‘ಸಂಸತ್ ದಾಳಿಕೋರರಿಗೆ ಪ್ರಚೋದನೆ ನೀಡುತ್ತಿದ್ದವರು ಟ್ರಂಪ್’
ಅಮೆರಿಕಾ : ಅಮೆರಿಕದಲ್ಲಿ ನೂತನ ಅಧ್ಯಕ್ಷರಾಗಿ ಜೋ ಬೈಡೆನ್ ಆಯ್ಕೆಯಾದಂತಹ ಸಂದರ್ಭದಲ್ಲಿ ಸಂಸತ್ ಭವನದ ಬಳಿ ದೊಡ್ಡ ಹಿಂಸಾಚಾರವೇ ನಡೆದುಹೋಗಿತ್ತು.. ಈ ವೇಳೆ ಅನೇಕರು ಪ್ರಾಣ ಕಳೆದುಕೊಂಡಿದ್ದರು.. ಆದ್ರೆ ಈ ದಾಳಿ ನಡೆಸಿದವರನ್ನು ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಸಿದ್ದರು. ಹಾಗಾಗಿ ಅವರು ಫೇಸ್ಬುಕ್ನ ನಿಷೇಧಕ್ಕೆ ಒಳಗಾದರು. ಆದರೆ, ಈಗ ಸಾಮಾಜಿಕ ಮಾಧ್ಯಮ ದೈತ್ಯ ಫೇಸ್ಬುಕ್ನ ನಿಯಮಗಳು ಡೋಲಾಯಮಾನವಾಗಿವೆ ಹಾಗೂ ಅವುಗಳನ್ನು ಗಟ್ಟಿಗೊಳಿಸುವ ಅಗತ್ಯವಿದೆ ಎಂದು ಫೇಸ್ಬುಕ್ನ ನಿಗಾ ಮಂಡಳಿಯ ಉಪಾಧ್ಯಕ್ಷ ಮೈಕಲ್ ಮೆಕಾನೆಲ್ ಹೇಳಿದ್ದಾರೆ.
ಜನವರಿ 6ರಂದು ನಡೆದ ಮಾರಕ ದಾಳಿಗೆ ಸಂಬಂಧಿಸಿ ಟ್ರಂಪ್ ನೀಡಿರುವ ಹೇಳಿಕೆಗಳಿಗಾಗಿ ಅವರನ್ನು ಮಾಧ್ಯಮದಿಂದ ನಿಷೇಧಿಸಲು ಫೇಸ್ಬುಕ್ ತೆಗೆದುಕೊಂಡಿರುವ ನಿರ್ಧಾರವು ಸರಿಯಾಗಿಯೇ ಇದೆ ಎಂಬುದಾಗಿ ಫೇಸ್ಬುಕ್ ಕೆಲ ದಿನಗಳ ಹಿಂದೆ ಹೇಳಿತ್ತು.