ಮರುಭೂಮಿಯಲ್ಲಿ ಸಿಲುಕಿರುವಂತಹ ಕನಸು ಬಿದ್ರೆ ಅದರ ಅರ್ಥವೇನು..?
ಕನಸುಗಳ ಬಗ್ಗೆ ಹಲವರಿಗೆ ಹಲವು ರೀತಿಯಾದ ನಂಬಿಕೆಗಳಿವೆ.. ಕೆಲವರು ಇದಕ್ಕೆ ಅದ್ರದ್ದೇ ಆದ ಕಾರಣ ಇದೆ.. ಈ ರೀತಿ ಕನಸು ಬಂದ್ರೆ ಹಾಗಾಗುತ್ತೆ ಇದು ಒಳ್ಲೆಯದು ಅದು ಕೆಟ್ಟದ್ದು ಹೀಗೆ ನಾನಾ ರೀತಿಯಾದ ಕನಸುಗಳಿಗೆ ನಾನಾ ಅರ್ಥ ಕಲ್ಪಿಸುವವರ ನಡುವೆ ಇನ್ನೂ ಹಲವರು ಕನಸನ್ನ ಕೇವಲ ನಿದ್ದೆ ಮಾಡಿ ಏಳುವ ತನಕ ಅದಾದದ ನಂತರ ಅದು ಕನಸಷ್ಟೇ ಯಾವುದೇ ಅರ್ಥವಿಲ್ಲ ಅಂತಲೂ ಯೋಚನೆ ಮಾಡ್ತಾರೆ.
ಕನಸಿನ ವ್ಯಾಖ್ಯಾನಕಾರರು ಪ್ರತಿ ಕನಸಿಗೆ ಒಂದು ಅರ್ಥವಿದೆ ಎಂದು ನಂಬುತ್ತಾರೆ. ಅವರ ಪ್ರಕಾರ ಒಂದು ಕನಸು ವ್ಯಕ್ತಿಯ ಹಿಂದಿನ, ವರ್ತಮಾನ/ಭವಿಷ್ಯದ ಪ್ರತಿಬಿಂಬವಾಗಿದೆ. ನಮಗೆ ಅನೇಕ ರೀತಿಯಾದ ಕನಸುಗಳು ಬೀಳುತ್ತವೆ. ಪ್ರಪಂಚದಾದ್ಯಂತ ಜನರು ನಿದ್ದೆ ಮಾಡುವಾಗ ಕನಸು ಕಾಣುತ್ತಾರೆ. ಮತ್ತು ಕನಸಿನ ವ್ಯಾಖ್ಯಾನಕಾರರು ಪ್ರತಿ ಕನಸಿಗೆ ಒಂದು ಅರ್ಥವಿದೆ ಎಂದು ನಂಬುತ್ತಾರೆ.
ಕಾಡಿನೊಳಗೆ ಸಿಲುಕಿರುವ ಕನಸು ಬಿದ್ರೆ ಅದರ ಅರ್ಥವೇನು ಗೊತ್ತಾ..?
ಅದ್ರಂತೆ ಸಾಮಾನ್ಯವಾಗಿ ನಾವು ಎತ್ತರದಿಂದ ಹಾರುವ ಕನಸನ್ನ ಆಗಾಗ ಕಾಣುತ್ತಿರುತ್ತೇವೆ. ಆದ್ರೆ ಅದ್ರ ಅರ್ಥ ಏನಿರಬಹುದು ಅನ್ನೋದರ ಬಗ್ಗೆಯೂ ಕೆಲವೊಮ್ಮೆ ಯೋಚನೆ ಮಾಡುತ್ತೇವೆ. ಅದರ ಅರ್ಥ ಹುಡುಕುವ ಪ್ರಯತ್ನ ಮಾಡ್ತೇವೆ. ಕನಸುಗಳು ನಮಗೆ ಹಿಂದೆ ಸಂಭವಿಸಿದ ಅಥವಾ ವರ್ತಮಾನದ ಬಗ್ಗೆ ಅಥವಾ ಭವಿಷ್ಯದಲ್ಲಿ ಸಂಭವಿಸಬಹುದಾದ ಘಟನೆಗಳ ಸೂಚಕಗಳು ಎಂದು ಕೆಲವರು ಹೇಳ್ತಾರೆ. ಒಂದು ಕನಸನ್ನು ಅರ್ಥೈಸಿಕೊಳ್ಳುವಾಗ ಅತ್ಯಂತ ನಿರ್ಣಾಯಕ ವಿಷಯವೆಂದರೆ ಅದು ನಿಮ್ಮನ್ನು ಬಿಟ್ಟುಹೋಗುವ ಭಾವನೆ.
ಕೇವಲ 4 ಲಕ್ಷ ಜನಸಂಖ್ಯೆ ಇದ್ರೂ ವಿಶ್ವದ ಶ್ರೀಮಂತ ದೇಶ ಬಹಮಾಸ್ ನ ಬಗ್ಗೆ INTERSTING FACTS..!
ಮರುಭೂಮಿಯ ಮಧ್ಯದಲ್ಲಿ ಇರುವುದು ಸ್ವಲ್ಪ ಸಮಯದವರೆಗೆ ಮಾತ್ರ ಸಂತೋಷದಾಯಕವಾಗಿರುತ್ತದೆ. ಅಂತಿಮವಾಗಿ, ಉತ್ಸಾಹ ಕಡಿಮೆಯಾದ ನಂತರ, ಶುಷ್ಕ ಭೂಮಿಯಲ್ಲಿರುವುದು ಭೂಮಿಯ ಮೇಲಿನ ಅತ್ಯಂತ ಕಷ್ಟಕರವಾದ ಸವಾಲುಗಳಲ್ಲಿ ಒಂದಾಗಿದೆ ಎಂದು ನೀವು ಅರಿತುಕೊಳ್ಳುತ್ತೀರಿ. ಹಾಗಾದರೆ ನೀವು ಮರುಭೂಮಿಯ ಮಧ್ಯದಲ್ಲಿ ನಿಂತಿರುವಂತೆ ಕನಸು ಕಂಡ್ರೆ ಅದರ ಅರ್ಥವೇನು..?
ಮರುಭೂಮಿಯಲ್ಲಿ ಸಸಾಕಷ್ಟು ಸವಾಲುಗಳನ್ನ ಎದುರಿಸಬೇಕಾಗುತ್ತದೆ. ನೀರು ಮತ್ತು ಆಹಾರದ ಸಂಪೂರ್ಣ ಕೊರತೆ ನಿಮಗೆ ಸಾಕಷ್ಟು ಕಷ್ಟತಂದುಬಿಡುತ್ತೆ. ಈ ರೀತಿ ಮರುಭೂಮಿಯಲ್ಲಿರುವ ಬಗ್ಗೆ ಕನಸು ಕಂಡಾಗ, ನೀವು ಅಸಹಾಯಕರಾಗಿದ್ದೀರಿ. ನೀವು ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿರುವಿರಿ ಎಂದು ಕೂಡ ಸೂಚಿಸಬಹುದು. ನೀವು ಈ ರೀತಿಯಾದ ಸಮಸ್ಯೆಗಳ ಬಗ್ಗೆಯೇ ಸದಾ ಆಲೋಚಿಸುತ್ತಿದ್ದರೆ ಸಹಜವಾಗಿ ಇಂತಹ ಕನಸುಗಳು ಬೀಳುತ್ತದೆ.
ನೀವು ಎಲ್ಲೋ ಹಣವನ್ನು ಹೂಡಿಕೆ ಮಾಡುವ ಮೂಲಕ ಅಥವಾ ನಿಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಮೂಲಕ ನಿಮ್ಮ ವೃತ್ತಿಜೀವನವೂ ಅಪಾಯದಲ್ಲಿದ್ದಾಗಲೂ ಇಂತಹ ಕನಸು ಬೀಳಬಹುದು. ನೀವು ಯಾವುದೋ ಒತ್ತಡಕ್ಕೆ ಸಿಲುಕಿ ಅಸಹಾಯಕ ಸ್ಥಿತಿಯಲ್ಲಿದ್ದಾಗ್ಲೂ ಯಾವುದೇ ದಾರಿಯಿಂದಾಗಲಿ , ಯಾರಿಂದಾಗಲಿ ಸಹಾಯ ಸಿಗದೇ ಹೋದಾಗಲೂ ಈ ರೀತಿಯಾದ ಕನಸು ಬೀಳುವುದು ಸಹಜ.
ಹೀಗಿದ್ದಾಗ ಮರುಭೂಮಿಯಲ್ಲಿ ಒಂಟಿಯಾಗಿರುವಂತಹ ಕನಸುಗಳು ಬೀಳಬಹುದು. ನಾವು ಈ ಪರಿಸ್ಥಿತಿಯನ್ನು ಇನ್ನೊಂದು ದೃಷ್ಟಿಕೋನದಿಂದ ನೋಡಿದರೆ, ನೀವು ಏಕಾಂಗಿಯಾಗಿ ಮತ್ತು ಭಾವನಾತ್ಮಕವಾಗಿ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರೂ ಇಂತಹ ಕನಸು ಬೀಳಬಹುದು. ನೀವು ಹೊಸ ನಗರಕ್ಕೆ ಸ್ಥಳಾಂತರಗೊಂಡಿರುವ ಕಾರಣದಿಂದ ಅಥವಾ ಯಾವುದೋ ಕಾರಣಕ್ಕೆ ನಿಮ್ಮನ್ನು ನೀವು ಪ್ರತ್ಯೇಕಿಸಿಕೊಂಡಿದ್ದರೆ, ನಿಮ್ಮ ಸ್ವಂತದವರಿಂದ ದೂರವಿದ್ದರೆ ನಿಮ್ಮ ಖುಷಿ ದುಃಖ ಹಂಚಿಕೊಳ್ಳಲು ಕೂಡ ಯಾರೂ ಇಲ್ಲದೇ ಹೋದಾಗ್ಲೂ ಈ ರೀತಿಯಾದ ಕನಸು ಬೀಳಬಹುದು.
ಮಳೆಯಲ್ಲಿ ಸಿಕ್ಕಿಹಾಕಿಕೊಂಡಿರುವಂತಹ ಕನಸು ಬಿದ್ರೆ ಅದರ ಅರ್ಥವೇನು..?