ನವದೆಹಲಿ: ನನ್ನನ್ನು ಮೋದಿ ಜೀ ಎಂದು ಕರೆದು ಸಾರ್ವಜನಿಕರಿಂದ ದೂರ ಮಾಡಬೇಡಿ. ನಾನು ಮೋದಿ ಜೀ ಅಲ್ಲ, ಮೋದಿ ಅಷ್ಟೇ ಎಂದು ಪ್ರಧಾನಿ ಮೋದಿ ಸಂಸದರಿಗೆ ಮನವಿ ಮಾಡಿದ್ದಾರೆ.
ಬಿಜೆಪಿ (BJP) ಸಂಸದೀಯ ಪಕ್ಷದ ಸಭೆಯಲ್ಲಿ ಈ ಕುರಿತು ಅವರು ಪ್ರಸ್ತಾಪ ಮಾಡಿದ್ದಾರೆ. ನನ್ನನ್ನು ಮೋದಿ ಜೀ ಎಂದು ಕರೆಯಬೇಡಿ ಎಂದು ಸಂಸದರಿಗೆ ಮನವಿ ಮಾಡಿದ್ದಾರೆ. ನೀವು ಹೀಗೆ ಕರೆದರೆ ದೇಶದ ಜನರು ಹಾಗೂ ನನ್ನ ನಡುವೆ ಅಂತರ ಇರುವಂತಾಗುತ್ತದೆ. ಹೀಗಾಗಿ ಹಾಗೆ ಕರೆಯಬೇಡಿ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಪಕ್ಷದ ಸಾಮಾನ್ಯ ಕಾರ್ಯಕರ್ತ ಮತ್ತು ಜನಸಾಮಾನ್ಯರಂತೆ ಇರಲು ಬಯಸುತ್ತಾರೆ. ತಮ್ಮ ಕುಟುಂಬದ ಭಾಗವೆಂದು ಪರಿಗಣಿಸುವಂತೆ ಹೇಳುತ್ತಾರೆ. ಇತರೆ ಸಂಸದರಂತೆ ಮೋದಿಯೂ ಕೂಡ ಒಬ್ಬ ಸಂಸದರಂತೆ ಭಾವಿಸಬೇಕು ಎಂದು ಮನವಿ ಮಾಡಿದ್ದಾರೆ.