ಈ ದೇಶದಲ್ಲಿ ಒಮ್ಮೆ ಮದುವೆಯಾದ್ರೆ ಮುಗೀತು… ಡಿವೋರ್ಸ್ ಪಡೆಯುವಂತಿಲ್ಲ..! ಜ್ವಾಲಾಮುಖಿ ದೇಶ ಫಿಲಿಫೈನ್ಸ್ ಬಗೆಗಿನ INTERESTING FACTS..!  

1 min read

ಈ ದೇಶದಲ್ಲಿ ಒಮ್ಮೆ ಮದುವೆಯಾದ್ರೆ ಮುಗೀತು… ಡಿವೋರ್ಸ್ ಪಡೆಯುವಂತಿಲ್ಲ..! ಜ್ವಾಲಾಮುಖಿ ದೇಶ ಫಿಲಿಫೈನ್ಸ್ ಬಗೆಗಿನ INTERESTING FACTS..!

ಈ ದೇಶದಲ್ಲಿ ಒಂದು ಸಲ ಮದುವೆಯಾದ್ರೆ ಮುಗೀತು ಕಷ್ಟನೋ ಸುಖಾನೋ ತಮ್ಮ ಬಾಳ ಸಂಗತಿ ಜೊತೆಗೆ ಜೀವನ ಪೂರ್ತಿ ಸಂಸಾರ ಮಾಡಬೇಕು.. ಯಾಕಂದ್ರೆ ಈ ದೇಶದಲ್ಲಿ ಡಿವೋರ್ಸ್ ಪಡೆಯುವಂತಿಲ್ಲ. ಈ ದೇಶದಲ್ಲಿ ಅತಿ ಹೆಚ್ಚು ಜ್ವಾಲಾಮುಖಿಗಳಿವೆ. ಇದೇ ದೇಶದಲ್ಲೇ ದಿನಕ್ಕೆ ಏನಿಲ್ಲ ಅಂದ್ರು ಸುಮಾರು 10 ಸರಿ ಭೂಕಂಪನ ಸಂಭವಿಸುತ್ತದೆ. ಅನೇಕ ರೋಮಾಂಚನಕಾರಿ , ವಿಶೇಷ ಸಂಸ್ಕೃತಿ , ಸಂಪ್ರದಾಯಗಳಿಂದ ವಿಭಿನ್ನ ಎನಿಸಿಕೊಂಡಿರುವ ಫಿಲಿಫೈನ್ಸ್  ದೇಶ ಸಾಕಷ್ಟು ವಿಚಾರಗಳಿಂದ ಫೇಮಸ್…

ಫಿಲಿಫೈನ್ಸ್ ಸುಮಾರು 8000 ವಿವಿಧ ದ್ವೀಪಗಳಿಂದ ಕೂಡಿದ ದೇಶವಾಗಿದೆ. ಎಲ್ಲಕ್ಕಿಂತ ಹೆಚ್ಚು ಎಳನೀರು ಹಾಗೂ ಪಪಾಯಗಳನ್ನ ಎಕ್ಸ್ ಪೋರ್ಟ್ ಮಾಡುವ ಏಕ ಮಾತ್ರ ದೇಶವಿದು.

ಫಿಲಿಫೈನ್ಸ್ – ಈ ಹೆಸರನ್ನು ಸ್ಪೇನ್ ದೇಶದ ರಾಜ ಫಿಲಿಪ್ ರನ್ನ ಆಧಾರವಾಗಿಸಿಕೊಂಡು ಇಡಲಾಗಿತ್ತು.

ಅಧಿಕೃತ ಹೆಸರು – ದಿ ರಿಪಬ್ಲಿಕನ್ ಆಫ್ ಫಿಲಿಫೈನ್ಸ್

ರಾಜಧಾನಿ – ಮನಿಲಾ

ಈ ದೇಶ ವಿಶ್ವದ ಬೇರೆ ಯಾವುದೇ ದೇಶಗಳ ಜೊತೆಗೆ ಗಡಿಇ ಹಂಚಿಕೊಂಡಿಲ್ಲ. ಯಾವುದೇ ನೆರೆ ದೇಶಗಳಿಲ್ಲ. ಫಿಲಿಫೈನ್ಸ್ ಸುತ್ತಲೂ ಸಾಗರಗಳಿಂದ ಕೂಡಿದೆ.

ಈ ದೇಶ ಪ್ರವಾಸಿಪ್ರಿಯರ ಹಾಟ್ ಫೇವರೇಟ್ ಕೂಡ

ಈ ದೇಶದ ಮತ್ತೊಂದು ವಿಶಶೇಷತೆ ಅಂದ್ರೆ ಈ ದೇಶ ಸುಮಾರು 7641 ದ್ವೀಪಗಳಿಂದ ಆಗಿದ್ದು, ಈ ವಿಚಾರದಲ್ಲಿ ವಿಶ್ವದ ಏಕಮಾತ್ರ ರಾಷ್ಟ್ರವೆಂಬ ಹಿರಿಮೆಯಿದೆ.

ವಿಶ್ವದ ಅತಿ ದೊಡ್ಡ ಮುತ್ತನ್ನ ಫಿಲಿಫೈನ್ಸ್ ನ ಪಲಾವಾನ್ ಸಮುದ್ರದಲ್ಲಿ 1934ರಲ್ಲಿ ಪತ್ತೆ ಮಾಡಲಾಗಿತ್ತು. ಈ ಮುತ್ತಿನ ತೂಕ ಸುಮಾರು 7 ಕೆಜಿ. 10 ಇಂಚು ಉದ್ದ.  600 ವರ್ಷಗಳ ಹಿಂದಿನ ಈ ಮುತ್ತಿನ ಮೌಲ್ಯ ಸುಮಾರು  40 ಮಿಲಿಯನ್ ಅಮೆರಿಕನ್  ಡಾಲರ್.

ಫಿಲಿಫೈನ್ಸ್ ಈ ಹಿಂದೆ ಅಮೆರಿಕಾ ಹಾಗೂ ಸ್ಪೇನ್ ನ ಆಡಳಿತಕ್ಕೆ ಒಳಪಟ್ಟಿತ್ತು. ಆಗ್ಲೇ ಈ ದೇಶಕ್ಕೆ ಸ್ಪೇನ್ ರಾಜ ಫಿಲಿಪ್ಸ್ ಹೆಸರಿಡಲಾಗಿತ್ತು ಎನ್ನಲಾಗಿದೆ. ಬಳಿಕ 1898 ರಲ್ಲಿ ಅಮೆರಿಕಾ ಹಾಗೂ ಸ್ಪೇನ್ ನಡುವೆ ಯುದ್ಧ ನಡೆಯಿತು. ಆ ಸಂದರ್ಭದಲ್ಲಿ ಸ್ಪೇನ್ 2 ಕೋಟಿ ಅಮೆರಿಕನ್ ಡಾಲರ್ ಗಳಿಗೆ  ಫಿಲಿಫೈನ್ಸ್ ಅನ್ನು ಅಮೆರಿಕಾಗೆ ನೀಡಿತ್ತು. 2 ನೇ ಮಹಾಯುದ್ಧದ ನಂತರ  ಜುಲೈ 4 1946 ರಲ್ಲಿ ಅಮೆರಿಕಾ ಫಿಲಿಫೈನ್ಸ್ ಗೆ ಸಂಪೂರ್ಣ ಸ್ವತಂತ್ರ ನೀಡಿತ್ತು. ಅಂದ್ರೆ ಭಾರತಕ್ಕೆ ಸ್ವಾತಂತ್ರ ಸಿಗುವ ಒಂದು ವರ್ಷ ಹಿಂದೆ.

ಇನ್ನೂ 2ನೇ ಮಹಾಯುದ್ಧದ ನಂತರ ಸ್ವಾತಂತ್ರ್ಯ ಸಿಕ್ಕ ಮೊದಲ ದೇಶವೂ ಕೂಡ ಇದಾಗಿದೆ. 2019ರ ಸೆನ್ಸಸ್ ನ ಅನುಸಾರ ಇಲ್ಲಿನ ಒಟ್ಟಾರೆ ಜನಸಂಖ್ಯೆ ಸುಮಾರು 11 ಕೋಟಿ. ಇಲ್ಲಿನ 80% ರಷ್ಟು ಜನರು ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿದ್ರೆ  , 12 % ಮುಸ್ಲಿಂ ಧರ್ಮದವರಿದ್ರೆ , ಬಾಕಿ ಹಿಂದೂ , ಸಿಖ್ , ಬೌದ್ಧ ಧರ್ಮದವರಿದ್ದಾರೆ.

ಫಿಲಿಫೈನ್ಸ್ ನ ಕರೆನ್ಸಿ – ಪೆಸ್ಸೋ – 1 ಪೆಸ್ಸೋ ಭಾರತದ 1.5 ರೂಪಾಯಿಗೆ ಸಮ

ಅಧಿಕೃತ ಭಾಷೆ – ಫಿಲಿಫಿನೋ , ಇದು ಸ್ವಲ್ಪ ಇಂಗ್ಲಿಶ್ ಮಾದರಿಯಲ್ಲೇ ಇರುತ್ತದೆ. ವರದಿಗಳ ಪ್ರಕಾರ ಇಲ್ಲಿನ ಸುಮಾರು 52 ಮಿಲಿಯನ್ ನಷ್ಟು ಜನರು ಇಂಗ್ಲಿಷ್ ಮಾತನಾಡ್ತಾರೆ.

