ತೆಲುಗು ಹಾಗೂ ತಮಿಳಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಕ್ಯೂಟ್ ಅಂಡ್ ಸಿಂಪಲ್ ನಟಿ ಕೀರ್ತಿ ಸುರೇಶ್ ಅವರು ಆಗಾಗ ಮದುವೆ ವಿಚಾರದಿಂದಲೇ ಸುದ್ದಿಯಾಗೋದು ಹೆಚ್ಚು. ಆಗಾಗ ಕೀರ್ತಿ ಸುರೇಶ್ ಅವರ ಮದುವೆ ವಿಚಾರ ವ್ಯಾಪಕವಾಗಿ ಚರ್ಚೆಗೆ ಬರುತ್ತೆ. ಇದೀಗ ಮತ್ತೆ ಕೀರ್ತಿ ಸುರೇಶ್ ಅವರ ಮದುವೆ ವಿಚಾರವಾಗಿ ಗಾಸಿಪ್ ಗಳು ಹರಿದಾಡ್ತಿವೆ.
ಹೌದು ನಟಿ ಕೀರ್ತಿ ಸುರೇಶ್ ಗೆ ಒಂದಾದ ಮೇಲೊಂದು ಆಫರ್ ಗಳು ಹುಡುಕಿಕೊಂಡು ಬರುತ್ತಿದ್ದು ಸದ್ಯ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇದೀಗ ಕೀರ್ತಿ ಸುರೇಶ್ ಅವರು ತಮ್ಮ ತಂದೆಯೇ ಹುಡುಕಿರುವ ವರನನ್ನು ವರಿಸಲಿದ್ದಾರೆ ಎಂದ ಸುದ್ದಿ ವ್ಯಾಪಕವಾಗಿ ಸದ್ದು ಮಾಡ್ತಿದೆ. ಅವರ ತಂದೆ ಮಲಯಾಳಂ ನಿರ್ಮಾಪಕ ಸುರೇಶ್ ಅವರು ಹುಡುಕಿರುವ ಖ್ಯಾತ ಬ್ಯುಸಿನೆಸ್‌ಮನ್ ಒಬ್ಬರ ಜೊತೆಗೆ ಕೀರ್ತಿ ಸುರೇಶ್ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ.
ಅದ್ರಲ್ಲೂ ಇತ್ತೀಚೆಗೆ ನಟಿ ಕೀರ್ತಿ ಸುರೇಶ್ ಅವರು ಯಾವುದೇ ಹೊಸ ಸಿನೆಮಾಗಳನ್ನು ಒಪ್ಪಿಕೊಳ್ಳದೇ ಇರುವುದು ಇದೀಗ ಈ ವದಂತಿಗೆ ಪುಷ್ಠಿ ನೀಡುವಂತಾಗಿದೆ. ಹೊಸ ಚಿತ್ರಗಳ ಆಫರ್ ಗಳನ್ನು ಸ್ವೀಕರಿಸಿದ ನಟಿ ಕೆಲ ನಿರ್ದಿಷ್ಟ ತಿಂಗಳುಗಳ ಬಳಿಕವಷ್ಟೇ ಹೊಸ ಪ್ರಾಜೆಕ್ಟ್ ಗಳಿಗೆ ಸಹಿ ಹಾಕುವುದಾಗಿ ಹೇಳುತ್ತಿದ್ದಾರೆ. ಹೀಗಾಗಿಯೇ ನಟಿ ಕೀರ್ತಿ ಅವರು ಶೀಘ್ರವೇ ವಿವಾಹವಾಗಲಿದ್ದು, ಈ ಕಾರಣದಿಂದಾಗಿಯೇ ಯಾವುದೇ ಹೊಸ ಸಿನೆಮಾಗಳಿಗೆ ಒಪ್ಪಿಗೆ ಸೂಚಿಸುತ್ತಿಲ್ಲ ಎನ್ನುವ ಬಿಸಿಬಿಸಿ ಚರ್ಚೆಗಳು ಆರಂಭವಾಗಿದೆ.