ಜನರಿಗೆ ಒಂದು ರೂಲ್ಸ್, ರಾಜಕಾರಣಿಗಳಿಗೆ ಒಂದು ರೂಲ್ಸ್ ಇದೆಯಾ: ಡಿಕೆಶಿ

1 min read
DK Shivakumar

ಜನರಿಗೆ ಒಂದು ರೂಲ್ಸ್, ರಾಜಕಾರಣಿಗಳಿಗೆ ಒಂದು ರೂಲ್ಸ್ ಇದೆಯಾ: ಡಿಕೆಶಿ

ಬೆಂಗಳೂರು: ಇಂದು ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ ನಲ್ಲಿ ನಡೆದ ನೂತನ ಸದಸ್ಯರ ಪರಿಷತ್ ಪ್ರಮಾಣ ವಚನ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ಭಾಗಿಯಾಗಿದ್ದರು. ಈ ವೇಳೆ ಸಾಕಷ್ಟು ಜನರಿಂದ ಗದ್ದಲದಿಂದ ಕೂಡಿತ್ತು. ಈ  ಸಮಾರಂಭದಲ್ಲಿ ಸಾಮಜಿಕ ಅಂತರವಿಲ್ಲ, ಯಾರು ಕೂಡ ಮಾಸ್ಕ್ ಧರಿಸಿಲ್ಲ, ಕೋವಿಡ್ ರೂಲ್ಸ್ ನ್ನು ಗಾಳಿಗೆ ತೂರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಗುಡುಗಿದರು.

ಅಲ್ಲದೇ ಜನರಿಗೆ ಒಂದು ರೂಲ್ಸ್, ರಾಜಕಾರಣಿಗಳಿಗೆ ಒಂದು ರೂಲ್ಸ್ ಇದೆಯಾ ಕರ್ನಾಟಕದಲ್ಲಿ. ರಾಜ್ಯದ ಬಡಪಾಯಿಗಳಿಗೆ ಮಾತ್ರ ಈ ರೂಲ್ಸ್ ಅನ್ವಯಿಸಯತ್ತಾ, ಬಿಜೆಪಿ ಸರ್ಕಾರದವರೆಗೆ ರೂಲ್ಸ್ ಅನ್ವಯವಾಗೋದಿಲ್ವಾ, ಸಿಎಂ ಬೊಮ್ಮಾಯಿ ಇದ್ದ ಕಾರ್ಯಕ್ರಮದಲ್ಲಿ ರೂಲ್ಸ್ ಫಾಲೋ ಮಾಡುತ್ತಿಲ್ಲ ಎಂದು ಡಿಕೆಶಿ ಪ್ರಶ್ನಿಸಿದರು.

Vidan Parishat Saaksha Tv

ಇದೆ ವೇಳೆ ಜನರ ಮಾಡೊ ಸಮಾರಂಭಗಳಿಗೆ, ಮದುವೆಗಳಿಗೆ ನೂರು – ಇನ್ನೂರು ಜನ ಮಾತ್ರ ಸೇರಬೇಕು, ಆದರೆ  ಸರ್ಕಾರ ನಡೆಸೋ ಕಾರ್ಯಕ್ರಮದಲ್ಲಿ ಲಿಮಿಟ್ ಇಲ್ಲದೆ ಸಾವಿರಾರು ಜನ್ರು ಸೇರಬಹುದು. ಬೀದಿ ಬದಿ ವ್ಯಾಪಾರ ಮಾಡೋ  ಸಣ್ಣ ವ್ಯಾಪಾರಿಗಳಿಗೆ ದಂಡ ಹಾಕಿ ಅವರಿಗೆ ತೊಂದರೆ ಮಾಡುತ್ತಾರೆ. ವೀಕೆಂಡ್ ಕರ್ಪ್ಯೂ ಮಾಡಿ ಜನರ ಬಾಳಲ್ಲಿ ಆಟವಾಡುತ್ತಿದ್ದಾರೆಂದು ಮಾತನಾಡಿದರು.

ಮಾತು ಮುಂದುವರೆಸಿ ನಾವು ನೀರಿಗಾಗಿ ಪಾದಯಾತ್ರೆ ಮಾಡುತ್ತೇವೆ ನಮ್ಮನ್ನು ಜೈಲಿಗೆ ಹಾಕಿದ್ರು ಪರವಾಗಿಲ್ಲ ನಾವು ಪಾದಯಾತ್ರೆ ಮಾಡೇಮಾಡತಿವಿ. ನಾನು ಜೈಲಿಗೆ ಹೋಗಲು ಸಿದ್ದರಿದ್ದೇವೆ ಇಂತಹ ಗೊಡ್ಡು ಬೆದರಿಕೆಗೆ ನಾವು ಹೆದರಿಕೊಳ್ಳುವುದಿಲ್ಲ. ಈ ಬೇದರಿಕೆಯಲ್ಲಾ ಗೃಹಮಂತ್ರಿಗಳು ತಮ್ಮ ಊರಲ್ಲಿ ಇಟ್ಟುಕೊಳ್ಳಲಿ ನಮ್ಮ ಹತ್ರ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd