ಟ್ರಂಪ್ ಭಾವನಾತ್ಮಕ ವಿದಾಯ ಭಾಷಣದಲ್ಲಿ ಹೇಳಿದ್ದೇನು..!
ಅಮೆರಿಕಾ: ಇಂದು ಜೋ ಬೈಡೆನ್ ಅವರು ಅಮೆರಿಕಾದ 46ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಇತ್ತ ಅದೆಷ್ಟೋ ಕಸರತ್ತುಗಳನ್ನ ನಡೆಸಿದ್ರೂ ಯಾವುದೂ ವರ್ಕೌಟ್ ಆಗದೇ ಫೇಲ್ ಆದ ಟ್ರಂಪ್ ಕಡೆಗೂ ವಿದಾಯ ಭಾಷಣ ಮಾಡಿದ್ದಾರೆ. ಈ ಭಾಷಣದಲ್ಲಿ ನೂತನ ಆಡಳಿತಕ್ಕೆ ಶುಭವಾಗಲಿ. ಅಮೆರಿಕ ರಾಷ್ಟ್ರವನ್ನು ಸುರಕ್ಷಿತ ಮತ್ತು ಸಮೃದ್ಧವಾಗಿಡುವ ಮೂಲಕ ಯಶಸ್ವಿಯಾಗಿ ಆಡಳಿತ ನಡೆಸುವಂತಾಲಿ ಎಂದು ಪ್ರಾರ್ಥಿಸುವುದಾಗಿ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ವಿದಾಯ ಭಾಷಣದಲ್ಲಿ ಹೇಳಿದ್ದಾರೆ.
ಇನ್ನೂ ಮೊದಲೇ ಚಿತ್ರೀಕರಿಸಿರುವ ಡೊನಾಲ್ಡ್ ಟ್ರಂಪ್ ಅವರ ವಿದಾಯ ಭಾಷಣದ ವಿಡಿಯೊವನ್ನು ಶ್ವೇತಭವನ ಬಿಡುಗಡೆ ಮಾಡಿದೆ. ಈ ವಿಡಿಯೋ ನೋಡಿ ಟ್ರಂಪ್ ಬೆಂಬಲಿಗರು ಸಹ ಬಾವುಕರಾಗಿದ್ದಾರೆ. ವಿಡಿಯೋದಲ್ಲಿ ಇನ್ನೂ ಮುಂದುವರೆದು ಮಾತನಾಡಿದ್ದ ಟ್ರಂಪ್ ‘ಹರಿದು ಹಂಚಿ ಹೋಗಿರುವ ರಾಷ್ಟ್ರದ ಮೌಲ್ಯಗಳನ್ನು ಅಮೆರಿಕನ್ನರು ಒಟ್ಟುಗೂಡಿಸಬೇಕು. ಭಿನ್ನಾಭಿಪ್ರಾಯ, ದ್ವೇಷವನ್ನು ಮೀರಿ, ಎಲ್ಲರೂ ಒಗ್ಗಟ್ಟಿನಿಂದ ನಿಗಿದಿತ ಗುರಿ ತಲುಪಲು ಪ್ರಯತ್ನಿಸಬೇಕು ಎಂದು ಟ್ರಂಪ್ ಕರೆ ನೀಡಿದ್ದಾರೆ. ಆದ್ರೆ ಅವರು ಈ ಭಾಷಣದಲ್ಲಿ ಎಲ್ಲೂ ಜೋ ಬೈಡನ್ ಬಗ್ಗೆ ಪ್ರಸ್ತಾಪಿಸಿಲ್ಲ.
‘ನೋಬಿತಾ ಶಿಝುಕಾ’ ಮ್ಯಾರೇಜ್ ವರ್ಶನ್ : ಡೋರೇಮಾನ್ಸ್ ಅಭಿಮಾನಿಗಳು ಫುಲ್ ಖುಷ್..!
ಅಲ್ಲದೇ ಈ ತಿಂಗಳ ಆರಂಭದಲ್ಲಿ ಕ್ಯಾಪಿಟಲ್ನಲ್ಲಿ ನಡೆದ ಹಿಂಸಾಚಾರವನ್ನು ಟ್ರಂಪ್ ಖಂಡಿಸಿ ಆಶ್ಚರ್ಯ ಮೂಡಿಸಿದ್ದಾರೆ. ಯಾಕಂದ್ರೆ ಈ ದಾಳಿ ಹಿಂದೆ ಅವರ ಕೈವಾಡವಿರುವ ಆರೋಪದ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ. ಆ ದಾಳಿ ಅಮೆರಿಕನ್ನರನ್ನ ಬೆಚ್ಚಿ ಬೀಳಿಸಿದೆ. ಇಂಥ ರಾಜಕೀಯ ದಾಳಿಯನ್ನು ನಾನೂ ಎಂದೂ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.
‘ನನ್ನ ಆಡಳಿತದ ಅವಧಿಯಲ್ಲಿ ಅಮೆರಿಕವನ್ನು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸಿದ್ದೇನೆ. ಅದಕ್ಕಾಗಿ ಹಲವು ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದೇನೆ. ಇಂಥ ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸುವುದಕ್ಕಾಗಿ ನೀವು ನನ್ನನ್ನು ಆಯ್ಕೆ ಮಾಡಿದ್ದಿರಿ. ನಾನು ಅದರಂತೆ ನಡೆದುಕೊಂಡಿದ್ದೇನೆ. ನಿಮ್ಮ ಅಗತ್ಯಗಳನ್ನು ಪೂರೈಸುವುದು ನನ್ನ ಮೊದಲ ಮತ್ತು ಕೊನೆಯ ಆದ್ಯತೆಯಾಗಿತ್ತು’ ಎಂದು ಹೇಳಿದರು. ಅಮೆರಿಕದ 45ನೇ ಅಧ್ಯಕ್ಷನಾಗಿ ನನ್ನ ಅವಧಿಯನ್ನು ಪೂರ್ಣಗೊಳಿಸಿದ್ದೇನೆ. ತನ್ನ ಅಧಿಕಾರವಧಿಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ನನಗೆ ಹೆಮ್ಮೆ ಇದೆ. ಹಾಗಾಗಿ ಅಷ್ಟೇ ಖುಷಿಯಿಂದ ನಿರ್ಗಮಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel