ಕೊರೋನಾ ಬಂದಿದೆ ಎಂದು  ಹೇಳಲು ನಾಚಿಕೆ ಪಡಬೇಕಾಗಿಲ್ಲ: ಜಾಗೃತಿ ಬೇಕಷ್ಟೆ : ಬಿ.ಸಿ.ಪಾಟೀಲ್

1 min read
minister bc pati saakshatv

ಕೊರೋನಾ ಬಂದಿದೆ ಎಂದು  ಹೇಳಲು ನಾಚಿಕೆ ಪಡಬೇಕಾಗಿಲ್ಲ: ಜಾಗೃತಿ ಬೇಕಷ್ಟೆ : ಬಿ.ಸಿ.ಪಾಟೀಲ್

minister bc pati saakshatvಹಾವೇರಿ,ಜೂ. 4: ಕೊರೋನಾ ಸಾಂಕ್ರಾಮಿಕ ಸೋಂಕಾಗಿದ್ದು,ಕೊರೊನಾ ಸೋಂಕು ಬಂದಿದೆ ಎಂದು ಹೇಳಲು ಯಾರೂ ಮುಜುಗರಪಡುವುದಾಗಲೀ ನಾಚಿಕೆ ಪಡುವುದಾಗಲೀ ಮಾಡಬಾರದು ಎಂದಯ ಕೃಷಿ ಸಚಿವರೂ ಆಗಿರುವ ಹಿರೇಕೆರೂರು ಮತಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.

ಹಿರೇಕೆರೂರು ಮತಕ್ಷೇತ್ರದ ವರಹ ಗ್ರಾಮದಲ್ಲಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟ , ಮೋಹನ್ ಮರಿಗೌಡರ್ (ವಕಿಲರು), ದಾನಪ್ಪ ಹುಲ್ಲಣ್ಣನವರ ಹಾಗೂ ಬಸಪ್ಪ ಹನುಮಂತಪ್ಪ ನಂದಿಹಳ್ಳಿ ಇವರ ಕುಟುಂಬಗಳಿಗೆ
minister bc pati saakshatvವೈಯಕ್ತಿಕವಾಗಿ ತಲಾ 50 ಸಾವಿರ ರೂಪಾಯಿಗಳ ಸಹಾಯಧನ ನೀಡಿದರು. ಹಾಗೂ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಬಿ.ಸಿ.ಪಾಟೀಲ್,ಸೋಂಕಿಗೆ ನಾಚಿಕೆಯಾಗಲೀ ಅಂಜಿಕೆಯಾಗಲೀ ಇರುವುದಿಲ್ಲ.ಜಾಗೃತಿ, ಕಾಳಜಿ,ಸ್ವಚ್ಛತೆಯ ಜೊತೆಗೆ ಸಾಮಾಜಿಕ ಅಂತರ ಮುಖ್ಯ.ಸೋಂಕನ್ನು ತಡೆಯಲು ಇನ್ನೊಬ್ಬರಿಗೆ ಪಸರಿಸದಂತೆ ನೋಡಿಕೊಳ್ಳಬೇಕು.ಈ ಬಗ್ಗೆ ಸ್ವಯಂ ಜಾಗೃತಿ ಜೊತೆಗೆ ಎಲ್ಲರಿಗೂ ಜಾಗೃತಿ ಮೂಡಿಸಬೇಕೇ ವಿನಹ: ಸೋಂಕಿನ ಲಕ್ಷಣಗಳು ಕಂಡುಬಂದರೆ ಹೆದರಿಯೋ ಭಯಬಿದ್ದೋ ಅಥವಾ ಇನ್ಯಾವುದೋ ಮೌಢ್ಯವನ್ನು ನಂಬಿ ಸುಮ್ಮನೆ ಇರುವುದಿಲ್ಲ‌.ಸೋಂಕಿಗೆ ಸೂಕ್ತ ಚಿಕಿತ್ಸೆ ಪಡೆಯಲು ಸೋಂಕು ಬಂದಿದೆಯೆಂದು ಹೇಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಯಾವುದೇ ಕಾರಣಕ್ಕೂ ಹಿಂದೇಟು ಹಾಕಬಾರದು.ನನ್ನ ಕ್ಷೇತ್ರದ ಜನತೆಯ ಜೊತೆಗೆ ನಾನು ಸದಾ ಇದ್ದೇ ಇರುತ್ತೇನೆ ಎಂದು ಬಿ‌.ಸಿ.ಪಾಟೀಲ್ ಸ್ಫೂರ್ತಿಯ ಮಾತುಗಳನ್ನಾಡಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd