ತ್ರಿವರ್ಣಧ್ವಜದ ಹಕ್ಕುದಾರರು ನಾವು : ಡಿ.ಕೆ.ಶಿವಕುಮಾರ್ dk-shivakumar
ತುಮಕೂರು : ಈ ದೇಶದ ತ್ರಿವರ್ಣಧ್ವಜದ ಹಕ್ಕುದಾರರು ನಾವು ಕಾಂಗ್ರೆಸಿಗರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದ್ದಾರೆ.
ತುಮಕೂರಿನಲ್ಲಿ ಇಂದು ಜನಜಾಗೃತಿ ಸಮಾವೇಶ ನಡೆಯಿತು.
ಈ ಸಭೆಯಲ್ಲಿ ಭಾಗಿಯಾಗಿದ್ದ ಡಿಕೆಶಿವಕುಮಾರ್, ಭಾರತಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಬಹಳಷ್ಟಿದೆ.
ಈ ದೇಶದ ತ್ರಿವರ್ಣಧ್ವಜದ ಹಕ್ಕುದಾರರು ನಾವು ಕಾಂಗ್ರೆಸಿಗರು ಎಂದು ಪ್ರತಿಪಾದಿಸಿದ್ದಾರೆ.
ಕಾಂಗ್ರೆಸ್ ಗೆ ದೊಡ್ಡ ಇತಿಹಾಸವಿದೆ. ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ ಎಂದ ಡಿ.ಕೆ.ಶಿವಕುಮಾರ್. ಅಲ್ಲೇ ಇದ್ದ ಕಾಂಗ್ರೆಸ್ ಬಾವುಟ ಹಿಡಿದು ತೋರಿಸಿ ತ್ರಿವರ್ಣ ಧ್ವಜದ ಹಕ್ಕುದಾರರು ನಾವು ಎಂದರು.
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಟ್ರಬಲ್ ಶೂಟರ್… ಕಾಂಗ್ರೆಸ್ ಮಾಡಿದ ಆಸ್ತಿ-ಪಾಸ್ತಿಯನ್ನು ಬಿಜೆಪಿ ಸರ್ಕಾರ ಮಾರಾಟ ಮಾಡುತ್ತಿದೆ.
ಕಾಂಗ್ರೆಸ್ ಸರ್ಕಾರ ಖಾಸಗೀಕರಣ ವಿರೋಧ ಮಾಡಿತ್ತು. ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಿತ್ತು. ಆದರೆ ಬಿಜೆಪಿ ಸರ್ಕಾರ ಎಲ್ಲವನ್ನೂ ಹರಾಜು ಹಾಕುತ್ತಿದೆ ಎಂದು ಗುಡುಗಿದರು.