ಈ ದೇಶವು ವಿಶ್ವದ 10 ಅತಿ ಹೆಚ್ಚು ಇಂಗ್ಲಿಷ್ ಭಾಷೆ ಮಾತನಾಡುವ ಲಿಸ್ಟ್ ಗೆ ಸೇರುತ್ತದೆ.   ಇದರ ಹೊರತಾಗಿಯೂ ಇಲ್ಲಿ ಸುಮಾರು 100 ಕ್ಕೂ ಹೆಚ್ಚು ಬಾಷೆಗಳನ್ನ ಮಾತನಾಡಲಾಗುತ್ತದೆ.

2015ರಲ್ಲಿ ನಡೆದ ಸರ್ವೆ ಅನ್ವಯ ಈ ದೇಶದ ಲಿಟ್ರೆಸಿ ರೇಟ್ ಸುಮಾರು 98.2 % – ಅಂದ್ರೆ ಈ ದೇಶವು ಸಾಕ್ಷರತಾ ಪ್ರಮಾಣದಲ್ಲೂ ಬಹಳ ಮುಂದುವರೆದಿದೆ.

ಫಿಲಿಫೈನ್ಸ್ ಅನ್ನು ಜ್ವಾಲಾಮುಖಿ ದೇಶ ಅಂತಲೂ ಕರೆಯಲಾಗುತ್ತದೆ. ಯಾಕಂದ್ರೆ ಇದೇ ದೇಶದಲ್ಲಿ ಅತಿ ಹೆಚ್ಚು ಜ್ವಾಲಾಮುಖಿಗಳಿವೆ. ಈ ಪೈಕಿ ಸಾಕಷ್ಟು ಜೀವಿತ ಜ್ವಾಲಾಮುಖಿಗಳೂ ಕೂಡ ಇವೆ. ಈ ಪೈಕಿ ಮಾಯೋನ್ , ಪಿನಾಟುಬೋ, ಟಾಲ್ ನಂತಹ ಜ್ವಾಲಾಮುಖಿಗಳು ಫೇಮಸ್. ಅಷ್ಟೇ ಅಲ್ಲ ಇದೇ ದೇಶದಲ್ಲಿಯೇ ಅತಿ ಹೆಚ್ಚು ಭೂಕಂಪನವೂ ಸಂಭವಿಸುತ್ತದೆ. ದಿನಕ್ಕೆ ಏನಿಲ್ಲಾ ಅಂದ್ರು ಸುಮಾರು 10 ಸಲ ಭೂಮಿ ಕಂಪಿಸುತ್ತದೆ. ಆದ್ರೆ ಇದರ ತೀರ ಅಂದ್ರೆ ತೀರ ಕಡಿಮೆಯಿರುತ್ತದೆ. ಅಷ್ಟೇ ಅಲ್ಲ ಬೂಕಂಪನ ಆಗಿದ್ರ ಅನುಭವ ಕೂಡ ಜನರಿಗೆ ಅರಿವಾಗಷ್ಟು ಕಡಿಮೆ ಇರುತ್ತದೆ.

ಏಷ್ಯಾದಲ್ಲಿ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿರುವ ಫಿಲಿಫೈನ್ಸ್ ಏಷ್ಯಾದಲ್ಲೇ 2ನೇ ಅಭಿವೃದ್ಧಿ ಹೊಂದಿದ ಹಾಗೂ ಬಲವಾದ ಆರ್ಥಿಕತೆ ಹೊಂದಿರುವ ದೇಶವೂ ಆಗಿದೆ. ಇಲ್ಲಿನ ಆರ್ಥಿಕತೆ ಇಡೀ ವಿಶ್ವದಲ್ಲಿ 9 ನೇ ಅತಿ ದೊಡ್ಡ ಎಕಾನಮಿ ಕೂಡ ಆಗಿದೆ.

ಈ ದೇಶದ ಆರ್ಥಿಕಥೆಯ ಪ್ರಮುಖ ಮೂಲ ಕೃಷಿಯಾಗಿದೆ. ಇಡೀ ವಿಶ್ವದಲ್ಲಿ ಅತಿ ಹೆಚ್ಚು ಎಳನೀರು , ಪಪಾಯ ಸರಬರಾಜಾಗೋದು ಇದೇ ದೇಶದಿಂದಲೇ.

ಇಲ್ಲಿನ ಕಾನೂನಿನ ಅನುಸಾರ ಒಂದು ಸಲ ಒಬ್ಬರ ಜೊತೆಗೆ ವಿವಾಹವಾದ್ರೆ ಮತ್ತೆ ಡಿವೋರ್ಸ್ ಪಡೆಯುವಂತಿಲ್ಲ. ಈ ನಿಯಮ ಕೇವಲ ಹಿಂದೂ , ಸಿಖ್ , ಬೌದ್ಧ , ಕ್ರೈಸ್ತ ಧರ್ಮದವರಿಗೆ ಮಾತ್ರವೇ ಲಾಗೂ ಆಗುತ್ತದೆ. ಮುಸ್ಲಿಮ್ ರಿಗೆ ರಿಯಾಯತಿ ನೀಡಲಾಗಿದೆ. ಮುಸ್ಲಿಂ ಮಹಿಳೆಯರು ಅಥವ ಪುರುಷರು ತಲಾಕ್ ಪಡೆದು ಎಷ್ಟು ಜನರನ್ನ ಬೇಕಾದರೂ ಮದುವೆಯಾಗಬಹುದಾಗಿದೆ.

ಈ ದೇಶದ ಧ್ವಜ ಎರೆಡು ಬಣ್ಣಗಳಲ್ಲಿ ಇರುತ್ತದೆ. ಅಂದ್ರೆ ದೇಶದಲ್ಲಿ ಯುದ್ಧದ ಸಮಯದಲ್ಲಿ ಧ್ವಜದ ಮೇಲೆ ಚಿಕ್ಕದಾದ ಕೆಂಪು ಪಟ್ಟಿ ಇರುತ್ತೆ. ಶಾಂತಿಯ ಸಂದರ್ಭದಲ್ಲಿ ನೀಲಿ.

ಪ್ರವಾಸಿ ತಾಣಗಳು

ರಾಜಧಾನಿ ಮನಿಲ – ಐತಿಹಾಸಿಕ ಕಟ್ಟಡಗಳ ಜೊತೆಗೆ ಅತ್ಯಾಧುನಿಕ ಕಟ್ಟಗಳ ಮನಮೋಹಕ ನೋಟ ಪ್ರವಾಸಿಗರನ್ನ ಆಕರ್ಷಿಸಿದ್ರೆ, ಏಷ್ಯಾದ ಅತಿ ಸುಂದರ ಇಂಟ್ರಾಮ್ಯೂರಸ್ ಪೋರ್ಟ್ , ಓಷಿಯನ್ ಪಾರ್ಕ್ , ರೆಸಾರ್ಟ್ ಕಾಂಪ್ಲೆಕ್ಸ್, ಕ್ಯಾಸಿನೋ , ಸಿಟಿ ಆಫ್ ಡ್ರೀಮ್ಸ್ , ಒಕಾಡಾ ಜಾಯಿಡೆ ಸ್ಥಳಗಳಲ್ಲಿ ಸುತ್ತಾಡಬಹುದದು.

ಉಳಿದಂತೆ ಚಾಕಲೇಟ್ ಹಿಲ್ಸ್, ಪಾಲವಾನ್ , ಸೆಬು , ವಿಗಾನ್ ನಂತಹ ಇನ್ನೂ ಸಾಕಷ್ಟು ಪ್ರವಾಸಿ ತಾಣಗಳಿವೆ.  ಈ ದೇಶಕ್ಗಕೆ ಪ್ರವಾಸಕ್ಕೆ ಹೋಗ ಬಯಸಿದ್ರೆ ವೀಸಾಗೆ ಅರ್ಜಿ ಸಲ್ಲಿಸಿ ಸರಿಯಾದ ದಾಖಲಾತಿಗಳನ್ನ ಒದಗಿಸಿದ್ರೆ 10 ದಿನಗಳ ಒಳಗೆ ವೀಸಾ ಸಿಗುತ್ತದೆ.  ಇಲ್ಲಿ ಸುತ್ತಾಡಬೇಕೆಂದ್ರೆ ಒಬ್ಬ ವ್ಯಕ್ತಿಗೆ 1 ವಾರಕ್ಕೆ ಸುಮಾರು 20-25 ಸಾವಿರ ಬೇಕಾಗುತ್ತದೆ.

 

ಕಾಂಗರೋಗಳ ನಾಡು… ಹಚ್ಚ ಹಸಿರಿಂದ ಕಂಗೊಳಿಸುವ ಸುಂದರ ದೇಶ.. ಆಸ್ಟ್ರೇಲಿಯಾ ಬಗ್ಗೆ INTERSTING FACTS

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd