RTPCR ಗಿಂತಲೂ ಹೆಚ್ಚು ವೇಗವಾಗಿ ನಾಯಿಗಳು ಕೊರೊನಾ ಸೋಂಕನ್ನ ಪತ್ತೆಹಚ್ಚಬಲ್ಲವು..!
ನವದೆಹಲಿ : RTPCR ಗಿಂತಲೂ ಹೆಚ್ಚು ವೇಗವಾಗಿ ನಾಯಿಗಳು ಕೊರೊನಾ ಸೋಂಕನ್ನ ಪತ್ತೆಹಚ್ಚಬಲ್ಲವು ಎಂಬುದನ್ನ ಸಂಶೋಧನೆಯೊಂದ ಬಹಿರಂಗಪಡಿಸಿದೆ. ಈ ಸಂಶೋಧನೆಯಲ್ಲಿ ತರಬೇತಿ ಪಡೆದ 6 ನಾಯಗಳನ್ನ ಬಳಸಿಕೊಳ್ಳಲಾಗಿತ್ತು. ಕೋವಿಡ್ ಸೋಂಕಿತರು ಬಳಸಿದ್ದ ಮಾಸ್ಕ್ ಹಾಗೂ ಇತರೇ ವಸ್ತುಗಳ ಸ್ಯಾಂಪಲ್ ಗಳು ಹಾಗೂ ಬೇರೆಯ ( ಸೋಂಕಿತರಲ್ಲದವರು) ವಸ್ತುಗಳನ್ನ ಇಟ್ಟು ಪರೀಕ್ಷೆ ನಡೆಸಲಾಗಿದೆ.. ಈ ವೇಳೆ ನಾಯಿಗಳು ಸೋಂಕಿತರ ವಸ್ತುಗಳ ನಡುವೆ ಬೇರೆಯ ವಸ್ತುಗಳನ್ನ ಗುರುತಿಸುವಲ್ಲಿ ಯಶಸ್ವಿಯಾಗಿವೆ.
ಎಸ್ಬಿಐ ಡೆಬಿಟ್ ಕಾರ್ಡ್ನಲ್ಲಿ ಇಎಂಐ ಆಫರ್ ! ಇದರ ಪ್ರಯೋಜನಗಳೇನು? ಇಲ್ಲಿದೆ ವಿವರ
ಈ ಸಂಶೋಧನೆಯಲ್ಲಿ ರಿಟ್ರೀವರ್ , ಲ್ಯಾಬ್ರಡಾರ್ , ಸ್ಟೇನಿಯಲ್ ಜಾತಿಯ ನಾಯಗಳು ಪಾಲ್ಗೊಂಡಿದ್ದವು. ನಾಯಿಗಳ ಮೂಗಿನ ತುದಿಯಲ್ಲಿ ತೇವಾಂಶದಂತಹ ವಸ್ತುವಿದ್ದು, ಶೇ 94 ರಷ್ಟು ಈ ಸೋಂಕನ್ನ ಗುರುತಿಸುವಲ್ಲಿ ಇವು ಯಶಸ್ವಿಯಾಗಿವೆ. ಅಲ್ಲದೇ ಸಂಶೋಧನೆಯಲ್ಲಿ 100 ರ ಪೈಕಿ ಒಟ್ಟು 94 ಜನರನ್ನ ಶ್ವಾನಗಳು ಸರಿಯಾಗಿ ಗುರುತಿಸಿರುವುದಾಗಿ ವರದಿಯಾಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.