ನಾಯಿಯ ಮೇಲೆ ಅತ್ಯಾಚಾರವೆಸಗಿದ 60 ವರ್ಷದ ಕಾಮುಕ ವೈದ್ಯ
ಕೊಲ್ಕತ್ತಾ : 60 ವರ್ಷದ ವೈದ್ಯನೊಬ್ಬ ನಾಯಿಯ ಮೇಲೆ ಅತ್ಯಾಚಾರವೆರುವ ಹೇಯ ಘಟನೆ ಪಶ್ಚಿಮಬಂಗಾಳದ ಕೋಲ್ಕತ್ತಾದ ರೀಜೆಂಟ್ ಪಾರ್ಕ್ ಪ್ರದೇಶದಲ್ಲಿ ನಡೆದಿದೆ. ಆರೋಪಿ ಆಯುರ್ವೇದ ವೈದ್ಯನಾಗಿದ್ದು, ಅವನ ವಿರುದ್ಧ ರೀಜೆಂಟ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನ ಕೃತ್ಯ ಗಮನಿಸುತ್ತಿದ್ದ ಮಹಿಳೆಯೊಬ್ಬರು ಪೊಲೀಸರಿಗೆ ಮಾಹಿತಿ ನಿಡಿದ ನಂತರ ಪೊಲೀಸರು ಸ್ಥಳಕ್ಕೆ ಡೌಡಾಯಿಸಿ ಆರೋಪಿ ವೈದ್ಯನನ್ನ ವಶಕ್ಕೆ ಪಡೆದಿದ್ದಾರೆ.
ವರನಿಗಾಗಿ ಜಾಹೀರಾತು… ವಧುವಿನ ಕಂಡೀಷನ್ ಕೇಳಿ ದಂಗಾದ ನೆಟ್ಟಿಗರು
ಆರೋಪಿ ವೈದ್ಯ ಕಳೆದ ಒಂದೂವರೆ ವರ್ಷಗಳಿಂದ ಅರವಿಂದ್ ಪಾರ್ಕ್‌ನಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿ ವಾಸಿಸುತ್ತಿದ್ದ. ಆಹಾರ ನೀಡುವ ನೆಪದಲ್ಲಿ ನಾಯಿಯನ್ನು ವೈದ್ಯ ಕರೆದೊಯ್ದಿದ್ದಾನಂತೆ. ಇದನ್ನು ಗಮನಿಸುತ್ತಿದ್ದ ಮಹಿಳೆ ಮಹಿಳೆಯೊಬ್ಬರು ನಾಯಿಯ ಜನನಾಂಗದಲ್ಲಿ ರಕ್ತಬಂದಿದ್ದನ್ನ ಗಮನಿಸಿದ್ದಾರೆ. ನಂತರ ಈ ಬಗ್ಗೆ ಪೊಲೀಸರಿಗೆ ಕರೆ ಮಾಡಿದ ನಂತರ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.








