Dravid | ಬುಮ್ರಾ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು ?
ಟಿ 20 ವಿಶ್ವಕಪ್ ನಿಂದ ಟೀಂ ಇಂಡಿಯಾದ ಸ್ಟಾರ್ ಜಸ್ ಪ್ರಿತ್ ಬುಮ್ರಾ ಅವರು ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಆದ್ರೆ ಈ ಬಗ್ಗೆ ಬಿಸಿಸಿಐ ಅಧಿಕೃತ ಮಾಹಿತಿ ನೀಡಿಲ್ಲ. ಕೇವಲ ಸೌತ್ ಆಫ್ರಿಕಾ ಸರಣಿಗೆ ಮಾತ್ರ ದೂರವಾಗಿದ್ದಾರೆ ಎಂದು ಹೇಳಿದೆ.
ಈ ಬಗ್ಗೆ ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದು, ಬುಮ್ರಾ ಅವರು ಗಾಯಗೊಂಡು ಕೇವಲ ಸೌತ್ ಆಫ್ರಿಕಾ ಸರಣಿಯಿಂದ ಮಾತ್ರ ದೂರವಾಗಿದ್ದಾರೆ.

ಪ್ರಸ್ತುತ ಎನ್ ಸಿಎನಲ್ಲಿ ವೈದ್ಯರ ಪರಿವೀಕ್ಷಣೆಯಲ್ಲಿದ್ದಾರೆ. ಎನ್ ಸಿ ಎಯಿಂದ ಬರುವ ರಿಪೋರ್ಟ್ ಗಾಗಿ ನಾವು ಎದುರು ನೋಡುತ್ತಿದ್ದೇವೆ.
ಇನ್ನೆರೆಡು ದಿನಗಳಲ್ಲಿ ಬುಮ್ರಾ ಬಗ್ಗೆ ಕ್ಲಾರಿಟಿ ಸಿಗಲಿದೆ. ಅಲ್ಲಿಯವರೆಗೂ ಬುಮ್ರಾ ಟಿ 20 ವಿಶ್ವಕಪ್ ಗೆ ಲಭ್ಯವಿರಲಿದ್ದಾರೆ.
ಒಬ್ಬ ಮುಖ್ಯ ಬೌಲರ್ ಗಾಯಗೊಂಡಿಲ್ಲ ಅಂದ್ರೆ ನಮಗೆ ಒಳ್ಳೆಯ ಸುದ್ದಿಯೇ. ಈ ಪರಿಸ್ಥಿತಿಯಲ್ಲಿ ಬುಮ್ರಾ ಬೇಗ ಚೇತರಿಸಿಕೊಳ್ಳಬೇಕು.
ಟಿ 20 ವಿಶ್ವಕಪ್ ನಲ್ಲಿ ಬುಮ್ರಾ ಆಡಬೇಕು ಎಂದು ನಾನು ಕೋರಿಕೊಳ್ಳುತ್ತೇನೆ ಎಂದಿದ್ದಾರೆ.
ಇತ್ತ ಬುಮ್ರಾ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿ, ಬುಮ್ರಾ ಟಿ 20 ವಿಶ್ವಕಪ್ ನಿಂದ ಇನ್ನೂ ದೂರವಾಗಿಲ್ಲ. ಅವರು ಆಡುವ ಅವಕಾಶಗಳಿವೆ ಎಂದಿದ್ದಾರೆ.