ಕೊರೊನಾ ವಿರುದ್ಧ ಹೋರಾಡಲು ಮತ್ತೊಂದು ಔಷಧ : ಇಂದು 2ಡಿಜಿ ಬಿಡುಗಡೆ

1 min read

ಕೊರೊನಾ ವಿರುದ್ಧ ಹೋರಾಡಲು ಮತ್ತೊಂದು ಔಷಧ : ಇಂದು 2ಡಿಜಿ ಬಿಡುಗಡೆ

ನವದೆಹಲಿ : ದೇಶದಲ್ಲಿ ಸದ್ಯ ಕೊರೊನಾ ವಿರುದ್ಧ ದೇಶಿ ಲಸಿಕೆಗಳಾದ ಕೋವ್ಯಾಕ್ಸಿನ್, ಕೋವಿಶೀಲ್ಡ್ ಹೋರಾಟ ನಡೆಸುತ್ತಿವೆ.

ಇದಕ್ಕೆ ಇನ್ನಷ್ಟು ಬಲ ನೀಡುವ ಉದ್ದೇಶದಿಂದ ಕೋವಿಡ್ ವಿರುದ್ಧ ಹೋರಾಡಲು ಡಿಆರ್ ಡಿಒ ಅಭಿವೃದ್ಧಿಪಡಿಸಿರುವ ಕೊರೊನಾ ಸೋಂಕು ನಿರೋಧಕವಾಗಿ ಕೆಲಸ ಮಾಡಬಲ್ಲ 2-ಡಿಆಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಔಷಧ ಇಂದು ಬಿಡುಗಡೆಯಾಗಲಿದೆ.

ಇದರ ಮೊದಲ ಡೋಸ್ ಅನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಳಗ್ಗೆ 10.30ಕ್ಕೆ ಬಿಡುಗಡೆಗೊಳಿಸಲಿದ್ದಾರೆ.

COVID

ಅಲ್ಲದೇ 2-ಡಿಆಕ್ಸಿ-ಡಿ-ಗ್ಲೂಕೋಸ್ ಔಷಧದ 10 ಸಾವಿರ ಡೋಸ್ ಗಳನ್ನು ಸಚಿವರು ಇದೇ ವೇಳೆ ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ವಿತರಿಸಲಿದ್ದಾರೆ.

2-ಡಿಜಿ ಔಷಧಿಯನ್ನು ಹೈದರಾಬಾದ್ ಮೂಲದ ಫಾರ್ಮಾ ದೈತ್ಯ ಡಾ.ರೆಡ್ಡಿಸ್ ಲ್ಯಾಬೊರೇಟರೀಸ್ ಸಹಯೋಗದೊಂದಿಗೆ ಡಿಆರ್‍ಡಿಒ ಲ್ಯಾಬ್ ತಯಾರಿಸಿದೆ.

ದೇಶದ ಔಷಧ ನಿಯಂತ್ರಕ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ತುರ್ತು ಬಳಕೆಗಾಗಿ ಈ ಔಷಧಿಯನ್ನು ಈಗಾಗಲೇ ಅನುಮೋದಿಸಿದೆ.

corona cases

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd