ಗೂಗಲ್ ಮ್ಯಾಪ್ ನಂಬಿ ಹೋಗಿದ್ದವ ಪ್ರಾಣ ಕಳೆದುಕೊಂಡ..!
ಇತ್ತೀಚೆಗೆ ಎಲ್ಲೇ ಹೋಗ್ಬೇಕಾದ್ರು. ಯಾವುದೇ ಗೊತ್ತಿಲ್ಲದ ಸ್ಥಳಗಳಿಗೆ ಹೋಗ್ಬೇಕಾದ್ರು, ಬಸ್, ಕಾರು , ದ್ವಿಚಕ್ರ ವಾಹನ, ಇಲ್ಲ ಬೈ ವಾಕ್ ಗೂ ಕೂಡ ಜನರು ಹೆಚ್ಚಾಗಿ ಗೂಗಲ್ ಮ್ಯಾಪ್ ಅನ್ನ ಅವಲಂಭಿಸಿದ್ದಾರೆ. ಯಾರೂ ನೋಡಿದ್ರೂ ಗೂಗಲ್ ಮ್ಯಾಪ್ ಸಹಕಾರದಿಂದಲೇ ಪ್ರಯಾಣ ಮಾಡ್ತಿದ್ದಾರೆ. ಆದ್ರೆ ಆದರೆ ಗೂಗಲ್ ಮ್ಯಾಪ್ ಎಷ್ಟರ ಮಟ್ಟಿಗೆ ಪರಿಣಾಮಕಾರಿ, ಸೇಫ್ ಅನ್ನೋ ಪ್ರಶ್ನೆಗಳು ಆಗಾಗ ಕೇಳಿಬರುತ್ತಲೇ ಇರುತ್ವೆ.. ಇದೀಗ ಈ ಗೂಗಲ್ ಮ್ಯಾಪ್ ನೇ ನಂಬಿಕೊಂಡು ಚಲಿಸುತ್ತಿದ್ದ ವ್ಯಕ್ತಿಯೋರ್ವ ತನ್ನ ಜೀವನವನ್ನೇ ಕಳೆದುಕೊಂಡಿದ್ದಾನೆ.
‘ರಾಖಿ ಭಾಯ್’ಗೆ ಆರೋಗ್ಯ ಇಲಾಖೆಯಿಂದ ನೋಟಿಸ್..! ಯಾಕೆ ಗೊತ್ತಾ?
ಮಹಾರಾಷ್ಟ್ರದಲ್ಲಿ ಗೂಗಲ್ ಮ್ಯಾಪ್ ಸಹಾಯದಿಂದ ಕೆಲವು ಯುವಕರು ಪ್ರಯಾಣ ಮಾಡ್ತಿದ್ದ ವೇಳೆ ಅತ್ಯಂತ ಅಪಾಯಕಾರಿ ಸ್ಥಳದಲ್ಲಿ ಸಿಲುಕಿದ್ದಾರೆ. ಫಾರ್ಚೂನರ್ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ಯುವಕರ ಪೈಕಿ ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾನೆ. ಮೂವರು ಯುವಕರು ಟೊಯೊಟಾ ಫಾರ್ಚೂನರ್ ಕಾರಿನಲ್ಲಿ ಮಹಾರಾಷ್ಟ್ರದ ಅತಿ ಎತ್ತರದ ಪರ್ವತವಾದ ಕಲ್ಸುಬೈಗೆ ಚಾರಣಕ್ಕೆಂದು ಹೋಗಿದ್ದಾರೆ. ಅವರಿಗೆ ಸ್ಥಳವು ಹೊಸದಾಗಿರುವ ಕಾರಣಕ್ಕೆ ಗೂಗಲ್ ಮ್ಯಾಪ್ ನೆರವನ್ನು ಪಡೆದಿದ್ದಾರೆ.
ಮತ್ತೊಬ್ಬಳ್ಳನ್ನ ಪ್ರೀತಿಸುತ್ತಿದ್ದ ಪ್ರಿಯಕರನಿಗೆ ಬೈಕ್ ನಲ್ಲಿ ಹೋಗುವಾಗಲೇ ಬೆನ್ನಿಗೆ ಚೂರಿ ಹಾಕಿದಳು..!
ಗೂಗಲ್ ಮ್ಯಾಪ್ ಮೇಲಿನ ಅತಿಯಾದ ಆತ್ಮವಿಶ್ವಾಸದಿಂದಾಗಿ ಬೇರೆಯವರ ಬಳಿ ವಿಚಾರಿಸಲೂ ಹೋಗದೇ ಅಲಕ್ಷ್ಯ ಮಾಡಿ ಸಂಪೂರ್ಣವಾಗಿ ಗೂಗಲ್ ಅನ್ನೇ ನಂಬಿಕೊಂಡಿದ್ದಾರೆ. ಗೂಗಲ್ ಮ್ಯಾಪ್ ತೋರಿಸಿದ ಹಾದಿಯಲ್ಲಿ ಸಾಗಿದ ಯುವಕರು ನೀರಿನಿಂದ ಆವೃತ್ತವಾಗಿರುವ ಸೇತುವೆ ಮೇಲೆ ಹೋಗಿದ್ದಾರೆ. ಇಡೀ ಸೇತುವೆ ನದಿ ನೀರಿನಿಂದ ಮುಳುಗಿದೆ. ನೀರಿನ ವೇಗವೂ ಹೆಚ್ಚಾಗಿದೆ. ಯುವಕರು ಕಾರನ್ನು ಸೇತುವೆಯ ಮೇಲೆ ಸಾಧ್ಯವಾದಷ್ಟು ವೇಗವಾಗಿ ಚಾಲನೆ ಮಾಡಿದ್ದಾರೆ. ಇದೇ ವೇಳೆ ನೀರಿನ ಹರಿವು ಹೆಚ್ಚಾಗಿ ಕಾರನ್ನು ನದಿಗೆ ಎಳೆದೊಯ್ದಿದೆ.
ಅಮೆರಿಕಾದಲ್ಲಿ ಟ್ರಂಪ್ ಬೆಂಬಲಿಗರ ಹಿಂಸಾಚಾರ : ದಂಧೆಕೋರರ ವಿರುದ್ಧ 160 ಪ್ರಕರಣಗಳು ದಾಖಲು..!
ಕಾರಿನಲ್ಲಿದ್ದ ಇಬ್ಬರು ಯುವಕರು ಈಜಿ ಹೇಗೋ ದಡ ಸೇರಿದರೆ. ಆದ್ರೆ ಕಾರು ಚಾಲನೆ ಮಾಡುತ್ತಿದ್ದ ಸತೀಶ್ ಕುಲೆ ಎಂಬಾತ ಕಾರಿನೊಳಗೆ ಸಿಳುಕಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ. ಸ್ಥಳೀಯರು ಆತನನ್ನು ರಕ್ಷಿಸಲು ಪ್ರಯತ್ನ ಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ಇತ್ತೀಚೆಗೆ ಇಂತಹದ್ದೇ ಒಂದು ಘಟನೆ ರಷ್ಯಾದಲ್ಲೂ ನಡೆದಿತ್ತು. ಕೆಲವು ಯುವಕರು ಗೂಗಲ್ ಮ್ಯಾಪ್ ನೆರವು ಪಡೆಯಲು ಹೋಗಿ ಅಪಾಯಕಾರಿ ಸ್ಥಳದಲ್ಲಿ ಸಿಲುಕಿದ್ದರು. ಅವರ ನೆರವಿಗೆ ಯಾರೂ ಧಾವಿಸದ ಕಾರಣ ಎಲ್ಲರೂ ಅಲ್ಲಿಯೇ ಮೃತ ಪಟ್ಟಿದ್ದರು. ಇನ್ನೂ ಗೂಗಲ್ ಮ್ಯಾಪ್ ನಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಇಲ್ಲದಿರುವುದು ಈ ಅಪಘಾತಕ್ಕೆ ಮುಖ್ಯ ಕಾರಣ ಎಂದು ಹೇಳಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel