ಬೆಂಗಳೂರು : ಅಂತರಾಷ್ಟ್ರೀಯ ಯೋಗ ದಿನವಾದ ಇಂದು ಪವರ್ ಸ್ಟಾರ್ ಪುನೀತ್ ಅಣ್ಣಾವ್ರ ಯೋಗ ಭಂಗಿಗಳ ವಿಡಿಯೋವನ್ನು ಶೇರ್ ಮಾಡಿದ್ದಾರೆ. ತಮ್ಮ ಟ್ವೀಟರ್ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದೆ.
ಡಾ, ರಾಜಕುಮಾರ್ ಕನ್ನಡ ನಾಡಿನ ವರನಟ, ಅಭಿಮಾನಿಗಳ ಪಾಲಿನ ಆರಾಧ್ಯ ದೈವ, ಅಭಿಮಾನಿಗಳೇ ದೇವರು ಎಂದ ಮಯೂರು ವಿಶ್ವ ಯೋಗ ದಿನದಂದು ನೆನಪಿಗೆ ಬರುತ್ತಾರೆ. ಭಾರತದ ಚಿತ್ರಲೋಕದಲ್ಲಿ ತಮ್ಮ ಚಾಪು ಮೂಡಿಸಿದ್ದ ಡಾ.ರಾಜಕುಮಾರ್ ತಮ್ಮ 70ರ ವಯಸ್ಸಿನಲ್ಲೂ ಫಿಟ್ನೆಸ್ ಹೊಂದಿದ್ದರು. ಅದರ ಬಹುಮಖ್ಯ ಕಾರಣ ಅವರು ಮಾಡುತ್ತಿದ್ದ ಯೋಗಾಭ್ಯಾಸ.
ಕಾಮನಬಿಲ್ಲು ಚಿತ್ರದಲ್ಲಿ ಅಭಿಮಾನಿಗಳ ಪಾಲಿನ ಅಣ್ಣಾವ್ರು ಡಾ.ರಾಜಕುಮಾರ್ ಯೋಗ ಮಾಡಿದ ದೃಶ್ಯಗಳು ಸಾಕಷ್ಟು ಜನಕ್ಕೆ ಸ್ಫೂರ್ತಿ ನೀಡಿದೆ. ತಮ್ಮ ಸಿನಿಮಾ ಜೀವನದ ಜೊತೆ ಜೊತೆಗೆ ಅಣ್ಣಾವ್ರು ಯೋಗಾಭ್ಯಾಸ ಮಾಡುತ್ತಿದ್ದರು. ಅದ್ದರಿಂದಲೆ ಅಣ್ಣಾವ್ರು ಫಿಟ್ನೆಸ್ ಹೊಂದಿದ್ದರು.
ಅಂತರಾಷ್ಟ್ರೀಯ ಯೋಗ ದಿನವಾದ ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್, ತಮ್ಮ ತಂದೆ ಡಾ.ರಾಜಕುಮಾರ್ ಮಾಡುತ್ತಿದ್ದ ಯೋಗ ಭಂಗಿಗಳ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಆ ಮೂಲಕ ಅಣ್ಣಾವ್ರ ನೆನಪು ಮಾಡಿಕೊಂಡಿದ್ದಾರೆ. ಜೊತೆಗೆ ಅಂತರರಾಷ್ಟ್ರೀಯ ಯೋಗ ದಿನಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.