ಸಿಎಂ ರಾಜೀನಾಮೆ ಕೊಡಲಿ… ಇಲ್ಲಾ ಈಶ್ವರಪ್ಪನವರನ್ನ ಕ್ಯಾಬಿನೆಟ್ ನಿಂದ ತಗೆದು ಹಾಕಲಿ – ಡಿಕೆಶಿ
ಸಿಎಂ ಬಿಎಸ್ವೈ ಮೇಲೆ ಸಚಿವ ಈಶ್ವರಪ್ಪ ಭ್ರಷ್ಟಾಚಾರದ ಆರೋಪ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ಯಾಬಿನೆಟ್ ಸಚಿವರೊಬ್ಬರು ಮುಖ್ಯಮಂತ್ರಿ ಗಳ ವಿರುದ್ಧ 12೦೦ ಕೋಟಿ ಹಗರಣದ ಆರೋಪ ಮಾಡಿದ್ದಾರೆ. ಪ್ರಮಾಣವಚನ ಬೋಧಿಸಿದ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಈಶ್ವರಪ್ಪನಂತ ಹಿರಿಯರು ಮಾತನಾಡಿದ್ದಾರೆ. ಒಂದು ಸಿಎಂ ರಾಜೀನಾಮೆ ಕೊಡಲಿ. ಇಲ್ಲವಾದ್ರೆ ಈಶ್ವರಪ್ಪನವರನ್ನ ಕ್ಯಾಬಿನೆಟ್ ನಿಂದ ತಗೆದು ಹಾಕಲಿ. ಕಾಂಗ್ರೆಸ್ ಇದರ ವಿರುದ್ದ ಹೋರಾಟ ಮಾಡುತ್ತೆ. ಇದು 12೦೦ ಕೋಟಿ ಅಲ್ಲಾ ಭ್ರಷ್ಟಾಚಾರ ಕೂಪ ಇದೆ. ಈಶ್ವರಪ್ಪ ಹೇಳಿದ್ದು ತಪ್ಪು ಅಂತ ನಾನು ಹೇಳೋಕೆ ರೆಡಿ ಇಲ್ಲಾ. ಈಶ್ವರಪ್ಪ ಅವರ ಡ್ಯೂಟಿ ಮಾಡಿದ್ದಾರೆ. ಸಿಎಂ ಅವರ ಡ್ಯೂಟಿ ಮಾಡಬೇಕು ಎಂದು ಡಿಕೆಶಿ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಬಿಜೆಪಿ ಸರ್ಕಾರ 30% ಕಮಿಷನ್ ಸರಕಾರ ಎಂದು ನಮ್ಮ ಶಾಸಕಾಂಗ ಪಕ್ಷದ ನಾಯಕರು ಹೇಳಿದ್ದಾರೆ. ನಾನು ವಿಪಕ್ಷ ನಾಯಕ ಕುಳಿತು ಇದರ ಬಗ್ಗೆ ಹೋರಾಟದ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.
ಸಿಡಿ ವಿಚಾರವಾಗಿ ಡಿಕೆಶಿವಕುಮಾರ್ ಬೆಂಗಳೂರಿನಲ್ಲಿ ಮಾತನಾಡಿದ್ದು, ಈ ವಿಚಾರ ನನಗೆ ಸಂಬಂಧ ಪಡದ ವಿಚಾರ. ಅದರ ಬಗ್ಗೆ ನಾನು ಮಾತನಾಡಲ್ಲ. ನನ್ನ ಹೆಸರು ಹೇಳಿದರೆ ಅವರಿಗೆ ಮಾರ್ಕೆಟಿಂಗ್ ಆಗುತ್ತೆ. ಅದಕ್ಕೆ ಪ್ರಯತ್ನ ಪಡುತಿದ್ದಾರೆ,ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.
ಸಿಎಂ ಬಿಎಸ್ ವೈ ವಿರುದ್ಧ ದೂರು ಸಲ್ಲಿಸಿದ ಈಶ್ವರಪ್ಪ ನಡೆ ವಿರುದ್ಧ ಬಿ.ಸಿ ಪಾಟೀಲ್ ಬೇಸರ..!