65 ವರ್ಷದ ಮಹಿಳೆಯ ಹೊಟ್ಟೆಯಲ್ಲಿ ವಾಲಿಬಾಲ್ ಗಾತ್ರದ ಗಡ್ಡೆ volleyball sized tumor
ಹೈದರಾಬಾದ್, ಜನವರಿ 01: 65 ವರ್ಷದ ಮಹಿಳೆಯ ಹೊಟ್ಟೆಯಿಂದ ವಾಲಿಬಾಲ್ ಗಾತ್ರದ ಗಡ್ಡೆಯನ್ನು ತೆಲಂಗಾಣದ ವೈದ್ಯರು ಹೊರತೆಗೆದಿದ್ದಾರೆ. ಸಂಕೀರ್ಣವಾದ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯಿಂದ ಗಡ್ಡೆಯನ್ನು ಹೊರ ತೆಗೆದ ನಂತರ ಹಿರಿಯ ವಯಸ್ಸಿನ ಮಹಿಳೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಆಶ್ಚರ್ಯಕರವಾಗಿ, ಈ ಗಡ್ಡೆಯು ಹುಟ್ಟಿನಿಂದಲೇ ಬಂದಿದ್ದು, ಮಹಿಳೆಗೆ ಮೊದಲು ಇದರಿಂದ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ. volleyball sized tumor

ಗ್ರಾಮೀಣ ಪ್ರದೇಶದ ಮಹಿಳೆಯೊಬ್ಬರು ಎದೆ ನೋವು, ಹೊಟ್ಟೆ ನೋವು, ವಾಂತಿ ಮತ್ತು ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಕಳೆದ ಕೆಲವು ತಿಂಗಳುಗಳಿಂದ ನೋವು ಅನುಭವಿಸುತ್ತಿದ್ದು, ಚಿಕಿತ್ಸೆಗಾಗಿ ಗ್ಯಾಸ್ಟ್ರೋಎಂಟರಾಲಜಿಸ್ಟ್ ಅನ್ನು ಸಂಪರ್ಕಿಸಿದ್ದಾರೆ. ವೈದ್ಯರು ಅವರ ಪ್ರಕರಣವನ್ನು ಅಪರೂಪ ಪ್ರಕರಣವೆಂದು ಪ್ರಸ್ತಾಪಿಸಿದ್ದು ಗಡ್ಡೆಯಿಂದ ಸಾವಿನ ಸಾಧ್ಯತೆಯನ್ನು ಸಹ ನಿರೀಕ್ಷಿಸಿದ್ದರು.
ವೈದ್ಯರ ಪ್ರಕಾರ, ಗಡ್ಡೆಯಿಂದಾಗಿ ರೋಗಿಯು ಈ ಮೊದಲು ಯಾವುದೇ ತೊಂದರೆಗಳನ್ನು ಅನುಭವಿಸಲಿಲ್ಲ ಮತ್ತು ಅವರು ಒಂದು ವರ್ಷದ ಹಿಂದೆಯಷ್ಟೇ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು.
ಪಾಕಿಸ್ತಾನ – ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಿದ ಗಲಭೆಕೋರರು
ಗಡ್ಡೆ ಕ್ಯಾನ್ಸರ್ ಅಲ್ಲ ಆದರೆ ಶ್ವಾಸಕೋಶದ ಕೆಳಗಿರುವ ಒಳಪದರದ ಸುತ್ತಲೂ ಅದು ಇದೆ ಎಂದು ಲ್ಯಾಪರೊಸ್ಕೋಪಿಕ್ ಸರ್ಜನ್ ಡಾ.ವೆಂಕಟ್ ಪವನ್ ಕುಮಾರ್ ಪತ್ರಿಕೆಯೊಂದಕ್ಕೆ ತಿಳಿಸಿದರು. ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯಿಂದ ಅದನ್ನು ತೆಗೆದುಹಾಕುವುದು ಒಂದು ಸವಾಲಾಗಿತ್ತು. ಹೊಟ್ಟೆಯ ಬಲಭಾಗದಲ್ಲಿ ಒಂದು ವರ್ಷದಿಂದ ಅವರಿಗೆ ತೀವ್ರವಾದ ನೋವು ಇತ್ತು. ಮಹಿಳೆಗೆ ಗ್ಯಾಸ್ಟ್ರಿಕ್ ಲಕ್ಷಣಗಳು ಸಹ ಇದ್ದವು ಮತ್ತು ಗಡ್ಡೆಯು ಜನ್ಮಜಾತ ಎಂದು ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯರ ಪ್ರಕಾರ, ಗಡ್ಡೆ ಆರಂಭದಲ್ಲಿ ಸಣ್ಣದಾಗಿರಬಹುದು ಆದರೆ ಕಳೆದ 20-30 ವರ್ಷಗಳಲ್ಲಿ ಕ್ರಮೇಣ ವಾಲಿಬಾಲ್ ಗಾತ್ರಕ್ಕೆ ಬೆಳೆದಿದೆ. ವೈದ್ಯರ ತಂಡವು ಗೆಡ್ಡೆಯನ್ನು ತೆಗೆದುಹಾಕಲು ಆರು ಗಂಟೆಗಳ ಶಸ್ತ್ರಚಿಕಿತ್ಸೆಯನ್ನು ಕೈಗೊಂಡಿದೆ ಎಂದು ಡಾ ಕುಮಾರ್ ಹೇಳಿದರು. ಗಡ್ಡೆಯ ಸ್ಥಿತಿ ಕೂಡ ಬಹಳ ವಿರಳವಾಗಿದ್ದು, ಇದು ಹೃದಯದ ಸುತ್ತಲೂ ಇತ್ತು ಎಂದು ಹೇಳಿದ್ದಾರೆ. ಮಹಿಳೆ ಸುಮಾರು 10 ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇದ್ದರು. ಕಳೆದ ವಾರ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಮಹಿಳೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಹಲ್ಲುನೋವಿಗೆ ಪರಿಣಾಮಕಾರಿ ಮನೆಮದ್ದುಗಳುhttps://t.co/HhYDoJETEb
— Saaksha TV (@SaakshaTv) December 31, 2020
ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರ ಅಧಿಕಾರಾವಧಿ ವಿಸ್ತರಣೆhttps://t.co/1ULNaCtmkJ
— Saaksha TV (@SaakshaTv) December 31, 2020








