ನವದೆಹಲಿ: ಇಂದಿನ ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಆರು ಪೈಸೆಯಷ್ಟು ಕುಸಿತ ಕಂಡಿದೆ. ರೂಪಾಯಿ ಆರು ಪೈಸೆ ಇಳಿಕೆಗೊಂಡು 74.36 ರೂಪಾಯಿಗೆ ವಿನಿಮಯಗೊಂಡಿದೆ.
ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿ 74.30 ಕ್ಕೆ ಪ್ರಾರಂಭವಾಯಿತು, ಆದರೆ ಆರಂಭಿಕ ವ್ಯವಹಾರಗಳಲ್ಲಿ 74.36 ಅನ್ನು ಮುಟ್ಟಿತು. ಗ್ರೀನ್‌ಬ್ಯಾಕ್ ವಿರುದ್ಧದ ಹಿಂದಿನ 74.30ಗೆ ಹೋಲಿಸಿದರೆ 6 ಪೈಸೆ ಕುಸಿತವನ್ನು ದಾಖಲಿಸಿದೆ. ಇದರ ಮಧ್ಯೆ ಡಾಲರ್ ಸೂಚ್ಯಂಕವು ಶೇಕಡಾ 0.15 ರಷ್ಟು ಕುಸಿದು 92.87 ಕ್ಕೆ ತಲುಪಿದೆ.