ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ಗೆ ಅಫಘಾತ….

1 min read

ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ಗೆ ಅಫಘಾತ….

ಕನ್ನಡದ ಬಿಗ್ ಬಾಸ್  ಸೀಜನ್ 8 ರಲ್ಲಿ  ಭಾಗವಹಿಸುವ ಮುಲಕ ಸಾಕಷ್ಟು  ಜನಪ್ರಿಯತೆ  ಗಳಿಸಿದ್ದ ನಟಿ ದಿವ್ಯಾ ಸುರೇಶ್ ಅವರಿಗೆ ಅಪಘಾತ ಸಂಭವಿಸಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸೋಮವಾರ ಅವರು ಬೈಕ್​ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.  ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಕೊರೊನಾ ವ್ಯಾಕ್ಸಿನ್ ಪಡೆದು ಬರುವಾಗ ಅಪಘಾತವಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ದಿವ್ಯಾ ಸುರೇಶ್. ನೈಟ್ ಕರ್ಫ್ಯೂ ವೇಳೆ ಎಂಜಿ ರಸ್ತೆಯಲ್ಲಿ ಅವರು ಓಡಾಡಿ ಕಿರಿಕ್​ ಮಾಡಿಕೊಂಡಿದ್ದರು, ಈ ವೇಳೆ ದಿವ್ಯಾ ಸುರೇಶ್ ಹಾಗೂ ಅವರ ಸ್ನೇಹಿತರನ್ನು ಪೊಲೀಸರು ಮನೆಗೆ ಕಳುಹಿಸಲು ಮುಂದಾದಾಗ ಹೈಡ್ರಾಮಾ ನಡೆಸಿದ್ದು ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು.

ದಿವ್ಯ ಸುರೇಶ್  ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಫಿನಾಲೆವರೆಗು ತಲುಪಿದರು ಮಂಜು ಪಾವಗಡ ಅವರ ಜೊತೆಗಿನ ಫ್ರೆಂಡ್ ಶಿಪ್ ಮೂಲಕ ಹೆಚ್ಚು ಸುದ್ಧಿಯಲ್ಲಿದ್ದರು. ಬಿಗ್ ಬಾಸ್ ನಂತರ ಹಲವು ಸಿನಿಮಾ ಆಫರ್ ಗಳು ಹುಡುಕಿಕೊಂಡು ಬರುತ್ತಿವೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd