Dog dies-ಕಲಬುರಗಿ:ಸಾಕು ಪ್ರಾಣಿಗಳು ಎಂದರೆ ಯಾರಿಗೆ ತಾನೆ ಇಷ್ಟಾ ಇರಲ್ಲಾ ಹೇಳಿ ಅದರಲ್ಲೂ
ಚಾರ್ಲಿ ಸಿನಿಮಾ ಬಂದ ನಂತರ ಮೂಖ ಪ್ರಾಣಿಗಳನ್ನು ನಿರಾಕರಿಸುವವರ ಮನದಲ್ಲಿ ಪ್ರೀತಿ ಹುಟ್ಟಿದಂತು ನಿಜ.
ಆದರೆ ಈಗ ಕಲಬುರಗಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ತಮ್ಮ ಪ್ರೀತಿಯ ಶ್ವಾನಕ್ಕೆ ಇಡೀ ಕುಟುಂಬವೇ ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರ ವಿದಾಯ ಹೇಳಿರುವ ಘಟನೆ ಬೆಳಕಿಗೆ ಬಂದಿದೆ.
ಮೋಹನ ಕುಲಕರ್ಣಿ ಎಂಬುವ ಕಲಬುರ್ಗಿ ನಗರದ ನ್ಯೂವ್ ರಾಘವೇಂದ್ರ ಕಾಲೋನಿಯ ವಾಸವಿರುವ ಕುಟುಂಬವಾಗಿದ್ದು ತಮ್ಮ ಮುದ್ದಿನ ಶ್ವಾನ ಕ್ಯಾಂಡಿಯನ್ನ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದರು.
ಹೃದಯಾಘಾತದಿಂದ ಮೃತಪಟ್ಟ ಕ್ಯಾಂಡಿ ಶ್ವಾನವನ್ನು ಸುಮಾರು 6 ವರ್ಷಗಳಿಂದ ಮನೆಯಲ್ಲಿ ಪ್ರೀತಿಯಿಂದ ಸಾಕಿದ್ದರು. ಈಗ ಎಲ್ಲರನ್ನು ಅಗಲಿರುವ ತಮ್ಮ ಮುದ್ದಿನ ಶ್ವಾನ ಕ್ಯಾಂಡಿಯ ಅಂತ್ಯಕ್ರಿಯೆಯನ್ನು ವಿಧಿವಿಧಾನದೊಂದಿಗೆ ಕುಟುಂಬ ನೆರವೇರಿಸಿದೆ