ಐಪಿಎಲ್ ಬ್ರ್ಯಾಂಡ್ ವ್ಯಾಲ್ಯೂ ಎಷ್ಟಿದೆ ಗೊತ್ತಾ..? ಟಾಪ್ -4 ಫ್ರಾಂಚೈಸಿಗಳ ಬ್ರ್ಯಾಂಡ್ ವ್ಯಾಲ್ಯೂ ಎಷ್ಟೀರಬಹುದು..?
ಕುಬೇರನ ಖಜಾನೆಯನ್ನು ನಾವು ನೀವು ನೋಡಿಲ್ಲ. ಆದ್ರೆ ಆಗರ್ಭ ಶ್ರೀಮಂತರನ್ನು ಕುಬೇರನಿಗೆ ಹೋಲಿಸುವುದು ನಮ್ಮಲ್ಲಿರುವ ವಾಡಿಕೆ. ಇದೀಗ ಆಧುನಿಕ ಭಾರತದಲ್ಲಿ ಕುಬೇರನ ಖಜಾನೆಯನ್ನು ಮೀರಿಸುವ ಮಟ್ಟಕ್ಕೆ ಬೆಳೆದು ನಿಂತಿದೆ ಬಿಸಿಸಿಐನ 18ರ ಹರೆಯದ “ಕೂಸು” ಇಂಡಿಯನ್ ಪ್ರೀಮಿಯರ್ ಲೀಗ್…!
ಐಪಿಎಲ್‍ನ ಸದ್ಯದ ಬ್ರ್ಯಾಂಡ್ ವ್ಯಾಲ್ಯೂ ಎಷ್ಟಿರಬಹುದು..? ನಾವು ನೀವು ಊಹೆ ಮಾಡಲು ಕೂಡ ಅಸಾಧ್ಯ. 2008ರ ಬಿಸಿಸಿಐ ಶಿಶುವಿನ ಮಡಿಲಿನಲ್ಲಿ ಈಗ ಝಣ ಝಣ ಕಾಂಚಾಣ ಜೋರಾಗಿಯೇ ಕುಣಿಯುತ್ತಿದೆ.
saakshatv.com
ಬ್ರ್ಯಾಂಡ್ ಫೈನಾನ್ಸ್‍ನ ಇತ್ತೀಚಿನ ವರದಿಯ ಪ್ರಕಾರ 2025ರಲ್ಲಿ ಐಪಿಎಲ್‍ನ ಬ್ರ್ಯಾಂಡ್ ವ್ಯಾಲ್ಯೂ 12 ಬಿಲಿಯನ್ ಯುಎಸ್ ಡಾಲರ್. ಅಂದ್ರೆ ಭಾರತೀಯ ರೂಪಾಯಿಗಳಲ್ಲಿ ಒಂದು ಲಕ್ಷ ಕೋಟಿ ರೂಪಾಯಿ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಶೇ.13ರಷ್ಟು ಏರಿಕೆಯಾಗಿದೆ. 2009ರಲ್ಲಿ ಐಪಿಎಲ್‍ನ ಬ್ರ್ಯಾಂಡ್ ವ್ಯಾಲ್ಯೂ ಜಸ್ಟ್ 2 ಬಿಲಿಯನ್. ಊಹೆ ಮಾಡಿ, ಕ್ರೀಡಾ ಜಗತ್ತಿನಲ್ಲಿ ಐಪಿಎಲ್ ಯಾವ ರೀತಿ ಮೋಡಿ ಮಾಡಿರಬಹುದು ಎಂದು.
ಇನ್ನು ಫ್ರಾಂಚೈಸಿಗಳು ಕೂಡ ದುಡ್ಡು ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಫ್ರಾಂಚೈಸಿ ಆಟಗಾರರನ್ನೇ ಬ್ರ್ಯಾಂಡ್ ಮಾಡಿಕೊಂಡು ಹಣದ ಹೊಳೆಯನ್ನೇ ಹರಿಸುತ್ತಿವೆ. ಬಹುಶಃ ಡೆಕ್ಕನ್ ಚಾರ್ಜಸ್‍ನ ಮೂಲ ಮಾಲೀಕರಾದ ಡೆಕನ್ ಕ್ರಾನಿಕಲ್ ಸಂಸ್ಥೆ ಮಾತ್ರ ಲಾಸ್ ಆಗಿತ್ತು. ಇನ್ನುಳಿದಂತೆ ಉಳಿದ ಫ್ರಾಂಚೈಸಿ ಮಾಲೀಕರು ಲಾಭದಲ್ಲಿದ್ದಾರೆ. ಯಾಕಂದ್ರೆ ಪ್ರತಿಯೊಂದು ತಂಡಗಳ ಬ್ರ್ಯಾಂಡ್ ವ್ಯಾಲ್ಯೂ ಆ ಮಟ್ಟದಲ್ಲಿದೆ.
saakshatv.com
CSK- ಬ್ರ್ಯಾಂಡ್ ವ್ಯಾಲ್ಯೂ 1,012 ಕೋಟಿ ರೂ.
ಬ್ರ್ಯಾಂಡ್ ಫೈನಾನ್ಸ್ ವರದಿಯ ಪ್ರಕಾರ 2025ರಲ್ಲೂ ಬ್ರ್ಯಾಂಡ್ ವ್ಯಾಲ್ಯೂ ವಿಚಾರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಗ್ರ ಸ್ಥಾನದಲ್ಲಿದೆ. 122 ಮಿಲಿಯನ್ ಯುಎಸ್ ಡಾಲರ್ ಅಂದ್ರೆ 1,012 ಕೋಟಿ ರೂ. ಮೌಲ್ಯವನ್ನು ಸಿಎಸ್‍ಕೆ ಹೊಂದಿದೆ.
ಮುಂಬೈ ಇಂಡಿಯನ್ಸ್ (MI) – 987 ಕೋಟಿ ರೂ.
ಇನ್ನು ಎರಡನೇ ಸ್ಥಾನದಲ್ಲಿದೆ ಐದು ಬಾರಿಯ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ ತಂಡದ ಬ್ರ್ಯಾಂಡ್ ವ್ಯಾಲ್ಯೂ – 119 ಮಿಲಿಯನ್ ಯುಎಸ್ ಡಾಲರ್. ಅಂದ್ರೆ 987 ಕೋಟಿ ರೂಪಾಯಿ.
saakshatv.com
RCB – 971 ಕೋಟಿ ರೂ.
ಮೂರನೇ ಸ್ಥಾನದಲ್ಲಿದೆ 2025ರ ಐಪಿಎಲ್ ಚಾಂಪಿಯನ್ ತಂಡ. ಆರ್‍ಸಿಬಿಯ ಬ್ರ್ಯಾಂಡ್ ವ್ಯಾಲ್ಯೂ 118 ಮಿಲಿಯನ್ ಯುಎಸ್ ಡಾಲರ್. ಅಂದ್ರೆ 971 ಕೋಟಿ ರೂ. ಐಪಿಎಲ್‍ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಮೂರನೇ ಸ್ಥಾನದಲ್ಲಿದ್ರೂ ಮುಂದಿನ ವರ್ಷ ಖಂಡಿತವಾಗಿಯೂ ಬ್ರ್ಯಾಂಡ್ ವ್ಯಾಲ್ಯೂನಲ್ಲಿ ಜಿಗಿತ ಕಾಣಲಿದೆ.
KKR -905 ಕೋಟಿ ರೂ.
ನಾಲ್ಕನೇ ಸ್ಥಾನದಲ್ಲಿ ಶಾರೂಕ್ ಖಾನ್ ಒಡೆತನದ ಕೆಕೆಆರ್ ತಂಡ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ರ್ಯಾಂಡ್ ವ್ಯಾಲ್ಯೂ 109 ಮಿಲಿಯನ್ ಯುಎಸ್ ಡಾಲರ್. ಅಂದ್ರೆ 905 ಕೋಟಿ ರೂಪಾಯಿ.
SRH – 706 ಕೋಟಿ ರೂ.
ಐದನೇ ಸ್ಥಾನದಲ್ಲಿದೆ ಕಾವ್ಯಾ ಮಾರನ್ ಒಡೆತನದ ಸನ್ ರೈಸಸ್ರ್À ಹೈದ್ರಬಾದ್. ಎಸ್‍ಆರ್‍ಎಚ್ ತಂಡದ ಬ್ರ್ಯಾಂಡ್ ವ್ಯಾಲ್ಯೂ 85 ಮಿಲಿಯನ್ ಯುಎಸ್ ಡಾಲರ್. ಅಂದ್ರೆ 706 ಕೋಟಿ ರೂ.
RR – 672 ಕೋಟಿ ರೂ.
ಆರನೇ ಸ್ಥಾನದಲ್ಲಿದೆ ಚೊಚ್ಚಲ ಐಪಿಎಲ್ ಚಾಂಪಿಯನ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ . ಆರ್ ಆರ್ ತಂಡದ ಬ್ರ್ಯಾಂಡ್ ವ್ಯಾಲೂ 81 ಮಿಲಿಯನ್ ಯುಎಸ್ ಡಾಲರ್. ಅಂದ್ರೆ 672 ಕೋಟಿ ರೂ.
DC – 664 ಕೋಟಿ ರೂ.
ಏಳನೇ ಸ್ಥಾನದಲ್ಲಿದೆ ದೆಹಲಿ ಕ್ಯಾಪಿಟಲ್ಸ್ ತಂಡ. ಡಿಸಿ ತಂಡದ ಸದ್ಯ ಬ್ರ್ಯಾಂಡ್ ವ್ಯಾಲ್ಯೂ 80 ಮಿಲಿಯನ್ ಯುಎಸ್ ಡಾಲರ್. ಅಂದ್ರೆ 664 ಕೋಟಿ ರೂ.
GT – 573 ಕೋಟಿ ರೂ.
ಎಂಟನೇ ಸ್ಥಾನದಲ್ಲಿದೆ ಗುಜರಾತ್ ಟೈಟಾನ್ಸ್ ತಂಡ. ಸದ್ಯ ಜಿಟಿಯ ಬ್ರ್ಯಾಂಡ್ ವ್ಯಾಲ್ಯೂ 69 ಮಿಲಿಯನ್ ಯುಎಸ್ ಡಾಲರ್. ಅಂದ್ರೆ 573 ಕೋಟಿ ರೂ.
PBKS – 564 ಕೋಟಿ ರೂ.
2025ರ ಐಪಿಎಲ್ ರನ್ನರ್ ಅಪ್ ಪಂಜಾಬ್ ಕಿಂಗ್ಸ್ ತಂಡ 9ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ತಂಡದ ಬ್ರ್ಯಾಂಡ್ ವ್ಯಾಲ್ಯೂ 68 ಮಿಲಿಯನ್ ಯುಎಸ್ ಡಾಲರ್. ಅಂದ್ರೆ 564 ಕೋಟಿ ರೂ.
LSG- 498 ಕೋಟಿ ರೂ.
10ನೇ ಹಾಗೂ ಕೊನೆಯ ಸ್ಥಾನದಲ್ಲಿದೆ ಲಕ್ನೋ ಸೂಪರ್ ಜೈಂಟ್ಸ್ ತಂಡ. ಎಲ್‍ಎಸ್‍ಜಿಯ ಬ್ರ್ಯಾಂಡ್ ವ್ಯಾಲ್ಯೂ 60 ಮೀಲಿಯನ್ ಅಂದ್ರೆ 498 ಕೋಟಿ ರೂ.
saakshatv.com
ಒಟ್ಟಾರೆ ಐಪಿಎಲ್ ಶ್ರೀಮಂತಗೊಳಿಸಲು ಬಿಸಿಸಿಐ ನಾನಾ ರೀತಿಯ ಪ್ಲ್ಯಾನ್‍ಗಳನ್ನು ಮಾಡಿಕೊಳ್ಳುತ್ತಿದೆ. ಜೊತೆಗೆ ಫ್ರಾಂಚೈಸಿಗಳ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಾದಂತೆ ಐಪಿಎಲ್‍ನ ಬ್ರ್ಯಾಂಡ್ ವ್ಯಾಲ್ಯೂಗಳು ಸಹ ಹೆಚ್ಚಾಗುತ್ತಿದೆ. ಅಲ್ಲದೆ ಮಾಧ್ಯಮ ಹಕ್ಕುಗಳು, ಡಿಜಿಟಲ್ ಹಕ್ಕಗಳು, ಜಾಗತೀಕ ಜಾಹೀರಾತುಗಳು, ಫ್ರಾಂಚೈಸಿಯ ಹೂಡಿಕೆಗಳು ಎಲ್ಲವೂ ಐಪಿಎಲ್‍ನ ಬ್ರ್ಯಾಂಡ್ ವ್ಯಾಲ್ಯೂವನ್ನು ಹೆಚ್ಚಿಸುತ್ತದೆ. ಇನ್ನು ಐಪಿಎಲ್ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದ್ದಂತೆ ವಿದೇಶಿ ಕಂಪೆನಿಗಳು ಹೂಡಿಕೆ ಮಾಡಲು ಮುಂದೆ ಬರುತ್ತಿವೆ. ಈಗಾಗಲೇ ಸೌದಿ ಅರೆಬಿಯಾ ಐಪಿಎಲ್‍ನಲ್ಲಿ ಹೂಡಿಕೆ ಮಾಡಲು ಸಿದ್ಧತೆ ಕೂಡ ಮಾಡಿಕೊಳ್ಳುತ್ತಿದೆ.
2008ರಲ್ಲಿ ಹುಟ್ಟಿದ್ದ ಐಪಿಎಲ್‍ಗೆ ಈಗ 18ರ ಪ್ರಾಯ. ಕಳೆದ 18 ವರ್ಷಗಳಲ್ಲಿ ಐಪಿಎಲ್ ಮಾಡಿರುವ ಕಿತಾಪತಿ ಅಷ್ಟಿಷ್ಟಲ್ಲ. ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಸೇರಿದಂತೆ ನಾನಾ ವಿವಾದಗಳು ಐಪಿಎಲ್‍ಗೆ ಕಳಂಕವನ್ನು ತಂದಿವೆ. ಆದ್ರೂ ಕ್ರಿಕೆಟ್ ಅಭಿಮಾನಿಗಳ ಪ್ರೀತಿ, ಜಾಹೀರಾತುಕಂಪೆನಿಗಳ ಬೆಂಬಲದಿಂದ ಐಪಿಎಲ್ ಜಾಗತಿಕ ಕ್ರೀಡೆಯಾಗಿ ಬೆಳೆಯುತ್ತಿದೆ.
ಕೊನೆಯದಾಗಿ, ಬಿಸಿಸಿಐ ಕ್ರಿಕೆಟ್ ಪ್ರೇಮಿಗಳ ಬಗ್ಗೆಯೂ ಕಾಳಜಿ ವಹಿಸಬೇಕು. ದುಡ್ಡು ಮಾಡಿ ಬೇಡ ಅನ್ನಲ್ಲ. ದುಡ್ಡಿದ್ರೆ ದುನಿಯಾ.. ಕ್ರಿಕೆಟ್ ಹಾಗೂ ಇಷ್ಟು ದೊಡ್ಡ ಟೂರ್ನಿಯನ್ನು ಆಯೋಜನೆ ಮಾಡಬೇಕಾದ್ರೆ ದುಡ್ಡಿನ ಅವಶ್ಯಕತೆ ಇದೆ. ಆದ್ರೆ ದಯವಿಟ್ಟು ಬೆಟ್ಟಿಂಗ್ ಆಪ್‍ಗಳ ಜಾಹಿರಾತುಗಳನ್ನು ತೆಗೆದುಕೊಂಡು ದುಡ್ಡು ಮಾಡೋದು ಬೇಡ. ಆಟಗಾರರನ್ನು ಬೆಟ್ಟಿಂಗ್ ಆಪ್‍ಗಳಿಗೆ ರಾಯಭಾರಿಗಳನ್ನಾಗಿ ಮಾಡಿಕೊಂಡು ಅಮಾಯಕ ಕ್ರಿಕೆಟ್ ಪ್ರೇಮಿಗಳ ಜೀವದ ಜೊತೆ ಚೆಲ್ಲಾಟ ಆಡೋದು ಬೇಡ. ಭಾರತದಲ್ಲಿ ಬೆಟ್ಟಿಂಗ್‍ಗೆ ನಿಷೇಧವಿದೆ. ಆದ್ರೆ ಬೆಟ್ಟಿಂಗ್ ಜಾಹಿರಾತುಗಳನ್ನ ತೋರಿಸಿ, ಜನರಿಗೆ ಆಮೀಷವೊಡ್ಡಿ ಅವರ ಬದುಕನ್ನು ಹಾಳು ಮಾಡೋದು ಬೇಕಾ..? ಭಾರತ ಸರ್ಕಾರ ಬೆಟ್ಟಿಂಗ್ ಆಪ್ ಬಗ್ಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. ಇಲ್ಲದೆ ಇದ್ರೆ ಯುವ ಸಮುದಾಯ ಅಪಾಯಕ್ಕೆ ಸಿಲುಕುವುದು ಗ್ಯಾರಂಟಿ.
ಸನತ್ ರೈ..!
saakshatv.com