ಕೇವಲ 4 ಲಕ್ಷ ಜನಸಂಖ್ಯೆ ಇದ್ರೂ ವಿಶ್ವದ ಶ್ರೀಮಂತ ದೇಶ  ಬಹಮಾಸ್ ನ ಬಗ್ಗೆ INTERSTING FACTS..!  

1 min read

ಕೇವಲ 4 ಲಕ್ಷ ಜನಸಂಖ್ಯೆ ಇದ್ರೂ ವಿಶ್ವದ ಶ್ರೀಮಂತ ದೇಶ  ಬಹಮಾಸ್ ನ ಬಗ್ಗೆ INTERSTING FACTS..!

ಬಹಮಾಸ್… ಒಂದು ಕಾಲದಲ್ಲಿ ಗುಲಾಮವಾಗಿದ್ದ ದೇಶ ಇಂದು ವಿಶ್ವದ ಶ್ರೀಮಂತ ದೇಶಗಳ ಸಾಲಿನಲ್ಲಿ ನಿಲ್ಲುತ್ತದೆ. ಸುಂದರ ಸಮುದ್ರಗಳಿಂದಾಗಿ ಈ ದೇಶ ಪ್ರವಾಸಿಗರ ಪಾಲಿನ ಹಾಟ್ ಫೇವರೇಟ್ ತಾಣವೂ ಕೂಡ ಹೌದು. ಈ ದೇಶ ಸಂಪೂರ್ಣವಾಗಿ ಪ್ರವಾಸೋದ್ಯಮದ ಮೇಲೆಯೇ ನಿರ್ಭರವಾಗಿದೆ. ನೀಲಿ ಆಕಾಶ ನೀಳ ಸಮುದ್ರ ನೀರು ಬಿಳಿ ಮಣ್ಣಿನಿಂದ ಕೂಡಿರುವ ಈ ದೇಶ ನಿಜಕ್ಕೂ ಡ್ರೀಮ್ ಡೆಸ್ಟಿನೇಷನ್ ಅಂದ್ರೆ ತಪ್ಪಾಗಲ್ಲ.

ಕರೇಬಿಯನ್ ಐಲ್ಯಾಂಡ್ ನ ಅತ್ಯಂತ ಸುಂದರ ದೇಶ  ಬಹಮಾಸ್ ನ ಬಗ್ಗೆ ತಿಳಿದುಕೊಳ್ಳಬೇಕಾದ ಸಾಕಷ್ಟು ವಿಚಾರಗಳಿವೆ.

ಅಧಿಕೃತ ಹೆಸರು – ಕಾಮನ್ ವೆಲ್ತ್ ಆಫ್ ಬಹಮಾಸ್

ಆಶ್ಚರ್ಯಕರ ವಿಚಾರ ಅಂದ್ರೆ ಇಷ್ಟು ಸುಂದರ ಹಾಗೂ ಪ್ರಬಲ ದೇಶದ ಒಟ್ಟಾರೆ ಜನಸಂಖ್ಯೆ ಕೇವಲ 4 ಲಕ್ಷ

ರಾಜಧಾನಿ – ನಸಾವು , ಇಡೀ ದೇಶದ ಒಟ್ಟಾರೆ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಅಂದ್ರೆ ಸುಮಾರು 2.7 ಲಕ್ಷ ಜನರು ಇದೇ ನಗರದಲ್ಲಿಯೇ ವಾಸವಾಗಿದ್ದಾರೆ.

ನೆರೆ ದೇಶಗಳು – ಹೈಟಿ ( ವಿಶ್ವದ ಅತ್ಯಂತ ಬಡ ದೇಶ) , ಕ್ಯೂಬಾ , ಜಮೈಕಾ , ಅಮೆರಿಕಾ, ಡಾಮಿಕನ್ ಇದೆ.

ಕಾಡಿನೊಳಗೆ ಸಿಲುಕಿರುವ ಕನಸು ಬಿದ್ರೆ ಅದರ ಅರ್ಥವೇನು ಗೊತ್ತಾ..?

ಬಹಮಾಸ್ ನಲ್ಲಿ ಸುಮಾರು 700 ದ್ವೀಪಗಳಿವೆ. ಆದ್ರೆ ಇಷ್ಟೂ ದ್ವೀಪಗಳ ಪೈಕಿ ಕೇವಲ 30 ದ್ವೀಪಗಳಲ್ಲಿ ಮಾತ್ರವೇ ಜನರು ವಾಸವಾಗಿದ್ದಾರೆ.  ಇನ್ನೂ ಅನೇಕ ದ್ವೀಪಗಳಲ್ಲಿ ಭೂತಪ್ರೇತಗಳಿವೆ ಎಂಬ ನಂಬಿಕೆ ಇಲ್ಲಿನ ಬಹುತೇಕ ಜನರಲ್ಲಿದೆ.

ಈ ದೇಶದಲ್ಲಿ ಲೆಫ್ಟ್ ಸೈಡ್ ಡ್ರೈವಿಂಗ್ ಇದ್ದು, ಅನೇಕ ಕಾರುಗಳ ಸ್ಟೇರಿಂಗ್ ಕೂಡ  ಎಡ ಭಾಗದಲ್ಲೇ ಇರುವುದು ಕಂಡುಬರುತ್ತದೆ.   ಇನ್ನೂ ಕೆಲ ಕಾರುಗಳ ಸ್ಟೇರಿಂಗ್ ಬಲಗಡೆಗೂ ಇರುತ್ತದೆ.

ಇನ್ನೂ ವಿಶೇಷವಾಗಿ ಗಮನಿಸಲೇಬೇಕಾದ ವಿಚಾರ ಅಂದ್ರೆ ಈ ದೇಶದಲ್ಲಿ ಟ್ರೈನ್ ಸರ್ವಿಸ್ ಇಲ್ಲ .

ಒಂದು ಸಮಯದಲ್ಲಿ ಬಹಮಾಸ್ ಅನ್ನ ಸಮುದ್ರಿ ಡಾಕುಗಳ ದೇಶ ಅಂತಲೇ ಕರೆಯಲಾಗ್ತಿತ್ತು. ಕಾರಣ ಇಲ್ಲಿ ಅನೇಕ ಸಮುದ್ರಿ ಲೂಟಿಕೋರರು ವಾಸಿಸುತ್ತಿದ್ದರು.

ವಿಶ್ವದಲ್ಲೇ ಅತ್ಯಂತ ಶುದ್ಧ ನೀರು ಬಹಮಾಸ್ ನಲ್ಲಿ ಕಾಣಸಿಗುತ್ತದೆ. ಕ್ಲಿಸ್ಟರ್ ಕ್ಲಿಯರ್ ನಂತೆ ನೀರಿನ ಒಳಗೆ ಏನೇನಿದೆ ಅನ್ನೋದು ಕಾಣಿಸುವಷ್ಟು ಟ್ರಾನ್ಸ್ ಫರೆಂಟ್ ರೀತಿಯಲ್ಲಿ ನೀರು ಶುದ್ಧವಾರಿಗುತ್ತದೆ ಎನ್ನಲಾಗುತ್ತೆ.

ಅಧಿಕೃತ ಭಾಷೆ – ಇಂಗ್ಲಿಷ್

ಇಲ್ಲಿನ ಜನಸಂಖ್ಯೆ ಕೇವಲ 40 ಲಕ್ಷವಾದ್ರೂ ಪ್ರತಿ ವರ್ಷ ಈ ದೇಶಕ್ಕೆ ಪ್ರವಾಸಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಸುಮಾರು 70 ರಿಂದ 80 ಲಕ್ಷ. ಈ ಪೈಕಿ ಹೆಚ್ಚಿನವರು ಅಮೆರಿಕಾದವರೇ ಆಗಿರುತ್ತಾರೆ.

ಈ ದೇಶದಲ್ಲಿ ಸಮುದ್ರದ ಒಳಗೆ ಅನೇಕ ಅಂಡರ್ ವಾಟರ್ ಕೇವ್ಸ್ ( ಗುಹೆಗಳು ) ಕಾಣಸಿಗುತ್ವೆ. ಇದ್ರಿಂದಾಗಿ ಈ ದೇಶ ಮತ್ತಷ್ಟು ವಿಭಿನ್ನ ಎನಿಸಿಕೊಳ್ಳುತ್ತದೆ.

ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, 1973 ಜುಲೈ 10 ರಂದು.

ಸ್ವತಂತ್ರದ ನಂತರದಲ್ಲಿ ಇಲ್ಲಿನ  ಮೊದಲ ಪ್ರಧಾನಿಯಾಗಿ ಲೆಂಡಿನೋ ಅಧಿಕಾರ ಸ್ವೀಕರಿಸಿದ್ರು.

ಮತ್ತೊಂದು ವಿಚಾರದಲ್ಲಿ ಬಹಮಾಸ್ ಪ್ರವಾಸಿಗರಿಗೆ ಸುರಕ್ಷತೆ ಅನ್ನೋದನ್ನ ಒತ್ತಿ ಉಚ್ಚಾರ ಮಾಡುವಂತೆ ಮಾಡುತ್ತದೆ. ಅದು ಇಲ್ಲಿನ ಕ್ರೈಮ್ ರೇಟ್. ಹೌದು ಈ ದೇಶದಲ್ಲಿ ಕ್ರೈಮ್ ರೇಟ್ ತುಂಬ ಕಡಿಮೆಯಿದೆ. ಇಲ್ಲಿನ ಜನರಿಗೆ ಆದಾಯ ತೆರಿಗೆ ಪಾವತಿಸುವ ತಲೆನೋವಿಲ್ಲ. ಅಂತೆಯೇ ಸೇಲ್ಸ್ ಟ್ಯಾಕ್ಸ್ ನಿಂದಲೂ ಇಲ್ಲಿನ ಜನರಿಗೆ ರಿಯಾಯತಿ ನೀಡಲಾಗಿದೆ. ಇಡೀ ಬಹಮಾಸ್ ನಲ್ಲಿ ಕೇವಲ 10 ಕಾಫಿ ಹೌಸಸ್ ಮಾತ್ರವೇ  ಕಾಣಸಿಗುತ್ತದೆ. ಕಾರಣ ಇಲ್ಲಿನ ಜನರಲ್ಲಿ ಕಾಫಿ ಅಷ್ಟೂ ಜನಪ್ರಿಯವಾಗಿಲ್ಲ. ಕಾಫಿ ಕುಡಿಯುವವರ ಸಂಖ್ಯೆ ತೀರ ಕಡಿಮೆಯೇ. ಅಲ್ಲದೇ  ಕಾಫಿ ಕುಡಿಯೋದ್ರಿಂದ ಆರೋಗ್ಯಕ್ಕೂ ಒಳ್ಲೆಯದಲ್ಲ ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ.

ಇನ್ನೊಂದು ವಿಚಾರ ಅಂದ್ರೆ ಬಹಮಾಸ್ ನಲ್ಲಿ ಹೊರ ದೇಶಗಳಿಂದ ಬರುವವರಿಗೆ ಗ್ಯಾಂಬ್ಲಿಂಗ್ ಆಡುವ ಅವಕಾಶವಿದೆ. ಆದ್ರೆ  ಆ ದೇಶದ ನಾಗರಿಕರಿಗೆ ಗ್ಯಾಂಬ್ಲಿಂಗ್ ನಲ್ಲಿ ತೊಡಗಿಕೊಳ್ಳುವುದಕ್ಕೆ ಅನುಮತಿ ಇಲ್ಲ.

ಬಹಮಾಸ್ ಕರೆನ್ಸಿ – ಬಹೇಮಿಯನ್ ಡಾಲರ್ : ಇದರ ಮೌಲ್ಯ ಅಮೆರಿಕಾ ಡಾಲರ್ ಮೌಲ್ಯಕ್ಕೆ ಸಮ

ಇಲ್ಲಿನ ಲಿಟ್ರೆಸಿ ರೇಟ್ ಕೂಡ  ಉನ್ನತ ಮಟ್ಟದಲ್ಲಿದೆ.

ಅಷ್ಟೇ ಅಲ್ಲ ಇಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಸಂಪೂರ್ಣ ಉಚಿತ

ಈ ದೇಶದಲ್ಲಿ ಒಮ್ಮೆ ಮದುವೆಯಾದ್ರೆ ಮುಗೀತು… ಡಿವೋರ್ಸ್ ಪಡೆಯುವಂತಿಲ್ಲ..! ಜ್ವಾಲಾಮುಖಿ ದೇಶ ಫಿಲಿಫೈನ್ಸ್ ಬಗೆಗಿನ INTERESTING FACTS..!  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd