“ಸಿಎಂ ಕುರ್ಚಿ ಉಳಿಸಿಕೊಳ್ಳಲು ಲಾಕ್ ಡೌನ್ ದುರ್ಬಳಕೆ ಆಗದಿರಲಿ” : ಯತ್ನಾಳ್
ವಿಜಯಪುರ : ಸೋಂಕು ನಿಯಂತ್ರಣಕ್ಕೆ ಬಂದಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಹಿಂಪಡೆಯಬೇಕು.
ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ರಾಜಕೀಯ ಸ್ವಾರ್ಥಕ್ಕಾಗಿ ಕೋವಿಡ್ ಲಾಕ್‍ಡೌನ್ ದುರ್ಬಳಕೆ ಆಗಬಾರದು ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ರಾಜ್ಯದಲ್ಲಿ ನಿಯಂತ್ರಣದಲ್ಲಿದೆ. ಕೊರೊನಾ ಹಾವಳಿ ಕಡಿಮೆಯಾಗಿದೆ.
ಲಾಕ್‍ಡೌನ್ ಹಿಂದಕ್ಕೆ ಪಡೆಯಬೇಕು. ರಾಜಕೀಯಕ್ಕಾಗಿ ಲಾಕ್‍ಡೌನ್ ದುರುಪಯೋಗವಾಗಬಾರದು. ಜೂನ್ 7ರೊಳಗಾಗಿ ಹಂತ ಹಂತವಾಗಿ ಲಾಕ್ಡೌನ್ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೇ ಲಾಕ್‍ಡೌನ್ ಕಾರಣದಿಂದಾಗಿ ಸಾಮಾನ್ಯ, ಬಡ-ಕೂಲಿ ಕಾರ್ಮಿಕರು ಕೆಲಸ ಇಲ್ಲದೇ ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ.
ಹೀಗಾಗಿ ಉದ್ಯೋಗ ಸೃಷ್ಟಿಗೂ ಸರ್ಕಾರ ಪರ್ಯಾಯ ಕ್ರಮಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ ವಿಜಯೇಂದ್ರ ವಿರುದ್ಧ ಆರೋಪಗಳ ಸುರಿಮಳೆಗೈದ ಯತ್ನಾಳ್, ಭ್ರಷ್ಟಾಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುರ್ಚಿ ಉಳಿಸಲು ಅವರ ಪುತ್ರ ವಿಜಯೇಂದ್ರ ವೀರಶೈವ ಮಠಾಧೀಶರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಯಾವೊಬ್ಬ ಮಠಾಧೀಶರೂ ಕಳಂಕಿತರ ಪರವಾಗಿ ನಿಲ್ಲಬಾರದು ಎಂದು ಮನವಿ ಮಾಡಿದರು.