ಆಧುನಿಕ ರಂಗಭೂಮಿ ಹರಿಕಾರ ಇಬ್ರಾಹಿಂ ಅಲ್ಕಜಿ ಅವರು ತಡರಾತ್ರಿ ವಿಧಿವಶರಾಗಿದ್ದಾರೆ. ಭಾರತೀಯ ರಂಗಭೂಮಿಗೆ ಕ್ರಾಂತಿಕಾರಿ ಬದಲಾವಣೆಗಳನ್ನು ತಂದ ಕೊನೆಯುಸಿರರೆಳೆದಿದ್ದಾರೆ. 94 ವರ್ಷದ ಇಬ್ರಾಹಿಮ್ ಅಲ್ಕಜಿ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೀಗ ದೆಹಲಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಆಧುನಿಕ ರಂಗಭೂಮಿಯ ಹರಿಕಾರ ಎಂದೇ ಕರೆಯಲ್ಪಡುವ ಇಬ್ರಾಹಿಂ ಅವರು ವಿಶ್ವದ ಪ್ರಮುಖ ನಾಟಕ ಶಾಲೆಯಾದ ರಾಡಾನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಮೋಹನ್ ರಾಕೇಶ್ ಅವರ ‘ಆಶಾಡ್ ಕಾ ಏಕ್ ದಿನ್’, ಧರ್ಮವೀರ್, ಅಂಧಾ ಯುಗ್, ತುಗಲಕ್ ಸೇರಿದಂತೆ ಹಲವಾರು ಖ್ಯಾತ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಇವರ ಅಗಲಿಕೆಗೆ ಪ್ರಧಾನಿ ಮೋದಿ, ಲೇಖಕರು ಹಾಗೂ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.








