ಹಲವರು ಜ್ವರ ಸೇರಿದಂತೆ ಕೆಲವು ಸಾಮಾನ್ಯ ರೋಗ ಕಾಣಿಸಿಕೊಂಡರೆ ಮೆಡಿಕಲ್ ನಿಂದ ಮಾತ್ರೆ ತೆಗೆದುಕೊಳ್ಳುವುದು ಸಾಮಾನ್ಯ. ಹೀಗೆ ಮಹಿಳೆಯೊಬ್ಬರು ಜ್ವರಕ್ಕೆ ಮಾತ್ರೆ ತೆಗೆದುಕೊಂಡು ಐಸಿಯುಗೆ ದಾಖಲಾಗಿರುವ ಘಟನೆ ನಡೆದಿದೆ.
ಇರಾಕ್ ನಲ್ಲಿ ಮಹಿಳೆಯೊಬ್ಬರು ಜ್ವರ ಬಂದಿದೆ ಎಂದು ಮೆಡಿಕಲ್ ನಿಂದ ಮಾತ್ರೆ ಖರೀದಿಸಿ ನುಂಗಿದ್ದಾರೆ. ಆದರೆ, ಅದು ಸೈಡ್ ಎಫೆಕ್ಟ್ ಆಗಿದ್ದು, ಸ್ಥಿತಿ ಚಿಂತಾಜನಕವಾಗಿದೆ.
ಮಾತ್ರೆ ಸೇವಿಸುತ್ತಿದ್ದಂತೆ ಅವರ ಮುಖ ಊದಿಕೊಂಡಿದೆ. ಮುಖ, ದೇಹ, ಕಾಲು, ಕೈಗೆ ದೊಡ್ಡ ದೊಡ್ಡ ಗಾಯದ ರೀತಿ ಬೊಬ್ಬೆ ಎದ್ದಿವೆ. ಡೈಲ್ ಮೇಲ್ ವರದಿ ಮಾಡಿರುವಂತೆ ಮಹಿಳೆಯು, ಐಬುಪ್ರೊಫೇನ್ ಮಾತ್ರೆ ತೆಗೆದುಕೊಂಡಿದ್ದಾರೆ. ಇದು ನೋವು , ಜ್ವರ ಮತ್ತು ಉರಿಯೂತವನ್ನು ನಿವಾರಿಸಲು ಬಳಸಲಾಗುವ ನಾನ್ ಸ್ಟೆರೊಯ್ಡೆಲ್ ಉರಿಯೂತದ ಔಷಧ. ವೈದ್ಯರ ಸಲಹೆ ಇಲ್ಲದೆ ಇದನ್ನು ತೆಗೆದುಕೊಳ್ಳಬಾರದು. ಆದರೆ, ಇದನ್ನು ತೆಗೆದುಕೊಂಡು ಈಗ ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.