ಡಿಎಂಕೆ ಗೆದ್ದಿದ್ದಕ್ಕೆ ನಾಲಿಗೆ ಕತ್ತರಿಸಿಕೊಂಡ ಮಹಿಳೆ

1 min read
MK Stalin's

ಡಿಎಂಕೆ DMK ಗೆದ್ದಿದ್ದಕ್ಕೆ ನಾಲಿಗೆ ಕತ್ತರಿಸಿಕೊಂಡ ಮಹಿಳೆ

ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷ ಭರ್ಜರಿ ಜಯ ಸಾಧಿಸಿದೆ.

ಇದರಿಂದ ದ್ರಾವಿಡನಾಡದಲ್ಲಿ ದಶಕದ ಬಳಿಕ ಸೂರ್ಯ ಉದಯವಾಗಿದ್ದು, ಡಿಎಂಕೆ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿದ್ದಾರೆ. ಈ

ಮಧ್ಯೆ ಡಿಎಂಕೆ ಅಧಿಕಾರಕ್ಕೆ ಬಂದರೆ ನಾಲಿಗೆಯನ್ನು ಕತ್ತರಿಸಿಕೊಳ್ಳುತ್ತೇನೆ ಎಂದು ಹರಕೆ ಹೊತ್ತಿದ್ದ ಮಹಿಳೆ ಹರಕೆಯನ್ನು ತೀರಿಸಿದ್ದಾರೆ.

DMK

32 ವರ್ಷದ ವನಿತಾ ಎಂಬುವವರು ಡಿಎಂಕೆ ಅಧಿಕಾರಕ್ಕೆ ಬಂದ್ರೆ ನಾಲಿಗೆ ಕತ್ತರಿಸಿಕೊಳ್ಳುವುದಾಗಿ ಹರಿಕೆ ಮಾಡಿಕೊಂಡಿದ್ದರಂತೆ.

ನಿನ್ನೆಯಷ್ಟೇ ಹೊರಬಿದ್ದಿದ್ದು, ಅದರಲ್ಲಿ ಡಿಎಂಕೆಗೆ ಬಹುಮತ ಬಂದಿದೆ. ಹೀಗಾಗಿ ಫಲಿತಾಂಶ ಹೊರಬರುತ್ತಿದ್ದಂತೆ ವನಿತಾ
ಮುಥಾಲಮ್ಮನ ದೇವಾಲಯಕ್ಕೆ ಹೋಗಿ ತಮ್ಮ ನಾಲಿಗೆ ಕತ್ತರಿಸಿಕೊಂಡಿದ್ದಾರೆ.

ಅಷ್ಟೆ ಅಲ್ಲದೆ ಕೊರೊನಾ ಕಾರಣ ನಾಲಿಗೆಯನ್ನು ದೇಗುಲದ ಬಾಗಿಲನಲ್ಲಿರುವ ಗೇಟ್ ಬಳಿ ಇಟ್ಟಿದ್ದಾರೆ.

ಬಳಿಕ ತೀವ್ರ ರಕ್ತಸ್ರಾವದಿಂದ ವನಿತಾ ಎಚ್ಚರತಪ್ಪಿದ್ದು, ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd