ಬೆಂಗಳೂರು : ಸಮಯ ಬಂದಾಗ ಬಿಜೆಪಿ ನಾಯಕರಿಗೆ ಬಂಡೆ ಕಥೆ ಹೇಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿಗರಿಗೆ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಆರ್ ಆರ್ ನಗರಕ್ಕೆ ಪ್ಯಾರಾಮಿಲಿಟರಿ ಕರೆಸುವ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ : ನಾಡ ಕಾಡುವ ಹುಲಿಯನ್ನು, ಕಾಡಿಗಟ್ಟದೆ ಬಿಡೆವು : ಸಿದ್ದು ವಿರುದ್ಧ ಶ್ರೀನಿವಾಸ ಪೂಜಾರಿ ಕಿಡಿ
“ಮುನಿರತ್ನ ಅವರನ್ನು ನಾನು ಅಭಿನಂದಿಸುತ್ತೇನೆ. ನನಗೆ ಬಹಳ ಸಂತೋಷವಾಗಿದೆ. ಸರ್ಕಾರ, ಕ್ಯಾಂಡಿಡೇಟ್, ಜನರಿಗೂ ಮನವರಿಕೆಯಾಗಿದೆ. ಲಾ ಆಂಡ್ ಆರ್ಡರ್ ಪ್ರಾಬ್ಲಂ ಇಲ್ಲ ಅನ್ನೋದು ಗೊತ್ತಾಗಿದೆ.
ಮುನಿರತ್ನ ಕೊಲೆಗಳು ಆಗಲಿವೆ ಎಂದು ಹೇಳಿಕೆ ನೀಡಿದ್ದಾರೆ. ಕೊಲೆ ಮಾಡುವ ಮನೋಭಾವ ಇಟ್ಕೊಂಡವರು ಈ ಮಾತು ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಏನು ಮಾಡ್ತಾರೆ ಅನ್ನೋದನ್ನ ತಿಳಿಸಿದ್ದಾರೆ. ಏನು ಮಾಡಬೇಕು, ಮಾಡಿಸಬೇಕು ಅದು ಅವರ ಬಾಯಿಂದ ಬಂದಿದೆ” ತಿರುಗೇಟು ನೀಡಿದರು.
ಇನ್ನು ಆರ್ ಆರ್ ನಗರ ಉಪಚುನಾವಣೆಯಲ್ಲಿ ನಡೆಯುತ್ತಿರುವ ದುರ್ಬಳಕೆಗಳು ಆಯೋಗದ ಗಮನಕ್ಕೆ ಬಂದಿದೆ. ಕಾಂಗ್ರೆಸ್ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ಕೊರೊನಾ ಲಸಿಕೆಯನ್ನು ಉಚಿತವಾಗಿ ಕೊಡಿಸೋ ಧಮ್ ನಿಮಗಿದೆಯೇ ಕಟೀಲ್ ಅವರೇ : ಸಿದ್ದರಾಮಯ್ಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel