ADVERTISEMENT
Friday, June 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ವಿಶೇಷ ಚೇತನರಿಗೆ ಭರವಸೆಯ ಬೆಳಕು: “ಧೀಮನ್ ಸೋಷಿಯಲ್ ವೆಲ್ ಫೇರ್ ಟ್ರಸ್ಟ್”..!

Namratha Rao by Namratha Rao
October 28, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

Dream riders

“ಡ್ರೀಮ್ಸ್ ರೈಡರ್ಸ್”… ವಿಶೇಷ ಚೇತನರಿಗೆ ಹೊಸ ಹುರುಪು, ಭರವಸೆ, ಅವರಲ್ಲಿ ಆತ್ಮಸ್ಥೈರ್ಯ, ಆತ್ಮವಿಶ್ವಾಸ ಬೆಳೆಸಿ, ಅವರ ಸಾಧನೆಯ ಕನಸಿಗೆ ನೀರೆರೆದು ಅವರ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟು ಪ್ರೋತ್ಸಾಹಿಸಿದ ಒಂದು ವಿಶೇಷ ಕಾರ್ಯಕ್ರಮ. ಇಂಹದ್ದೊಂದು ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ್ದು … “ಧೀಮನ್ ಸೋಷಿಯಲ್ ವೆಲ್ ಫೇರ್ ಟ್ರಸ್ಟ್”. “ಧೀಮನ್ ಸೋಷಿಯಲ್ ವೆಲ್ ಫೇರ್ ಟ್ರಸ್ಟ್”.. ಶೋಭನಾ ಧೀಮನ್ ಅವರು ನಡೆಸುತ್ತಿರುವ ಈ ಟ್ರಸ್ಟ್ ನ ಸಮಾಜಮುಖಿ ಕಾರ್ಯಗಳು ನಿಜಕ್ಕೂ ಶ್ಲಾಘನೀಯ. ಈ ಟ್ರಸ್ಟ್ ವತಿಯಿಂದ ನಿಜಕ್ಕೂ ಅನೇಕ ಪ್ರತಿಭೆಗಳ ಅನಾವರಣಗೊಳ್ಳುತ್ತೆ.

Related posts

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

ಮೇಲ್ಮನೆ ಕದನ…ಸೋಲು ಗೆಲುವಿನ ಲೆಕ್ಕಾಚಾರ..!

June 18, 2026
10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

June 18, 2026

ಹೌದು.. ಈ ಟ್ರಸ್ಟ್ ವಿಶೇಷವಾಗಿ ವಿಶೇಷ ಚೇತನರ ಪ್ರತಿಭೆಗಳಿಗೆ ಆಗಾಗ ಇಂತಹ ಅದ್ಭುತ ವೇದಿಕೆಗಳ ಕಲ್ಪಿಸಿಕೊಡುವ ಮೂಲಕ ಅವರ ಕನಸಿಗೆ ನೀರೆರೆಯುತ್ತೆ. ಅವರ ಪ್ರತಿಭೆಗಳನ್ನ ಜಗತ್ತಿನ ಮುಂದೆ ತೋರಿಸಲು ಉತ್ತಮ ಫ್ಲಾಟ್ ಫಾರ್ಮ್ ಒದಗಿಸಿಕೊಡುವ ಈ ಟ್ರಸ್ಟ್ ನ ಕಾರ್ಯ ಮೆಚ್ಚುವಂತದ್ದು.
ಇನ್ನೂ ಒಂದು ವಿಚಾರ ಅಂದ್ರೆ ಫ್ಯಾಷನ್ ಜಗತ್ತಿನಲ್ಲಿ ಅಪ್ರತಿಮ ಸಾಧನೆ ಮಾಡಿ ಗಿನ್ನಿಸ್ ದಾಖಲೆ ಬರೆದಿರುವ ಶೋಭನಾ ಧೀಮನ್ ಅವರು ಒಬ್ಬರೇ ಧೀಮನ್ ಸೋಷಿಯಲ್ ವೆಲ್ ಫೇರ್ ಟ್ರಸ್ಟ್ ನಡೆಸುತ್ತಿರೋದು ನಿಜಕ್ಕೂ ಶ್ಲಾಘನೀಯ. ಧೀಮನ್ ಅವರ ಕಾರ್ಯ ನಿಜಕ್ಕೂ ಬೇರೆಯವರಿಗೆ ಮಾದರಿ. ಸ್ಪಾರ್ಧಾತ್ಮಕ ಜೀವನದಲ್ಲಿ ವಿಶೇಷ ಚೇತನರ ಬಾಳಿಗೆ ಬೆಳಕಾಗಬೇಕೆಂಬ ಅವರ ವಿಚಾರಧಾರೆ, ಅವರ ಉದ್ದೇಶ, ಅವರ ಪ್ರಯತ್ನ ಎಂಥವರಿಗೂ ಸ್ಪೂರ್ತಿ. ಇವರು ಆಗಾಗ ಇಂತಹ ಕಾರ್ಯಕ್ರಮಗಳನ್ನ ಆಯೋಜಿಸುವ ಮೂಲಕ ಅನೇಕ ಪ್ರತಿಭೆಗಳ ಅನಾವರಣಗೊಳಿಸುತ್ತಾರೆ.

dream riders
ಇನ್ನೂ “ಡ್ರೀಮ್ಸ್ ರೈಡರ್ಸ್” ಕಾರ್ಯಕ್ರಮಗಳು ಅವರ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ಒಂದು. CRPF ಕ್ಯಾಂಪಸ್ ನಲ್ಲಿ ಅಕ್ಟೋಬರ್ 15 ರಂದು ನಡೆದ ಈ ಈವೆಂಟ್ ನಲ್ಲಿ ಅನೇಕ ಪ್ರತಿಭೆಗಳು ವೇದಿಕೆ ಮೇಲೆ ಒಂದಾಗಿ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟರು. ಮಕ್ಕಳು, ಯುವತಿಯರು, ಯುವಕರು ವಿಶೇಷ ಚೇತನರು ಒಂದೇ ವೇದಿಕೆಯಲ್ಲಿ RAMP WALK ಮಾಡಿ ನೆರೆದಿದ್ದವರ ಕಣ್ಮನ ಸೆಳೆದರು. ಕಲರ್ ಫುಲ್ ಉಡುಪುಗಳಲ್ಲಿ ತರಹೇವಾರಿ ಲುಕ್ ಗಳಲ್ಲಿ ಜಗಮಗಿಸುತ್ತಿದ್ದ ವೇದಿಕೆಯಲ್ಲಿ ವಾಕ್ ಮಾಡಿ ಟ್ಯಾಲೆಂಟ್ ತೋರಿಸಿದ್ದು, ನೋಡುಗರಿಗೆ ಭರಪೂರ ಮನರಂಜನೆ ನೀಡಿತ್ತು. ವೇದಿಕೆಯ ಮೇಲೆ ಒಬ್ಬೊಬ್ಬರೆ ರ್ಯಾಂಪ್ ವಾಕ್ ಮಾಡ್ತಿದ್ರೆ ಪ್ರೇಕ್ಷಕರು ತಮ್ಮ ಕೈಗಳಿಗೆ ಬಿಡಿವೆ ಕೊಡದೇ ಚಪ್ಪಾಳೆಗಳ ಸುರಿಮಳೆ ಸುರಿಸುತ್ತಿದ್ದದ್ದು ರೋಮಾಂನಚಾಕಾರಿ. CRPF ನ ಸಿಬ್ಬಂದಿ ಮಕ್ಕಳು ಭಾಗಿಯಾಗಿ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟಿದ್ದರು.


ಫ್ಯಾಷನ್ .. ದೈನಂದಿನ ಬದುಕಿನಲ್ಲಿ ವೇಗವಾಗಿ ಹಡರಡುತ್ತಿರುವ ಒಂದು ಕಲೆಯೂ ಹೌದು ಹೊಸ ಜೆನರೇಷನ್ ನ ಅವಿಭಾಜ್ಯ ಅಂಗ ಎಂದ್ರೂ ತಪ್ಪಾಗಲಾರದು. ಈ ಫ್ಯಾಷನ್ ಜಗತ್ತಿಗೆ ಅಗಮ್ಯ ಪ್ರತಿಭೆಗಳು ದಿನೇ ದಿನೇ ತಮ್ಮ ಶ್ರಮದಿಂದ ಮುಂದೆ ಬರುತ್ತಿದ್ದಾರೆ. ಅಂತಹ ಪ್ರತಿಭೆಗಳಿಗೆ ಅದರಲ್ಲೂ ವಿಶೇಷ ಚೇತನರ ಅಪ್ರತಿಮ ಪ್ರತಿಭೆಗಳ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿದ್ದು “ಡ್ರೀಮ್ಸ್ ರೈಡರ್ಸ್” ಕಾರ್ಯಕ್ರಮ. ಆದ್ರೆ ಈ ಕಾರ್ಯಕ್ರಮದ ರೂವಾರಿ ಅಂದ್ರೆ ಅದು “ಧೀಮನ್ ಸೋಷಿಯಲ್ ವೆಲ್ ಫೇರ್ ಟ್ರಸ್ಟ್”.

ಕಲರ್ ಫುಲ್ ಸ್ಟೇಜ್ ನಲ್ಲಿ ಮಾಡಲ್ ಗಳು ಎಲ್ಲರೂ ಸಖತ್ ಎಂಜಾಯ್ ಮಾಡಿದ್ದಾರೆ. ಪ್ರೇಕ್ಷಕರು ಸಹ ಮಸ್ತ್ ಮಜಾ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಶೇಷ ಚೇತನ ಕ್ರೀಡಾಪಟುಗಳು ಹಾಗೂ ಪ್ರೊಫೆಷನಲ್ ಮಾಡಲ್ ಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷ.
ಈ ಕಾರ್ಯಕ್ರಮದಲ್ಲಿ ಭಾರತದ ಮೊದಲ ಸೈಲೆಂಟ್ ಫೀಮೇಲ್ ಬೈಕರ್ ಅರ್ಚನಾ ತಿಮ್ಮರಾಜಾ ಹಾಗೂ ಭಾರತದ ಮೊದಲ ವಿಶೇಷ ಚೇತನ ಫೀಮೇಲ್ ಮಾಡಲ್ ಮಹಾಲಕ್ಷ್ಮಿ ಗಮನ ಸೆಳೆದಿದ್ದು ವಿಶೇಷ.

dream riders
ಇಂತಹ ಸಮಾಜಮುಖಿ ಕಾರ್ಯಕ್ರಮ ರೂಪಿಸಿಕೊಟ್ಟ ಧೀಮನ್ ಸೋಷಿಯಲ್ ವೆಲ್ ಫೇರ್ ಟ್ರಸ್ಟ್ ನ ಕಾರ್ಯ ನಿಜಕ್ಕೂ ಶ್ಲಾಘನೀಯ. CRPF ಸಹಯೋಗದೊಂದಿಗೆ ಆಯೋಜಿಸಲ್ಪಟ್ಟಿದ ಈ ಕಾರ್ಯಕ್ರಮ ನಿಜಕ್ಕೂ ವಿಶೇಷ ಚೇತನರ ಅಪರೂಪದ ಪ್ರತಿಭೆ ಪ್ರದರ್ಶನಕ್ಕೆ ಒಂದು ಉತ್ತಮ ವೇದಿಕೆ.

ಶೋಭನಾ ಧೀಮನ್ ಅವರು ಆಗಾಗ ಇಂತಹ ಈವೆಂಟ್ ಗಳನ್ನ ಆಯೋಜಿಸಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡ್ತಾರೆ. ಇದರ ಜೊತೆಜೊತೆಗೆ ಶೋಭನಾ ಅವರು ಪರ್ಸನಾಲಿಟಿ ಡೆವಲೋಪ್ ಮೆಂಟ್ , ವಿಶೇಷ ಚೇತನರಿಗೆ ಯೋಗ ತರಬೇತಿ ಜೊತೆಗೆ ಅನೇಕ ಅರ್ಥಪೂರ್ಣ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಿಜಕ್ಕೂ ಇವರ ಕಾರ್ಯ ಮೆಚ್ಚಲೇಬೇಕು. ಇನ್ನೂ ಇದೇ ತರಹದ ಅನೇಕ ಫ್ಯಾಷನ್ ಶೋಗಳನ್ನ ಈಗಾಗಲೇ ಶೋಭನಾ ಧೀಮನ್ ಅವರು ಆಯೋಜನೆ ಮಾಡಿದ್ದಾರೆ.

ಒಟ್ಟಿನಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿರುವ ಧೀಮನ್ ಸೋಷಿಯಲ್ ವೆಲ್ ಫೇರ್ ಟ್ರಸ್ಟ್ ಇನ್ನೂ ಮುಂದಿನ ದಿನಗಳಲ್ಲಿ ಇಂತಹದ್ದೇ ಮತ್ತಷ್ಟು ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಿದೆ. ನೀವು ಸಹ ಧೀಮನ್ ಸೋಷಿಯಲ್ ವೆಲ್ ಫೇರ್ ಟ್ರಸ್ಟ್ ನ ಜೊತೆಗೆ ಕೈ ಜೋಡಿಸಿ ಇತರರಿಗೆ ನೆರವಾಗಬಹುದು. ನಿಮಗೆ ಯಾರಾದರೂ ಪ್ರತಿಭಾನ್ವಿತ ವಿಶೇಷ ಚೇತನರ ಬಗ್ಗೆ ತಿಳಿದಿದ್ದರೆ ನೀವು ಧೀಮನ್ ಸೋಷಿಯಲ್ ವೆಲ್ ಫೇರ್ ಟ್ರಸ್ಟ್ ಅನ್ನು ಸಂಪರ್ಕಿಸಬಹುದು. ಈ ಮೂಲಕ ಅವರ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡಲು ನೆರವಾಗಬಹುದು.

ಧೀಮನ್ ಸೋಷಿಯಲ್ ವೆಲ್ ಫೇರ್ ಟ್ರಸ್ಟ್ ಅನ್ನು ಸಂಪರ್ಕಿಸಲು :

dhimansocialwelfaretrust@gmail.com
ಇನ್ಸ್ಟಾಗ್ರಾಂ : Social Welfare Trust
N Shobhanaa Dhiman

Dream riders

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: dream ridersfashion showspecially disabled
ShareTweetSendShare
Join us on:

Related Posts

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

ಮೇಲ್ಮನೆ ಕದನ…ಸೋಲು ಗೆಲುವಿನ ಲೆಕ್ಕಾಚಾರ..!

by admin
June 18, 2026
0

ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಏಳು ಸ್ಥಾನಗಳಿಗೆ ಎಂಟು ಅಭ್ಯರ್ಥಿಗಳು ಕಣಕ್ಕಿಳಿದಿರುವುದರಿಂದ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿದೆ. ಕಾಂಗ್ರೆಸ್ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಮೂರು...

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

by Shwetha
June 18, 2026
0

ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಸಮಯ ಪಾಲನೆ ಮತ್ತು ಶಿಸ್ತಿನ ಪರ್ವ ಆರಂಭವಾಗಲಿದೆ. ನೌಕರರು ಕಚೇರಿಗೆ ಬಾರದೆ ಅಥವಾ ತಡವಾಗಿ ಬಂದು ಹಾಜರಾತಿ ದಾಖಲಿಸುವ ಹಳೆಯ...

5 ರಾಜ್ಯಗಳಲ್ಲಿ ಅವಧಿಗೆ ಮುನ್ನ ಚುನಾವಣೆ ಇಲ್ಲ; ನಿಗದಿತ ವೇಳಾಪಟ್ಟಿಯಂತೆ ಮತದಾನ

5 ರಾಜ್ಯಗಳಲ್ಲಿ ಅವಧಿಗೆ ಮುನ್ನ ಚುನಾವಣೆ ಇಲ್ಲ; ನಿಗದಿತ ವೇಳಾಪಟ್ಟಿಯಂತೆ ಮತದಾನ

by Shwetha
June 18, 2026
0

ದೇಶದ ಐದು ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಹಾಗೂ ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಅವಧಿಗೆ ಮುನ್ನ ನಡೆಯಲಿವೆ ಎಂಬ ಊಹಾಪೋಹಗಳಿಗೆ ಕೇಂದ್ರ...

₹25,400 ಕೋಟಿ ಒಪ್ಪಂದ; ಪಿಜ್ಜಾ ಹಟ್ ವ್ಯವಹಾರ ಮಾರಾಟಕ್ಕೆ ನಿರ್ಧಾರ

₹25,400 ಕೋಟಿ ಒಪ್ಪಂದ; ಪಿಜ್ಜಾ ಹಟ್ ವ್ಯವಹಾರ ಮಾರಾಟಕ್ಕೆ ನಿರ್ಧಾರ

by Shwetha
June 18, 2026
0

ಜಾಗತಿಕ ಆಹಾರ ಉದ್ಯಮದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಯಮ್.ಕಾಮ್ ತನ್ನ ಅಧೀನದಲ್ಲಿರುವ ಪ್ರಸಿದ್ಧ ಪಿಜ್ಜಾ ಹಟ್ ವ್ಯವಹಾರದ ಕೆಲವು ಭಾಗಗಳನ್ನು ಎರಡು ಪ್ರತ್ಯೇಕ ಒಪ್ಪಂದಗಳ ಮೂಲಕ ಒಟ್ಟು...

ಮುಂಬೈನಲ್ಲಿ ಕಣ್ಣೀರು ಬಿಡದಿಯಲ್ಲಿ ಮೌನ – ಡಿಕೆಶಿ ರಿಯಲ್ ಎಸ್ಟೇಟ್ ಮಾಫಿಯಾಗೆ 2 ಲಕ್ಷ ಮರಗಳು ಬಲಿ? : ರಾಹುಲ್ ಗಾಂಧಿಯ ಪರಿಸರ ಹೋರಾಟದ ಅಸಲಿ ಮುಖವಾಡ ಕಳಚಿದ ಅಶೋಕ್.

ಮುಂಬೈನಲ್ಲಿ ಕಣ್ಣೀರು ಬಿಡದಿಯಲ್ಲಿ ಮೌನ – ಡಿಕೆಶಿ ರಿಯಲ್ ಎಸ್ಟೇಟ್ ಮಾಫಿಯಾಗೆ 2 ಲಕ್ಷ ಮರಗಳು ಬಲಿ? : ರಾಹುಲ್ ಗಾಂಧಿಯ ಪರಿಸರ ಹೋರಾಟದ ಅಸಲಿ ಮುಖವಾಡ ಕಳಚಿದ ಅಶೋಕ್.

by Shwetha
June 18, 2026
0

ಬೆಂಗಳೂರು: ಬಿಡದಿ ಟೌನ್‌ಶಿಪ್‌ ಯೋಜನೆಯ ಹೆಸರಿನಲ್ಲಿ ಸಾವಿರಾರು ಎಕರೆ ಫಲವತ್ತಾದ ಭೂಮಿ ಮತ್ತು ಲಕ್ಷಾಂತರ ಮರಗಳನ್ನು ನಾಶಪಡಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸಭೆಯ ಪ್ರತಿಪಕ್ಷ ನಾಯಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram