ವಾಷಿಂಗ್ಟನ್ : ಕೊರೊನಾ ಸಂಕಷ್ಟವನ್ನು ಎದುರಿಸಲು ಎಲ್ಲಾ ದೇಶಗಳು ಒಂದಾಗಿದ್ದು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದೊಂದಿಗಿನ ಸಂಬಂಧವನ್ನ ಮತ್ತಷ್ಟು ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ.
ಕೊರೊನಾ ವಿರುದ್ಧ ಹೋರಾಡೋ ಉದ್ದೇಶದಿಂದ ವಿಶ್ವದ ದೊಡ್ಡಣ್ಣ ಅಮೆರಿಕಾ ಭಾರತಕ್ಕೆ ವೆಂಟಿಲೇಟರ್ ಗಳನ್ನ ದಾನ ಮಾಡಲಿದೆ.
ಈ ಕುರಿತು ಟ್ವೀಟ್ ಮಾಡಿರುವ ಟ್ರಂಪ್, ಭಾರತದಲ್ಲಿರೋ ನಮ್ಮ ಗೆಳೆಯರಿಗಾಗಿ ಅಮೆರಿಕಾ ವೆಂಟಿಲೇಟರ್ ಗಳನ್ನ ದಾನ ಮಾಡಲಿದೆ ಎಂದು ಘೋಷಿಸುವುದಕ್ಕೆ ನನಗೆ ಹೆಮ್ಮೆಯಾಗ್ತಿದೆ. ಈ ಸಾಂಕ್ರಾಮಿಕದ ಸಂದರ್ಭದಲ್ಲಿ ನಾವು ಭಾರತ ಹಾಗೂ ನರೇಂದ್ರಮೋದಿಯೊಂದಿಗೆ ನಿಲ್ಲುತ್ತೇವೆ. ಲಸಿಕೆ ಅಭಿವೃದ್ಧಿಗೂ ಸಹಕಾರ ನೀಡುತ್ತಿದ್ದೇವೆ. ಕಣ್ಣಿಗೆ ಕಾಣದ ಈ ಶತ್ರುವನ್ನ ನಾವು ಒಟ್ಟಾಗಿ ಮಣಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಈ ಹಿಂದೆ ಕೊರೊನಾಗೆ ಚಿಕಿತ್ಸೆ ನೀಡಲು ಬಳಸಬಹುದಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನ ಭಾರತ ರವಾನಿಸಿತ್ತು. ಇದರ ಬೆನ್ನಲ್ಲೇ ಟ್ರಂಪ್, ಅದಕ್ಕೆ ಪ್ರತಿಯಾಗಿ ಭಾರತಕ್ಕೂ ನೆರವು ನೀಡುತ್ತಿದ್ದಾರೆ. ಸದ್ಯ ಭಾರತಕ್ಕೆ ವೆಂಟಿಲೇಟರ್ ಗಳನ್ನ ದಾನ ಮಾಡಲಿದ್ದೇವೆ ಘೋಷಿಸಿರುವ ಟ್ರಂಪ್ ಈ ಹಿಂದೆ ಕೊರೊನಾಗೆ ಅಮೆರಿಕಾದಲ್ಲಿ ಅಭಿವೃದ್ಧಿಪಡಿಸಲಾಗ್ತಿರೋ ಲಸಿಕೆಯನ್ನ ಮೊದಲು ಭಾರತಕ್ಕೆ ನೀಡುವುದಾಗಿ ಹೇಳಿದ್ದರು.








