ಬಾಗಲಕೋಟೆ : ಕಳೆದ ಕೆಲ ದಿನಗಳಿಂದ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಸ್ಥಾನ ಕಾಲಿಯಿತ್ತು. ಕೊನೆಗೂ ರಾಜ್ಯ ಸರ್ಕಾರದ ಶಿಪಾರಸ್ಸಿಗೆ ಅಸ್ತು ಅಂದ ರಾಜ್ಯಪಾಲರು ಡಾ.ಕೆ.ಎಂ.ಇಂದ್ರೇಶ್ ಕುಲಪತಿಯಾಗಿ ನೇಮಕ ಮಾಡಿದ್ದಾರೆ. 2018 ಜೂನ್ ತಿಂಗಳಿಂದ ಖಾಲಿ ಇದ್ದ ಹುದ್ದೆಗೆ ಡಾ.ಕೆ.ಎಂ ಇಂದ್ರೇಶ್ ಅವರ ಹೆಸರನ್ನು ರಾಜ್ಯ ಸರ್ಕಾರ ಮೊದಲ ಬಾರಿಗೆ ಶಿಪಾರಸ್ಸು ಮಾಡಿತ್ತು. ಆಗ ರಾಜ್ಯಪಾಲರು ಒಪ್ಪಿಗೆ ಸೂಚಿಸಿರಲಿಲ್ಲ. ರಾಜ್ಯ ಸರ್ಕಾರ ಮತ್ತೊಮ್ಮೆ ಡಾ.ಕೆ.ಎಂ ಇಂದ್ರೇಶ್ ಅವರ ಹೆಸರನೇ ಸೂಚಿಸಿತ್ತು. ಇದೀಗ ಡಾ.ಕೆ.ಎಂ ಇಂದ್ರೇಶ್ ಕುಲಪತಿಗಳ ನೇಮಕವಾಗಿದ್ದಾರೆ. ಡಾ.ಕೆ.ಎಂ.ಇಂದ್ರೇಶ್ 22 ತಿಂಗಳಿಂದ ಪ್ರಭಾರಿ ಕುಲಪತಿ ಆಗಿದ್ದರು. ಮುಂದಿನ ನಾಲ್ಕು ವರ್ಷಗಳ ಅವಧಿಗೆ ಕುಲಪತಿಯಾಗಿ ಡಾ.ಕೆ.ಎಂ. ಇಂದ್ರೇಶ್ ಕಾರ್ಯನಿರ್ವಹಿಸಲಿದ್ದಾರೆ. ಆದ್ರೆ, 62 ವಯಸ್ಸಿನ ಇಂದ್ರೇಶ್, ಮೂರು ವರ್ಷ ಎರಡು ತಿಂಗಳಿಗೆ ನಿವೃತ್ತಿ ಆಗಲಿದ್ದಾರೆ…. ಡಾ.ಇಂದ್ರೇಶ್, ಬಾಗಲಕೋಟೆ ತೋವಿವಿ ಮೂರನೇ ಪೂರ್ಣಾವಧಿ ಕುಲಪತಿಯಾಗಿ ಇಂದ್ರೇಶ್ ಕಾರ್ಯನಿರ್ವಹಿಸಲಿದ್ದಾರೆ.
ಕೈ ಪಾಳಯದಲ್ಲಿ ಬಂಗಲೆಗಾಗಿ ಬೀದಿ ರಂಪಾಟ: ಹಿರಿಯ ನಾಯಕ ಮಹದೇವಪ್ಪ ಮನೆಯಲ್ಲಿದ್ದಾಗಲೇ ಜೆಸಿಬಿ ನುಗ್ಗಿಸಿದ ಭೈರತಿ ಸುರೇಶ್-ಪಾಪ ಅವರಿಗೆ ತುಂಬಾ ಆತುರವಿರಬಹುದು ಎಂದ ಮಹದೇವಪ್ಪ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆಯುವುದು ಸಾಮಾನ್ಯ. ಆದರೆ ಈಗ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಇಬ್ಬರು ಪ್ರಭಾವಿ ನಾಯಕರ ನಡುವೆ ಸರ್ಕಾರಿ ಬಂಗಲೆಗಾಗಿ ಜಂಗೀ ಕುಸ್ತಿ...








