ಕೆಜಿ ಹಳ್ಳಿ ಪೊಲೀಸರು ನೈಜೀರಿಯನ್ ಮೂಲದ ಡ್ರಗ್ ಪೆಡ್ಲರ್ ನನ್ನ ಬಂಧಿಸಿದ್ದಾರೆ.. ನೈಜಿರಿಯಾ ಮೂಲದ ನೆಲ್ಸನ್ ಬಂಧಿತ ಆರೋಪಿಯಾಗಿದ್ದಾನೆ.
ಇಂಟರ್ನೆಟ್, ವಾಟ್ಸಪ್ ಕಾಲ್ ಮೂಲಕ ಗಿರಾಕಿಗಳ ಈತ ಸಂಪರ್ಕ ಮಾಡ್ತಿದ್ದ.. ಆನ್ ಲೈನ್ ಮೂಲಕ ಹಣ ಪಡೆದು ಡ್ರಗ್ಸ್ ಅಡಗಿಸಿಟ್ಟ ಲೊಕೇಷನ್ ಕಳಿಸ್ತಿದ್ದ. ನಿರ್ಜನ ಪ್ರದೇಶದ ಪೊದೆ-ಮರ-ಗಿಡಗಳ ಬಳಿ ಡ್ರಗ್ಸ್ ತಂದಿಟ್ಟು ವಿದ್ಯಾರ್ಥಿಗಳು ಮತ್ತು ಟೆಕ್ಕಿಸ್ ಗೆ ಲೊಕೇಷನ್ ಹಾಕ್ತಿದ್ದ.
ಡ್ರಗ್ಸ್ ಇಟ್ಟಿರೋ ಸ್ಥಳದ ಫೋಟೋ ತೆಗೆದು ಕನ್ಸ್ಯೂಮ್ ಮಾಡೋರ ಮೊಬೈಲ್ ಗೆ ಕಳುಹಿಸ್ತಿದ್ದ. ಇಂಜಿನಿಯರಿಂಗ್, ಮೆಡಿಕಲ್ ಸ್ಟೂಡೆಂಟ್ ಗಳೇ ಈತನ ಟಾರ್ಗೆಟ್ ಆಗಿದ್ದರು,,, ಗ್ರಾಹಕರಾಗಿದ್ದರು. ಸದ್ಯ ಬಂಧಿತನಿಂದ 25 ಲಕ್ಷ ರೂ ಮೌಲ್ಯದ MDMA ಟ್ಯಾಬ್ಲೆಟ್ಸ್ ವಶಕ್ಕೆ ಪಡೆಯಲಾಗಿದೆ. ಕೆಜಿ ಹಳ್ಳಿ ಇನ್ಸ್ ಪೆಕ್ಟರ್ ಸಂತೋಷ್ ಟೀಂನಿಂದ ಖತರ್ನಾಕ್ ಪೆಡ್ಲರ್ ಅರೆಸ್ಟ್ ಮಾಡಲಾಗಿದೆ.