ನವದೆಹಲಿ : ರಾಜ್ಯಗಳ ಮನವಿಯ ಮೇರಿಗೆ ವಲಸೆ ಕಾರ್ಮಿಕರನ್ನು ಅವರ ತವರಿಗೆ ಕಳುಹಿಸಿ ಕೊಡಲು ಕೇಂದ್ರ ಸರ್ಕಾರ ವಿಶೇಷ ರೈಲಿನ ವ್ಯವಸ್ಥೆ ಮಾಡುತ್ತಿದೆ. ಆದ್ರೆ ಕೂಲಿ ಕಾರ್ಮಿಕರಿಂದ ರೈಲ್ವೆ ಟಿಕೆಟ್ ದರವನ್ನು ಪಡೆದುಕೊಳ್ಳುತ್ತಿರುವುದಕ್ಕೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಬಗ್ಗೆ ಸಿಡಿದೆದ್ದಿರುವ ಕಾಂಗ್ರೆಸ್ ಕಾರ್ಮಿಕರ ಪ್ರಯಾಣದ ದರವನ್ನ ತಾನೇ ನೀಡುವುದಾಗಿ ಹೇಳಿದೆ
ಈ ಬಗ್ಗೆ ಮಾತನಾಡಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ವಲಸಿಗರ ರೈಲು ಪ್ರಯಾಣದ ವೆಚ್ಚನ್ನು ಭರಿಸಲು ಕಾಂಗ್ರೆಸ್ ನಿರ್ಧರಿಸಿದೆ. ಇದಕ್ಕಾಗಿ ಪ್ರತಿ ರಾಜ್ಯದ ಪ್ರದೇಶ ಕಾಂಗ್ರೆಸ್ 1 ಕೋಟಿ ರೂಪಾಯಿ ನೀಡಲಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಸರ್ಕಾರ, ಗುಜರಾತ್ ನಲ್ಲಿ ಸಾರ್ವಜನನಿಕ ಸಮಾರಂಭ ನಡೆಸುವುದಕ್ಕಾಗಿ 100ಕೋಟಿ ವೆಚ್ಚ ಮಾಡುತ್ತೆ. ರೇಲ್ವೆ ಇಲಾಖೆ ಪಿಎಂ ಕೇರ್ ಗೆ 150 ಕೋಟಿ ನೀಡುತ್ತೆ. ಆದ್ರೆ, ವಲಸಿಗರನ್ನು ಉಚಿತವಾಗಿ ಅವರ ತವರೂರಿಗೆ ತಲುಪಿಸಲು ಇವರಿಂದ ಸಾಧ್ಯವಾಗ್ತಿಲ್ಲ. ಹೀಗಾಗಿ ವಲಸಿಗರ ಹೆಗಲಿನೊಂದಿಗೆ ಹೆಗಲು ಜೋಡಿಸಲು ಕಾಂಗ್ರೆಸ್ ಸಿದ್ಧವಾಗಿದೆ ಎಂದು ಸೋನಿಯಾ ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೇಲ್ವೆ ಇಲಾಖೆ, ವಲಸಿಗರಿಂದ ಶೇಕಡಾ 85 ರಷ್ಟು ಪ್ರಯಾಣ ದರವನ್ನು ಮಾತ್ರ ತೆಗೆದುಕೊಳ್ಳಲಾಗ್ತಿದೆ. ಉಳಿದ 15% ಹಣವನ್ನ ಆಯಾ ರಾಜ್ಯ ಸರ್ಕಾರಗಳಿಂದ ವಸೂಲಿ ಮಾಡಲಾಗುತ್ತದೆ ಎಂದು ಸ್ಪಷ್ಟನೆ ಕೊಟ್ಟಿದೆ.