ಲಾಕ್ ಡೌನ್ ಆಗಬಾರದು, ಅದು ಖಂಡಿತಾ ಪರಿಹಾರವಲ್ಲ : ಕೃಷಿ ಸಚಿವ ಬಿ.ಸಿ.ಪಾಟೀಲ್

ಹಿರಿಯೂರು  : ಇಡೀ ವಿಶ್ವಾದ್ಯಂತ ಕೋವಿಡ್ ನಿಯಂತ್ರಣಕ್ಕೆ ಬಂದಿದೆ ಎನ್ನುವುದಾದರೆ ಅದು ಭಾರತ ಮತ್ತು ಕರ್ನಾಟಕದಲ್ಲಿ ಮಾತ್ರ. ಆದರೆ ವಿರೋಧ ಪಕ್ಷದವರು ಟೀಕಿಸುವುದನ್ನು ಕಾಯಕ ಮಾಡಿಕೊಂಡಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಹಿರಿಯೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಗರೀಬ್ ಕಲ್ಯಾಣ್ ಯೋಜನೆಯನ್ನು ವಿಸ್ತರಿಸಿರುವುದು ನಮ್ಮಿಂದಲೇ ಎಂದು ಕಾಂಗ್ರೆಸ್ ಬಿಂಬಿಸಿಕೊಂಡಿದೆ. ಆದರೆ ಅವರಿಗೆ ಕೇಳಿಕೊಂಡು ಮಾಡುವಂಥದ್ದು ಏನು ಇಲ್ಲ ಎಂದು ತಿರುಗೇಟು ನೀಡಿದರು. ಅತ್ಯಂತ ಶಿಸ್ತಿನಿಂದ ಕಟ್ಟುನಿಟ್ಟಾಗಿ ಪ್ರಧಾನಿಗಳು ಲಾಕ್ಡೌನ್ ಘೋಷಿಸಿದ್ದರು. ಕರ್ನಾಟಕದ ಸರ್ಕಾರ ಸಹ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಕ್ರಮವಹಿಸಿದೆ. ಕ್ವಾರೆಂಟೇನ್ ಆಗದೇ ನೇರಮನೆಗೆ ಹೋದವರಿಂದಲೂ ಸೋಂಕು ಹೆಚ್ಚಿದೆ. ಹೊರರಾಜ್ಯದಿಂದ ಬಂದವರಿಂದಲೇ ಕೊರೊನಾ ಹೆಚ್ಚಿದೆ. ನಮ್ಮ ಪ್ರಧಾನಿ ಹಾಗು ಮುಖ್ಯಮಂತ್ರಿ ಯಡಿಯೂರಪ್ಪ ಕೊರೊನಾ ಹರಡುವುದನ್ನು ನಿಯಂತ್ರಿಸುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರಧಾನಮಂತ್ರಿಗಳನ್ನು ಹೊಗಳಿದರೆ ಅವರ ಸ್ಥಾನ ಕಳೆದುಕೊಳ್ಳುತ್ತಾರೆ. ಅದಕ್ಕೋಸ್ಕರ ಪ್ರಧಾನಿಯವರನ್ನು ಟೀಕಿಸುತ್ತಾರೆ. ಜನರ ಮುಂದೆ ಕೊರೊನಾಗೆ ಸಂಬಂಧಿಸಿದಂತೆ ಖರ್ಚು ವೆಚ್ಚದ ಶ್ವೇತ ಪತ್ರ ಹೊರಡಿಸುತ್ತೇವೆ ಎಂದರು.

ಶೀಥಲೀಕರಣಗಳಲ್ಲಿ ರೈತರು ತಮ್ಮ ಬೆಳೆಗಳನ್ನು ದಾಸ್ತಾನು ಮಾಡಿ ಬೆಲೆಬಂದಾಗ ಅವುಗಳನ್ನು ಬಳಸುವಂತಹ ವ್ಯವಸ್ಥೆಯನ್ನು ಲಾಕ್ಡೌನ್ ಸಂದರ್ಭದಲ್ಲಿ ರೈತರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಬದುಕಿದ್ದವರಿಗೆ ಎಷ್ಟುಗೌರವ ಕೊಡುತ್ತೇವೋ ಸಾವನ್ನಪ್ಪಿದ್ದವರಿಗೂ ಅಷ್ಟೇ ಗೌರವಕೊಡಬೇಕು. ನಮ್ಮ ಸಂಸ್ಕೃತಿಯಲ್ಲಿ ಬದುಕಿದ್ದವರು ಸತ್ತ ಮೇಲೂ ಗೌರವ ಕೊಡುತ್ತೇವೆ.
ಬಳ್ಳಾರಿಯಲ್ಲಿ ಅಮಾನವೀಯವಾಗಿ ಯಾರಾದರೂ ಕೋವಿಡ್ ಸೋಂಕಿತರ ಶವಸಂಸ್ಕಾರ ಮಾಡಿದ್ದರೆ ಅದು ಖಂಡನೀಯ. ಘಟನೆಗೆ ಕಾರಣರಾದವರನ್ನು ಅಮಾನತು ಮಾಡಲಾಗಿದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.

ಲಾಕ್ ಡೌನ್ ಆಗುತ್ತದೆ ಎಂಬ ಭರವಸೆ ನನಗಿಲ್ಲ
ಲಾಕ್ ಡೌನ್ ಆಗಬಾರದು, ಅದು ಖಂಡಿತಾ ಪರಿಹಾರವಲ್ಲ.ಲಾಕ್ ಡೌನ್ ಹೋಗಿದೆ ಅಷ್ಟೇ, ಕೊರೊನಾ ಹೋಗಿಲ್ಲ. ಜನರು ಸುರಕ್ಷತೆಯಿಂದ ಇರುವುದನ್ನು ಕಲಿತುಕೊಳ್ಳಬೇಕು. ಸ್ಯಾನಿಟೈಜರ್ ಮಾಸ್ಕ್ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸೋಂಕು ಇರುವವರು ಪರೀಕ್ಷೆ ಮಾಡಿಸಿಕೊಳ್ಳಲು ಸಹಕರಿಸಬೇಕುಎಂದು ಮನವಿ ಮಾಡಿದರು

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This