ಮಕ್ಕಳ ವಿವರಗಳನ್ನ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಎಚ್ಚರಿಕೆ…!
ಬೆಂಗಳೂರು : ಸೋಷಿಯಲ್ ಮೀಡಿಯಾಗಳಲ್ಲಿ ಫಾರ್ವರ್ಡ್ ಮೆಸೇಜ್ ಗಳು , ಆಗಾಗ ಬರುತ್ತಲೇ ಇರುತ್ತವೆ.. ಅದ್ರಲ್ಲಿ ಹೆಚ್ಚಾಗಿ ರಕ್ತ, ಆಕ್ಸಿಜನ್, ಮುಂತಾದ ವೈದ್ಯಕೀಯ ಅಗತ್ಯಗಳ ಬಗ್ಗೆ ಜಾಲತಾಣದಲ್ಲಿ ಬೇಡಿಕೆಗಳು ಹರಿದಾಡುತ್ತಿರುವೆ.. ಈ ರೀತಿಯಾದ ಕೆಲವು ಜಾಹೀರಾತುಗಳು ಕೂಡ ಗಮನಕ್ಕೆ ಬರುತ್ತಿರುತ್ತೆ..
ಹಾಗೆಯೇ ಈ ರೀತಿಯ ಸಂದೇಶ ಬಂದರೆ, ಅನೇಕರು ಇದನ್ನ ನಂಬಿ ಹಿಂದೂ ಮುಂದು ನೊಡದೇ ವಾಟ್ಸಾಪ್ ಫೇಸ್ ಬುಕ್ ಗಳಲ್ಲಿ ಗ್ರೂಪ್ ಗಳಿಗೆ , ಸ್ನೇಹಿತರಿಗೆ ಶೇರ್ ಮಾಡ್ತಾರೆ.. ಆದರೆ, ಈ ರೀತಿ ಜಾಲತಾಣದಲ್ಲಿ ಮಕ್ಕಳ ವಿವರಗಳನ್ನು ಹಾಕುವುದರಿಂದ ಅವರಿಗೆ ಅಪಾಯ ಉಂಟಾಗಬಹುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಚ್ಚರಿಸಿದೆ.
ಹೌದು ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ‘ದಯವಿಟ್ಟು ತೊಂದರೆಯಲ್ಲಿರುವ ಮಕ್ಕಳ ಭಾವಚಿತ್ರಗಳನ್ನು ಮತ್ತು ಸಂಪರ್ಕದ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ. ಏಕೆಂದರೆ ಇದರಿಂದ ಮಕ್ಕಳ ಜೀವಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆಯಿದೆ. ಹೀಗಾಗಿ ನೇರವಾಗಿ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ, ಮಾಹಿತಿ ನೀಡಿ’ ಎಂದು ತಿಳಿಸಿದೆ.