“ವಿರಾಟ್ ಫಿಟ್ ಇದ್ದಾರೆ’’  – ದ್ರಾವಿಡ್. ಮೂರನೇ ಟೆಸ್ಟ್ ಗೆ ಮರಳುವ ಸಾಧ್ಯತೆ.

1 min read

“ವಿರಾಟ್ ಫಿಟ್ ಇದ್ದಾರೆ’’  – ದ್ರಾವಿಡ್. ಮೂರನೇ ಟೆಸ್ಟ್ ಗೆ ಮರಳುವ ಸಾಧ್ಯತೆ.

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲಿನ ನಂತರ  ನಾಯಕ ವಿರಾಟ್ ಕೊಹ್ಲಿ ಬಗ್ಗೆ ಬಹುದೊಡ್ಡ ಸುದ್ದಿ ಹೊರಬಿದ್ದಿದೆ. ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್  ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಫಿಟ್ನೆಸ್ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದು, ಮೂರನೇ ಟೆಸ್ಟ್ನಲ್ಲಿ ವಿರಾಟ್ ತಂಡಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ನಾಯಕ ವಿರಾಟ್ ಕೊಹ್ಲಿ ಎರಡನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಕೆಎಲ್ ರಾಹುಲ್ ತಂಡದ ನಾಯಕತ್ವ ವಹಿಸಿಕೊಂಡರು. ಈ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳಿಂದ ಸೋತಿತ್ತು. ಇದೀಗ ಉಭಯ ತಂಡಗಳ ನಡುವಿನ ಸರಣಿ 1-1ರಲ್ಲಿ ಸಮಬಲಗೊಂಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್, ‘ನೆಟ್ಸ್‌ನಲ್ಲಿ ಕೊಹ್ಲಿ ಅಭ್ಯಾಸ ಮಾಡುತ್ತಿರುವ ರೀತಿ, ಅವರು ಫಿಟ್‌ನಂತೆ ಕಾಣುತ್ತಾರೆ. ನಾನು ಇಲ್ಲಿಯವರೆಗೆ ಫಿಸಿಯೋ ಜೊತೆ ಚರ್ಚಿಸಿಲ್ಲವಾದರೂ, ಆದರೆ ನಾನು ಕೇಳಿದ ಮತ್ತು ಕೊಹ್ಲಿ ಜೊತೆ ಸಂಭಾಷಣೆಯಿಂದ ಕೋಹ್ಲಿ ಫಿಟ್ ಇದ್ದಾರೆ ಎಂದು  ನನಗೆ ಏನನಿಸುತ್ತದೆ

ಬೆನ್ನಿನ ಸೆಳೆತದಿಂದಾಗಿ ವಿರಾಟ್ ಕೊಹ್ಲಿ ಎರಡನೇ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಟಾಸ್‌ಗೆ ಕೆಲವು ನಿಮಿಷಗಳ ಮೊದಲು ವಿರಾಟ್ ಈ ಪಂದ್ಯದಿಂದ ನಿರ್ಗಮಿಸುವ ಸುದ್ದಿ ಬಂದಿತು. ಅವರ ಬದಲಿಗೆ ಕೆಎಲ್ ರಾಹುಲ್ ಟಾಸ್‌ಗೆ ಬಂದಿದ್ದರು.

ಜೋಹಾನ್ಸ್‌ಬರ್ಗ್‌ನಲ್ಲಿ ಭಾರತಕ್ಕೆ ಮೊದಲ ಸೋಲು

ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ 29 ವರ್ಷಗಳ ನಂತರ ಭಾರತ ತಂಡದ ಮೊದಲ ಸೋಲು ಇದಾಗಿದೆ. 1992ರಲ್ಲಿ ಈ ಮೈದಾನದಲ್ಲಿ ಟೀಂ ಇಂಡಿಯಾ ಮೊದಲ ಟೆಸ್ಟ್ ಆಡಿತ್ತು. ಆ ಪಂದ್ಯ ಡ್ರಾ ಆಗಿತ್ತು. ಈ ಪಂದ್ಯಕ್ಕೂ ಮುನ್ನ ಇಲ್ಲಿ ಆಡಿದ ಐದು ಟೆಸ್ಟ್ ಪಂದ್ಯಗಳಲ್ಲಿ ಭಾರತ ಎರಡರಲ್ಲಿ ಗೆದ್ದಿದ್ದರೆ, ಮೂರು ಪಂದ್ಯಗಳು ಡ್ರಾ ಆಗಿದ್ದವು. 29 ವರ್ಷಗಳಲ್ಲಿ, ದಕ್ಷಿಣ ಆಫ್ರಿಕಾ ತಂಡವು ಭಾರತ ತಂಡವನ್ನು ಸೋಲಿಸಲು ಸಾಧ್ಯವಾಗಲಿಲ್ಲ, ಆದರೆ ಗುರುವಾರ ಈ ಸರಣಿಯು ಆ ದಾಖಲೆ ಮುರಿದಿದೆ

ವಿರಾಟ್ ಅನುಪಸ್ಥತಿಯಲ್ಲಿ ರಾಹುಲ್ ಮೊದಲ ಭಾರಿಗೆ ಟೆಸ್ಟ್ ಕ್ಯಾಪ್ಟನ್ಸಿ ಮುನ್ನಡೆಸಿದ್ದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd