ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯಾಪ್ತ ಸ್ನೇಹಿತ, ಭಾರತ ಪ್ರವಾಸದಲ್ಲಿ ನರೇಂದ್ರ ಮೋದಿ ಅವರನ್ನು ಹಾಡಿಹೊಗಳಿದ್ದ ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ವಿರುದ್ಧ ಪ್ರತೀಕಾರದ ಮಾತುಗಳನ್ನಾಡಿದ್ದಾರೆ.
ಭಾರತ ತಾನು ಕೇಳುತ್ತಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಅಮೆರಿಕಕ್ಕೆ ರಫ್ತು ಮಾಡದಿದ್ದರೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಈ ಕುರಿತು ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್,
ಕೊರೊನಾ ಸೋಂಕಿನ ಚಿಕಿತ್ಸೆಗೆ ಉಪಯೋಗಿಸಬಹುದಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನ ಅಮೆರಿಕಾಗೆ ರಫ್ತು ಮಾಡದಿದ್ರೆ ಖಂಡಿತವಾಗಿಯೂ ಪ್ರತೀಕಾರ ಇದ್ದೇ ಇರುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ನಾನು ಪ್ರಧಾನಿ ಮೋದಿ ಜೊತೆ ಭಾನುವಾರ ಮಾತನಾಡಿದ್ದೇನೆ. ನಮಗೆ ಬರಬೇಕಿರುವ ಸಪ್ಲೈನ ಕಳಿಸಿಕೊಟ್ಟರೆ ಅದನ್ನ ನಾವೂ ಸಹ ಸ್ವಾಗತಿಸುತ್ತೇವೆ ಅಂತಲೂ ತಿಳಿಸಿದ್ದೇನೆ. ಅವರೊಂದು ವೇಳೆ ರಫ್ತಿಗೆ ತಡೆ ನೀಡಿದ್ರೆ, ಪರ್ವಾಗಿಲ್ಲ. ಆದ್ರೆ, ಇದಕ್ಕೆ ಪ್ರತೀಕಾರ ಇದ್ದೇ ಇರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.








