Droupadi murmu : ರಾಷ್ಟ್ರಪತಿಗಳ ಪಾದ ಸ್ಪರ್ಶಿಸಲು ಯತ್ನಿಸಿದ್ದ ಮಹಿಳಾ ಇಂಜಿನಿಯರ್ ಅಮಾನತು…
ಜನವರಿ 4 ರಂದು ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಶಿಷ್ಟಾಚಾರವನ್ನ ಉಲ್ಲಂಘಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪಾದಗಳನ್ನ ಸ್ಪರ್ಶಿಸಲು ಯತ್ನಿಸಿದ್ದ ಆರೋಪದಲ್ಲಿ ರಾಜಸ್ಥಾನದ ಸರ್ಕಾರದ ಮಹಿಳಾ ಇಂಜಿನಿಯರ್ ಅವರನ್ನ ಶುಕ್ರವಾರ ಅಮಾನತುಗೊಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವಾಲಯ ಮಧ್ಯ ಪ್ರವೇಶಿಸಿ ಪಬ್ಲಿಕ್ ಹೆಲ್ತ ಇಂಜಿನಿಯರ್ ಅವರನ್ನ ಅಮಾನತು ಮಾಡಲಾಗಿದೆ. ಜನವರಿ ರೋಹೆತ್ ನಡೆದ ಸ್ಕೌಟ್ಸ್ ಅಂಡ್ ಗೈಡ್ ಜಾಂಬೂರಿಯಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಿರಿಯ ಎಂಜಿನಿಯರ್ ಅಂಬಾ ಸಿಯೋಲ್ ಅವರು ರಾಷ್ಟ್ರಪತಿಗಳ ಪಾದ ಸ್ಪರ್ಶಿಸಿ ಆಶಿರ್ವಾದ ಪಡೆಯಲು ಯತ್ನಿಸಿದ್ದರು.
ರಾಜಸ್ಥಾನದ ಸಾರ್ವಜನಿಕ ಸೇವಾ ನಿಯಮಗಳ ಅಡಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಅವರನ್ನ ಅಮಾನತುಗೊಳಿಸಲಾಗಿದೆ. ರಾಷ್ಟ್ರಪತಿಗಳ ಸ್ವಾಗತದ ವೇಳೆ ಅಧಿಕಾರಿಗಳ ಭದ್ರತಾ ಕವಚವನ್ನ ಭೇಧಿಸಿ ಪಾದ ಮುಟ್ಟಲು ಯತ್ನಿಸಿದ್ದರು. ಈವೇಳೇ ಅಧ್ಯಕ್ಷರ ಭದ್ರತಾ ಸಿಬ್ಬಂದಿ ತಡೆದರು. ಕೇಂದ್ರ ಗೃಹ ಸಚಿವಾಲಯ ಘಟನೆಯನ್ನ ಗಂಭೀರವಾಗಿ ಪರಿಗಣಿಸಿ ಭದ್ರತೆಯಲ್ಲಿ ಗಂಭೀರ ಲೋಪ ಎಂದು ಪರಿಗಣಿಸಿ ರಾಜಸ್ಥಾನ ಪೊಲೀಸರಿಂದ ವರದಿ ಕೇಳಿದೆ.
Droupadi murmu : Govt engineer suspended for security breach for attempting to touch President Murmu’s feet during Rajasthan event