ಗದಗ : ಕಾಂಗ್ರೆಸ್ (Congress) ಪಕ್ಷಕ್ಕೆ ಮತ ಹಾಕಿದರೆ ಪಾಕಿಸ್ತಾನಕ್ಕೆ (Pakistan) ಮತ ಹಾಕಿದಂತೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದ್ದಾರೆ.
ಗದಗದಲ್ಲಿ (Gadag) ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದೇ ಇಲ್ಲ. ಇನ್ನೆಲ್ಲಿಂದ ಇದು ಭಜರಂಗದಳ ಬ್ಯಾನ್ ಮಾಡುತ್ತದ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ನವರು ಮುಸ್ಲಿಂ ಮತಕ್ಕಾಗಿ ಈ ರೀತಿ ಮಾಡುತ್ತಿದೆ. ಅದಕ್ಕೆ ಕೇವಲ ಮುಸ್ಲಿಂ ಮತ ಮಾತ್ರ ಬೇಕು ಎಂದು ಆರೋಪಿಸಿದ್ದಾರೆ.
2047ಕ್ಕೆ ಭಾರತವನ್ನು ಇಂಸ್ಲಾಂ ಧರ್ಮವನ್ನಾಗಿ ಮಾಡುವುದೇ ಪಿಎಫ್ಐ (PFI) ಸಂಘಟನೆಯ ಮೂಲ ಗುರಿಯಾಗಿದೆ. ಪಿಎಫ್ಐ ಹಾಗೂ ಕಾಂಗ್ರೆಸ್ ಆಂತರಿಕ ಒಪ್ಪಂದ ಇದೆ. ಆ ದೃಷ್ಟಿಯಿಂದ ಕಾಂಗ್ರೆಸ್ನವರು ಬಜರಂಗದಳ (Bajrang Dal) ನಿಷೇಧ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎದು ವಾಗ್ದಾಳಿ ನಡೆಸಿದ್ದಾರೆ.








