸ್ಥೆ ಸಿದ್ದಗೊಳಿಸಿದೆ. ಸೂಕ್ಷ್ಮ ಮೈಕ್ರಾನ್‌ ಕಣಗಳ ಸಾಂದ್ರತೆಯಲ್ಲಿರುವ ಜೈವಿಕ ಸೋಂಕು ನಿವಾರಣಾ ದ್ರಾವಣ ಗಾಳಿಯಲ್ಲಿ ತೇಲಾಡುತ್ತಿರುವ ಬ್ಯಾಕ್ಟೀರಿಯಾ ಹಾಗೂ ವೈರಾಣುಗಳನ್ನು ನಾಶಮಾಡಲಿದೆ. ಮೂರು ದಿನಗಳ ಕಾಲ ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ಈ ವೈಮಾನಿಕ ಸಿಂಪಡಣೆಯನ್ನು ಮಾಡಲು ಸರಕಾರದ ಸಂಸ್ಥೆಗಳಿಂದ ಅಗತ್ಯ ಅನುಮತಿಗಳನ್ನು ಏರಿಯಲ್‌ವರ್ಕ್ಸ್‌ ಏರೋ ಎಲ್‌ಎಲ್‌ಪಿ ಸಂಸ್ಥೆ ಈಗಾಗಲೇ ಪಡೆದುಕೊಂಡಿದೆ ಎಂದು ಹೇಳಿದರು.

300 ಲೀಟರ್‌ಗಳಷ್ಟು ಸೋಂಕು ನಿವಾರಣಾ ದ್ರಾವಣವನ್ನು ಹೊತ್ತೊಯ್ಯಬಲ್ಲ ಅಮೇರಿಕನ್‌ ಚಾಂಫಿಯನ್‌ ಸ್ಕೌಟ್‌ ವಿಮಾನ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿ ಒಂದು ಗಂಟೆಯಲ್ಲಿ 300 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಸಿಂಪಡಣೆ ಮಾಡಲಿದೆ. ಈ ಕಾರ್ಯಕ್ಕಾಗಿ ಅದು ಯುಎಲ್‌ವಿ (ULV) ಸ್ಪ್ರೇಯರ್‌ ಮೂಲಕ ಸಿಪಿ ನೋಜಲ್‌ (CP Nozzles) ಗಳನ್ನು ಬಳಸಿ 100 (Below 100 Microns) ಮೈಕ್ರಾನ್‌ಗಳಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಸಿಂಪಡಣೆ ಮಾಡಲಿದೆ ಎಂದು ಅವರು ಹೇಳಿದರು.
Disinfectant Spray

ಈ ಸಿಂಪಡಣಾ ಕಾರ್ಯದಲ್ಲಿ ಎರಡು ರೀತಿಯ ಜೈವಿಕ ಸೋಂಕು ನಿವಾರಕ ದ್ರಾವಣಗಳನ್ನು ಬಳಸಲಾಗುತ್ತದೆ.

1. ಏರ್‌ಲೆನ್ಸ್‌ ಮೈನಸ್‌ ಕೊರೋನಾ (Airlens Minus Corona): ಇದು ರಾಸಾಯನಿಕ ರಹಿತ ಮಾನವ ಸ್ನೇಹೀ ಹಾಗೂ ಪರಿಣಾಮಕಾರಿಯಾದ ಸ್ಯಾನಿಟೈಸೇಷನ್‌ ಸಿಸ್ಟಮ್‌ ಆಗಿದೆ. ಕೇವಲ ನಲ್ಲಿಯ ನೀರು ಮತ್ತು ವಿದ್ಯುತ್‌ಶಕ್ತಿಯನ್ನು ಬಳಸಿಕೊಂಡು ಈ ಸೋಂಕು ನಿವಾರಣಾ ದ್ರಾವಣವನ್ನು ತಯಾರಿಸಿ ಸಾರ್ವಜನಿಕ ಸ್ಥಳಗಳು, ಕಚೇರಿಗಳು, ಆಸ್ಪತ್ರೆಗಳು ಮತ್ತು ಮನೆಗಳಲ್ಲಿ ಬಳಸಬಹುದಾಗಿದೆ. ಪೆರ್‌ಸಾಪಿಎನ್‌ ಇನ್ನೊವೇಷನ್ಸ್‌ (PerSapien Innovations) ಸಂಸ್ಥೆಯಿಂದ ಕಂಡುಹಿಡಿಯಲಾಗಿರುವ ಈ ನೂತನ ತಂತ್ರಜ್ಞಾನವನ್ನು, ಸ್ಟಾನ್‌ಫೋರ್ಡ್‌ ಯೂನಿವರ್ಸಿಟಿ, ಐಐಟಿ ಮತ್ತು ಎಐಐಎಂಎಸ್‌ (IITS & AIIMS) ನಿಂದ ಇಂಜಿನೀಯರ್‌ಗಳು ಮತ್ತು ವಿಜ್ಞಾನಿಗಳು ತಂಡ ಪರೀಕ್ಷಿಸಿದ್ದು ಐಸಿಎಂಆರ್‌ (ICMR) ನಿಂದ ಧೃಢೀಕೃತಗೊಳಿಸಲ್ಪಟ್ಟಿದೆ. ಈ ನೂತನ ತಂತ್ರಜ್ಞಾನವು ವೈರಾಣುಗಳು, ಬ್ಯಾಕ್ಟೀರಿಯಾ ಮತ್ತು ಇನ್ನಿತರ ಪ್ಯಾಥೋಜೀನ್ಸ್‌ಗಳ ವಿರುದ್ದ ಬಹಳ ಸುರಕ್ಷಿತ, ಒಳ್ಳೆಯ ಮತ್ತು ಅತ್ಯಂತ ಪರಿಣಾಮಕಾರಿಯಾಗಿದೆ.

೨. ಶುಗಾರಧಾನ ಜೈವಿಕ ಆಂಟಿಮೈಕ್ರೋಬಿಯಲ್‌ ಕಾನ್ಸನ್‌ಟ್ರೇಟ್‌(Sugaradhana Organic Antimicrobial concentrate): ಈ ಸೋಂಕು ನಿವಾರಕ ದ್ರಾವಣವನ್ನು ನಮ್ಮ ಪ್ರಾಚೀನ ಆರೋಗ್ಯ ಪದ್ದತಿಯಾದ ಆಯುರ್ವೇದದ ಅಂಶಗಳನ್ನು ಬಳಸಿಕೊಂಡು ತಯಾರಿಸಲಾಗಿದೆ. ಇದು ಲ್ಯಾಬ್‌ಗಳಲ್ಲಿ ಮತ್ತು ಹೊರಾಂಗಣಗಳಲ್ಲಿ ಬ್ಯಾಕ್ಟೀರಿಯಾ, ಫಂಗಸ್‌ ಮತ್ತು ವೈರಾಣುಗಳ ವಿರುದ್ದ ಪರಿಣಾಕಾರಿಯಾಗಿ ಕೆಲಸ ಮಾಡುತ್ತದೆ. ಈ ಜೈವಿಕ ಸೋಂಕು ನಿವಾರಣಾ ದ್ರಾವಣವು ಚರ್ಮದ ಮೇಲೆ ಬಿದ್ದರೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಮತ್ತು ಇದು ಶೇಕಡಾ 100 ರಷ್ಟು ಸುರಕ್ಷಿತವಾಗಿದೆ. ಇದು ಗಾಳಿಯಲ್ಲಿ ಮಾಲಿನ್ಯ ಹರಡುವುದನ್ನ ಕಡಿಮೆ ಮಾಡುತ್ತದೆ ಮತ್ತು ಸಿಂಪಡಣೆ ಮಾಡಿರುವ ಪ್ರದೇಶದಲ್ಲಿನ ಕೊರೋನಾ ವೈರಾಣುವನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ದ್ರಾವಣವನ್ನು ಡಾ ಕಾರ್ತಿಕ್‌ ನಾರಾಯಣನ್‌ ಅವರು ನಿರ್ಮಿಸಿದ್ದಾರೆ.

ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ತಾಂತ್ರಿಕ ತಂಡ ಈ ಪ್ರಾಯೋಗಿಕ ಯೋಜನೆಯ ಕಾರ್ಯದ ಮೇಲುಸ್ತುವಾರಿ ವಹಿಸಲಿದೆ. ಮೂರು ದಿನಗಳ ಪ್ರಾಯೋಗಿಕ ಕಾರ್ಯಾಚರಣೆಯ ನಂತರ ಅದರ ಪ್ರಯೋಜನ ಹಾಗೂ ಪರಿಣಾಮಗಳು ತಿಳಿಯಲಿದೆ ಎಂದು ಏರಿಯಲ್‌ ವರ್ಕ್ಸ್‌ ಏರೋ ಎಲ್‌ಎಲ್‌ಪಿಯ ಮುಖ್ಯಸ್ಥರಾದ ಮುರಳಿ ರಾಮಕೃಷ್ಣ ತಿಳಿಸಿದ್ದಾರೆ. ಪ್ರಾಯೋಗಿಕ ಕಾರ್ಯಾಚರಣೆಯ ಸಂಧರ್ಭದಲ್ಲಿ ಪ್ರಾತ್ಯಕ್ಷಿಕೆಯನ್ನು ತೋರಿಸಲಾಗಿದೆ.
wearing masks

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ‌ಕುಟುಂಬದ ಆರೋಗ್ಯ ನಮ್ಮ ‌ಕೈಯಲ್ಲಿದೆ. ಇದು ‌ಸಾಕ್ಷಾಟಿವಿ ಕಳಕಳಿ.

ವಿಟಮಿನ್ ಬಿ 7 ಕೊರತೆಯಿಂದ ಯಾವ ಸಮಸ್ಯೆಗಳು ಸಂಭವಿಸಬಹುದು ?#Saakshatv #healthtips #VitaminB7 https://t.co/bnaep0xwMN

— Saaksha TV (@SaakshaTv) May 27, 2021

ಮದ್ದೂರು ವಡೆ#Saakshatv #cookingrecipe #madduruvade https://t.co/d6x7BrV5CS

— Saaksha TV (@SaakshaTv) May 27, 2021

ಉಡುಪಿ – ಕೋರ್ಟ್ ಮೆಟ್ಟಿಲೇರಿದ ಅಪ್ರಾಪ್ತ ಬಾಲಕನಿಗೆ ಸನ್ಯಾಸ ದೀಕ್ಷೆ#Udupi #Shiroormutt https://t.co/0e2wwvp7Wk

— Saaksha TV (@SaakshaTv) May 29, 2021

ಕ್ಯಾಬೇಜ್ ಮಂಚೂರಿ#Saakshatv #cookingrecipe #cabbage #Manchurian https://t.co/RmtQQM4qR2

— Saaksha TV (@SaakshaTv) May 26, 2021

ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಕೊರೋನಾ ವೈರಸ್ ಅಪಾಯವನ್ನು ಕಡಿಮೆ ಮಾಡುವುದು ಹೇಗೆ ?#coronavirus https://t.co/sxFtepvaLF

— Saaksha TV (@SaakshaTv) May 26, 2021

#Disinfectant #Spray #coronavirus

Tags: Disinfectant Spray
ShareTweetSendShare
Join us on:

Related Posts

ತಮಿಳುನಾಡಿನಲ್ಲಿ ಮಹತ್ವದ ಘೋಷಣೆ; ಮಹಿಳೆಯರಿಗೆ ಉಚಿತ ಬಸ್, ಬಡ ಕುಟುಂಬಗಳಿಗೆ 3 ಉಚಿತ LPG ಸಿಲಿಂಡರ್

ತಮಿಳುನಾಡಿನಲ್ಲಿ ಮಹತ್ವದ ಘೋಷಣೆ; ಮಹಿಳೆಯರಿಗೆ ಉಚಿತ ಬಸ್, ಬಡ ಕುಟುಂಬಗಳಿಗೆ 3 ಉಚಿತ LPG ಸಿಲಿಂಡರ್

by Shwetha
August 25, 2026
0

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ವಿಧಾನಸಭೆಯಲ್ಲಿ ಹಲವು ಮಹತ್ವದ ಕಲ್ಯಾಣ ಯೋಜನೆಗಳನ್ನು ಘೋಷಿಸಿದ್ದಾರೆ. ಮಹಿಳೆಯರು ಮತ್ತು ತೃತೀಯಲಿಂಗಿಗಳಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ವಿಸ್ತರಿಸುವುದರ ಜೊತೆಗೆ,...

ರಾಹುಲ್ ಗಾಂಧಿ ಈ ದೇಶದಲ್ಲಿರಲು ನಾಲಾಯಕ್- ನಕ್ಸಲಿಸಂ ಹೊಸಕಿ ಹಾಕಿದ ಅಮಿತ್ ಶಾ ಟೀಕಿಸಲು ರಾಹುಲ್‌ಗೆ ಯೋಗ್ಯತೆ ಇಲ್ಲ: 70 ವರ್ಷದ ಕಾಂಗ್ರೆಸ್ ಪಾಪವನ್ನು ತೊಳೆದಿದೆ ಬಿಜೆಪಿ- ರಾಹುಲ್‌ಗೆ ವಿ.ಸೋಮಣ್ಣ ತಿರುಗೇಟು.

ರಾಹುಲ್ ಗಾಂಧಿ ಈ ದೇಶದಲ್ಲಿರಲು ನಾಲಾಯಕ್- ನಕ್ಸಲಿಸಂ ಹೊಸಕಿ ಹಾಕಿದ ಅಮಿತ್ ಶಾ ಟೀಕಿಸಲು ರಾಹುಲ್‌ಗೆ ಯೋಗ್ಯತೆ ಇಲ್ಲ: 70 ವರ್ಷದ ಕಾಂಗ್ರೆಸ್ ಪಾಪವನ್ನು ತೊಳೆದಿದೆ ಬಿಜೆಪಿ- ರಾಹುಲ್‌ಗೆ ವಿ.ಸೋಮಣ್ಣ ತಿರುಗೇಟು.

by Shwetha
August 25, 2026
0

ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರವನ್ನು ಪೊಲೀಸ್ ಠಾಣೆಗಳಲ್ಲಿ ಅಳವಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ರೈಲ್ವೆ...

ಕೇರಳದ ಕಾಜಿಯಾ ಲಿಜ್ ಮೆಜೊ ಮುಡಿಗೆ ‘ಮಿಸ್ ಯೂನಿವರ್ಸ್ ಇಂಡಿಯಾ 2026’ ಕಿರೀಟ

ಕೇರಳದ ಕಾಜಿಯಾ ಲಿಜ್ ಮೆಜೊ ಮುಡಿಗೆ ‘ಮಿಸ್ ಯೂನಿವರ್ಸ್ ಇಂಡಿಯಾ 2026’ ಕಿರೀಟ

by Shwetha
August 25, 2026
0

ಕೇರಳದ 19 ವರ್ಷದ ಕಾಜಿಯಾ ಲಿಜ್ ಮೆಜೊ ಅವರು 'ಮಿಸ್ ಯೂನಿವರ್ಸ್ ಇಂಡಿಯಾ 2026' ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.ರಾಜಸ್ಥಾನದ ಜೈಪುರದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ 52 ಸ್ಪರ್ಧಿಗಳನ್ನು ಹಿಂದಿಕ್ಕಿ...

ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ‘ಟಾಕ್ಸಿಕ್’ ಸುನಾಮಿ; ಮುಂಗಡ ಬುಕ್ಕಿಂಗ್‌ನಲ್ಲೇ ₹35 ಕೋಟಿ ದಾಟಿದ ಕಲೆಕ್ಷನ್!

ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ‘ಟಾಕ್ಸಿಕ್’ ಸುನಾಮಿ; ಮುಂಗಡ ಬುಕ್ಕಿಂಗ್‌ನಲ್ಲೇ ₹35 ಕೋಟಿ ದಾಟಿದ ಕಲೆಕ್ಷನ್!

by Shwetha
August 25, 2026
0

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ ಬಿಡುಗಡೆಯ ಮುನ್ನವೇ...

ವಾಲ್ಮೀಕಿ ಹಗರಣ- ಸದನದಲ್ಲಿ ಸಾಕ್ಷಿ ನೀಡಲು ಯೋಗ್ಯತೆ ಇಲ್ಲದವರು ಈಗ ಪಾದಯಾತ್ರೆ ಮಾಡ್ತಿದ್ದಾರೆ: ಕುರ್ಚಿ ಉಳಿಸಿಕೊಳ್ಳಲು ಬಿಜೆಪಿ ನಾಯಕರ ಪಾದಯಾತ್ರೆ ನಾಟಕ- ಸಚಿವ ನಾಗೇಂದ್ರ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್

ಉಪ್ಪು ತಿಂದವರು ನೀರು ಕುಡಿಯಲೇಬೇಕು,ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡಿದರೆ ಮುಲಾಜಿಲ್ಲ:ಅಧ್ಯಕ್ಷರೇ ಇರಲಿ, ಐಎಎಸ್ ಅಧಿಕಾರಿಯೇ ಇರಲಿ ಶಿಕ್ಷೆ ಖಚಿತ- ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ

by Shwetha
August 25, 2026
0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷಾ ಅಕ್ರಮ ಹಾಗೂ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅತ್ಯಂತ ಕಠಿಣ ನಿಲುವು ತಳೆದಿದೆ. ಈ ಹಗರಣದಲ್ಲಿ ಭಾಗಿಯಾಗಿರುವವರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram