“ಲಾಕ್ ಡೌನ್ ಬೇಡ, ಸೆಕ್ಷನ್ 144 ಜಾರಿ ಮಾಡಿ” : ಸಿದ್ದರಾಮಯ್ಯ Siddaramaiah
ಬೆಂಗಳೂರು : ಕೊರೊನಾ ತಡೆಗೆ ಲಾಕ್ ಡೌನ್ ವಿಧಿಸೋದು ಬೇಡ, ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಸೆಕ್ಷನ್ 144 ಜಾರಿ ಮಾಡಿ.
ಒಂದು ವೇಳೆ ತಜ್ಞರು ಲಾಕ್ ಮಾಡಿ ಅಂದ್ರೆ ಮಾಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಸರ್ವ ಪಕ್ಷಗಳ ಸಭೆಯಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕರಾಗಿ ಸರ್ಕಾರಕ್ಕೆ ಹಲವು ಸಲಹೆಗಳನ್ನ ನೀಡಿದರು.
ರಾಜ್ಯದಾದ್ಯಂತ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿ. ಸಿಎಂ ಡಿಸಿಎಂಗಳೇ ಕೆಲಸ ಮಾಡಬೇಕೆಂದೇನೂ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೆಲಸ ಮಾಡಬೇಕು ಎಂದು ಹೇಳಿದರು.
ಇನ್ನು ಆರೋಗ್ಯ ಮಂತ್ರಿಗಳದ್ದೇ ಒಂದು ದಾರಿ, ಸಿಎಂ ಅವರದ್ದೇ ಒಂದು ದಾರಿ ಆಗಿದೆ.
ಆರೋಗ್ಯ ಮಂತ್ರಿಯ ಮಾತನ್ನ ಸಿಎಂ ಕೇಳುತ್ತಿಲ್ಲ ಎಂದು ಸರ್ಕಾರವನ್ನ ಟೀಕಿಸಿದ ಸಿದ್ದರಾಮಯ್ಯ, ರಾಜ್ಯದಾದ್ಯಂತ ಜಾತ್ರೆ ಸಮಾರಂಭಗಳಿಗೆ ನಿರ್ಬಂಧ ಹೇರಬೇಕು.
ನೈಟ್ ಕಫ್ರ್ಯೂ ಹಾಕೋದ್ರಿಂದ ಯಾವುದೇ ಪ್ರಯೋಜನೆ ಇಲ್ಲ. ಹೀಗಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಹೇಳಿದರು.