ಮಹಿಳೆಯರು ಋತುಚಕ್ರ ಸಮಯದಲ್ಲಿ ಕೊರೋನಾ ಲಸಿಕೆ ಪಡೆಯಬಹುದೇ? ಈ ಬಗ್ಗೆ ವೈದ್ಯರ ಅಭಿಪ್ರಾಯವೇನು?

2 min read
Covid vaccine affect your period

ಮಹಿಳೆಯರು ಋತುಚಕ್ರ ಸಮಯದಲ್ಲಿ ಕೊರೋನಾ ಲಸಿಕೆ ಪಡೆಯಬಹುದೇ? ಈ ಬಗ್ಗೆ ವೈದ್ಯರ ಅಭಿಪ್ರಾಯವೇನು?

ಮಹಿಳೆಯರು ಋತುಚಕ್ರ ಸಮಯದಲ್ಲಿ ಕೊರೋನಾ ಲಸಿಕೆ ಪಡೆಯಬಹುದೇ ಎಂಬ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೆಲವು ಸುದ್ದಿಗಳು ವೈರಲ್ ಆಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ವೈದ್ಯರು ಸ್ಪಷ್ಟನೆ ನೀಡಿದ್ದು ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.


ಕೆಲವು ಮಹಿಳೆಯರು ಲಸಿಕೆ ತೆಗೆದುಕೊಂಡ ನಂತರ ನೋವಿನ ಅಥವಾ ವಿಳಂಬದ ಋತುಚಕ್ರ ಅವಧಿಗಳ ಅನುಭವಗಳನ್ನು ಹಂಚಿಕೊಂಡ ನಂತರ ಕೋವಿಡ್ 19 ಲಸಿಕೆಗಳು ಮುಟ್ಟಿನ ಚಕ್ರ ಮತ್ತು ಫಲವತ್ತತೆಗೆ ಪರಿಣಾಮ ಬೀರುತ್ತವೆ ಎಂಬ ಆತಂಕವನ್ನು ಹುಟ್ಟಿಸುವ ಸುದ್ದಿಗಳು ಸಾಮಾಜಿಕ ‌ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ವೈದ್ಯಕೀಯ ತಜ್ಞರು ಇದನ್ನು ‌ನಿರಾಕರಿಸಿದ್ದಾರೆ.

ಇಲ್ಲಿಯವರೆಗೆ, ಲಸಿಕೆಗಳು ಋತುಚಕ್ರದಲ್ಲಿನ ಬದಲಾವಣೆಗೆ ಕಾರಣವಾಗುವ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಯೇಲ್ ಸ್ಕೂಲ್ ಆಫ್ ಮೆಡಿಸಿನ್‌ನ ಆಲಿಸ್ ಲು-ಕುಲ್ಲಿಗನ್ ಮತ್ತು ಡಾ. ರಾಂದಿ ಹಟ್ಟರ್ ಎಪ್ಸ್ಟೀನ್ ಅಂಗ್ಲ ಪತ್ರಿಕೆಯಲ್ಲಿ ಬರೆದಿದ್ದಾರೆ. ಒಂದು ವೇಳೆ ಋತುಚಕ್ರ ತಡವಾದರೂ, ವಿಳಂಬ ಅವಧಿಯ ಬಗ್ಗೆ ಆತಂಕ ಪಡಲು ಯಾವುದೇ ಕಾರಣವಿಲ್ಲ ಎಂದು ‌ಹೇಳಿದ್ದಾರೆ.
ಸೇಂಟ್ ಲೂಯಿಸ್‌ನ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಇಲಿನಾಯ್ಸ್ ವಿಶ್ವವಿದ್ಯಾಲಯದ ಅರ್ಬಾನಾ-ಚಾಂಪೇನ್‌ನ ಸಹಾಯಕ ಪ್ರಾಧ್ಯಾಪಕ ಡಾ. ಕ್ಯಾಥರಿನ್ ಕ್ಲಾನ್ಸಿ ಮತ್ತು ಸಾರ್ವಜನಿಕ ಆರೋಗ್ಯ ವಿಜ್ಞಾನ ವಿಭಾಗದಲ್ಲಿ ಪೋಸ್ಟ್ ಡಾಕ್ಟರಲ್ ಸ್ಕಾಲರ್ ಡಾ. ಕ್ಯಾಥರೀನ್ ಲೀ ಅಸಹಜ ಅವಧಿಗೆ ಮತ್ತು ಕೋವಿಡ್-19 ಲಸಿಕೆಗಳ ನಡುವೆ ಯಾವುದೇ ಸಂಬಂಧವಿದೆಯೇ ಎಂದು ನಿರ್ಧರಿಸಲು ಅಧ್ಯಯನವನ್ನು ನಡೆಸಲು ಸಿದ್ಧರಾಗಿದ್ದಾರೆ ಎಂದು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಋತುಚಕ್ರ ಸಮಯದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಮಹಿಳೆಯರು ಮತ್ತು ಹುಡುಗಿಯರು ಆ ಅವಧಿಗಳಲ್ಲಿ ಲಸಿಕೆ ತೆಗೆದುಕೊಳ್ಳಬಾರದು ಎಂದು ಸಂದೇಶಗಳು ಫಾರ್ವರ್ಡ್ ಆಗುತ್ತಿದೆ.

ಇದಕ್ಕೆ ಸಂಬಂಧಿಸಿದಂತೆ ಸ್ತ್ರೀರೋಗತಜ್ಞ ಡಾ.ಮುಂಜಾಲ್ ವಿ ಕಪಾಡಿಯಾ, ಕೆಲವು ಸಿಲ್ಲಿ ವಾಟ್ಸಾಪ್ ವದಂತಿಯು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ನಿಮ್ಮ ಋತುಚಕ್ರ ಅವಧಿಯು ಲಸಿಕೆ ಪರಿಣಾಮಕಾರಿತ್ವದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸಾಧ್ಯವಾದಷ್ಟು ಬೇಗ ಲಸಿಕೆ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಇನ್ನೊಬ್ಬ ವೈದ್ಯಕೀಯ ಸಿಬ್ಬಂದಿ ಆಕೆಯ ಋತುಚಕ್ರ ಅವಧಿಯಲ್ಲಿ ಎರಡೂ ಡೋಸ್ ಗಳನ್ನು ಸ್ವೀಕರಿಸಿರುವ ಬಗ್ಗೆ ಬರೆದು ಕೊಂಡಿದ್ದಾರೆ.
‘ ನಾನು ಋತುಚಕ್ರ ಅವಧಿಗಳನ್ನು ಹೊಂದಿರುವಾಗ ನನ್ನ ಎರಡೂ ಡೋಸ್ ಗಳನ್ನು ಪಡೆದುಕೊಂಡಿದ್ದೇನೆ. ನಾನು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಒಂದು ವಾರದೊಳಗೆ ದೊಡ್ಡ ಮಟ್ಟಿನ ಅಡ್ಡಪರಿಣಾಮಗಳಿಲ್ಲದೆ ಚೇತರಿಸಿಕೊಂಡಿದ್ದೇನೆ. ಲಸಿಕೆಗೆ ಧನ್ಯವಾದಗಳು. ದಯವಿಟ್ಟು ಲಸಿಕೆ ಪಡೆಯಿರಿ. ತುಂಬಾ ಲಘುವಾದ ಅಡ್ಡಪರಿಣಾಮಗಳು ಉಂಟಾಗುತ್ತವೆ ಆದರೆ ಅದು ನಿಮ್ಮ ಜೀವವನ್ನು ಉಳಿಸುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಮತ್ತೋರ್ವ ಸ್ತ್ರೀರೋಗ ತಜ್ಞೆ, ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿದ್ದಾರೆ.
ಮುಂಬೈನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯ ಪ್ರಸೂತಿ ತಜ್ಞೆ ಮತ್ತು ಸ್ತ್ರೀರೋಗ ತಜ್ಞೆ ಡಾ.ವೈಶಾಲಿ ಜೋಶಿ, ಕೋವಿಡ್ ವ್ಯಾಕ್ಸಿನೇಷನ್ ಮುಟ್ಟಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ. ಕೋವಿಡ್ -19 ಲಸಿಕೆ ಋತು ಚಕ್ರದ ಅವಧಿ ಮತ್ತು ಅದರ ಹರಿವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಮೌಲ್ಯೀಕರಿಸಲು ಯಾವುದೇ ಡೇಟಾ ಇಲ್ಲ. ಜನರು ತಮ್ಮದೇ ಆದ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುತ್ತಿರುವ ಸಾಮಾಜಿಕ ಮಾಧ್ಯಮದಿಂದ ಇದು ಹುಟ್ಟಿಕೊಂಡಿದೆ. ಎಲ್ಲಾ ಅಂತರರಾಷ್ಟ್ರೀಯ ಸಲಹಾ ಸಂಸ್ಥೆಗಳು ಮತ್ತು ಸಂಸ್ಥೆಗಳು ಇದನ್ನು ಒಪ್ಪಿಕೊಂಡಿಲ್ಲ. ಅಲ್ಲದೆ, ಋತು ಚಕ್ರದ ಅವಧಿಯನ್ನು ಅವಲಂಬಿಸಿ ವ್ಯಾಕ್ಸಿನೇಷನ್ ದಿನಾಂಕವನ್ನು ಮರು ನಿಗದಿಪಡಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
Covid vaccine affect your period
ಆದ್ದರಿಂದ ಗರ್ಭಿಣಿಯರನ್ನು ಹೊರತುಪಡಿಸಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರು ತಮ್ಮ ಅವಧಿಗಳು, ಹಾರ್ಮೋನುಗಳ ಸ್ಥಿತಿಯನ್ನು ಲೆಕ್ಕಿಸದೆ ಲಸಿಕೆ ಪಡೆಯಬೇಕು ಎಂದು ಅವರು ಹೇಳಿದ್ದಾರೆ.

#Covidvaccine #period

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd